Asian Games 2023: ಕಾಂಬೋಡಿಯಾ ಬಗ್ಗುಬಡಿದು ಶುಭಾರಂಭ ಮಾಡಿದ ಭಾರತ ವಾಲಿಬಾಲ್ ತಂಡ

By Kannadaprabha News  |  First Published Sep 20, 2023, 9:36 AM IST

ಭಾರತ ವಾಲಿಬಾಲ್ ತಂಡವು 1962ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದೇ ಇಲ್ಲಿಯವರೆಗಿನ ಶ್ರೇಷ್ಠ ಪ್ರದರ್ಶನ  ಎನಿಸಿಕೊಂಡಿದೆ. ಇನ್ನು 1958 ಹಾಗೂ 1986ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ವಾಲಿಬಾಲ್ ತಂಡವು ಮೂರನೇ ಸ್ಥಾನ ಪಡೆದಿದ್ದು, ಇದುವರೆಗೂ ಚಾಂಪಿಯನ್ ಪಟ್ಟ ಅಲಂಕರಿಸಲು ಸಾಧ್ಯವಾಗಿಲ್ಲ.


ಹಾಂಗ್ಝೂ(ಚೀನಾ): 19ನೇ ಏಷ್ಯನ್‌ ಗೇಮ್ಸ್‌ಗೆ ಸೆ.23ರಂದು ಅಧಿಕೃತವಾಗಿ ಚಾಲನೆ ಸಿಗಲಿದೆಯಾದರೂ, ಕೆಲ ಸ್ಪರ್ಧೆಗಳು ಮಂಗಳವಾರವೇ ಆರಂಭಗೊಂಡವು. ಭಾರತ ಪುರುಷರ ವಾಲಿಬಾಲ್‌ ಹಾಗೂ ಫುಟ್ಬಾಲ್‌ ತಂಡಗಳು ತಮ್ಮ ಅಭಿಯಾನ ಆರಂಭಿಸಿದವು.

ವಾಲಿಬಾಲ್‌ ‘ಸಿ’ ಗುಂಪಿನ ಪಂದ್ಯದಲ್ಲಿ ಕಾಂಬೋಡಿಯಾ ವಿರುದ್ಧ ಭಾರತ 3-0 (25-14, 25-13, 25-19) ಅಂತರದಲ್ಲಿ ಜಯ ಗಳಿಸಿತು. ಬುಧವಾರ ತಂಡಕ್ಕೆ ವಿಶ್ವ ನಂ.27 ದಕ್ಷಿಣ ಕೊರಿಯಾದಿಂದ ಕಠಿಣ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಸ್ಪರ್ಧೆಯಲ್ಲಿ ಒಟ್ಟು 19 ತಂಡಗಳಿದ್ದು, ಒಟ್ಟು 6 ಗುಂಪುಗಳಿವೆ. ಪ್ರತಿ ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಅಂತಿಮ 12ರ ಸುತ್ತಿಗೆ ಪ್ರವೇಶಿಸಲಿವೆ.

Latest Videos

undefined

ಭಾರತ ವಾಲಿಬಾಲ್ ತಂಡವು 1962ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದೇ ಇಲ್ಲಿಯವರೆಗಿನ ಶ್ರೇಷ್ಠ ಪ್ರದರ್ಶನ  ಎನಿಸಿಕೊಂಡಿದೆ. ಇನ್ನು 1958 ಹಾಗೂ 1986ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ವಾಲಿಬಾಲ್ ತಂಡವು ಮೂರನೇ ಸ್ಥಾನ ಪಡೆದಿದ್ದು, ಇದುವರೆಗೂ ಚಾಂಪಿಯನ್ ಪಟ್ಟ ಅಲಂಕರಿಸಲು ಸಾಧ್ಯವಾಗಿಲ್ಲ.

ಇದೇ ವೇಳೆ ಪುರುಷರ ಫುಟ್ಬಾಲ್‌ನಲ್ಲಿ ‘ಎ’ ಗುಂಪಿನಲ್ಲಿರುವ ಭಾರತ ತಂಡ ಚೀನಾ ವಿರುದ್ಧ 1-5 ಗೋಲುಗಳ ಸೋಲು ಅನುಭವಿಸಿತು. ಅನುಭವಿ ಆಟಗಾರರಾದ ಸುನಿಲ್‌ ಚೆಟ್ರಿ ಹಾಗೂ ಸಂದೇಶ್‌ ಝಿಂಗನ್‌ ಜೊತೆ ಸಂಪೂರ್ಣ ಯುವ ತಂಡವನ್ನು ಕೂಟಕ್ಕೆ ಕಳುಹಿಸಿರುವ ಭಾರತ, ಗುಂಪು ಹಂತದಲ್ಲಿ ಕೊನೆಯ 2 ಪಂದ್ಯಗಳನ್ನು ಗೆದ್ದು ಪ್ರಿ ಕ್ವಾರ್ಟರ್‌ ಪ್ರವೇಶಿಸುವ ವಿಶ್ವಾಸದಲ್ಲಿದೆ. ಸೆ.21ಕ್ಕೆ ಬಾಂಗ್ಲಾದೇಶ, ಸೆ.24ಕ್ಕೆ ಮ್ಯಾನ್ಮಾರ್‌ ಎದುರಾಗಲಿವೆ.

ಬುದ್ಧ್ ಸರ್ಕ್ಯೂಟ್‌ನಲ್ಲಿ ಮೊದಲ ಮೋಟೋ ಜಿಪಿಗೆ ಸಿದ್ಧತೆ: ನೀವು ತಿಳಿದುಕೊಳ್ಳಬೇಕಿರೋ ಮಾಹಿತಿ ಇಲ್ಲಿದೆ..

ಬುಧವಾರ ಭಾರತ ಇನ್ನಷ್ಟು ಸ್ಪರ್ಧೆಗಳಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ರೋಯಿಂಗ್‌, ಟೇಬಲ್‌ ಟೆನಿಸ್‌, ಪುರುಷರ ಹಾಕಿ ಸ್ಪರ್ಧೆಗಳು ಶುರುವಾಗಲಿವೆ. ಭಾರತ ಹಾಕಿ ತಂಡಕ್ಕೆ ಮೊದಲ ಪಂದ್ಯದಲ್ಲಿ ಉಜ್ಬೇಕಿಸ್ತಾನ ಎದುರಾಗಲಿದ್ದು, ಪುರುಷರ ವಾಲಿಬಾಲ್‌ ತಂಡ ಕೊರಿಯಾ ಸವಾಲನ್ನು ಸ್ವೀಕರಿಸಲಿದೆ.

ಶೂಟಿಂಗ್ ವಿಶ್ವಕಪ್‌: ನಿಶ್ಚಲ್‌ಗೆ ಬೆಳ್ಳಿ ಪದಕ

ರಿಯೋ ಡಿ ಜನೈರೋ(ಬ್ರೆಜಿಲ್‌): ಭಾರತದ 19 ವರ್ಷದ ಶೂಟರ್‌ ನಿಶ್ಚಲ್‌, ಸೋಮವಾರ(ಸೆ.18) ಮುಕ್ತಾಯಗೊಂಡ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದರು. ಮಹಿಳೆಯರ 50 ಮೀ. ರೈಫಲ್‌ 3 ಪೊಸಿಷನ್‌ ಸ್ಪರ್ಧೆಯಲ್ಲಿ ನಿಶ್ಚಲ್‌ 2ನೇ ಸ್ಥಾನ ಪಡೆದರು. ನಾರ್ವೆಯ ಜಿಯಾನೆಟ್‌ ಹೆಗ್ ಚಿನ್ನ ಜಯಿಸಿದರು. ಕೂಟವನ್ನು ಭಾರತ ಒಂದು ಚಿನ್ನ ಹಾಗೂ ಒಂದು ಬೆಳ್ಳಿಯೊಂದಿಗೆ ಮುಕ್ತಾಯಗೊಳಿಸಿತು. ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಇಳವೆನಿಲ್‌ ಚಿನ್ನ ಗೆದ್ದಿದ್ದರು.

click me!