ಬುಧವಾರ 3 ಚಿನ್ನ ಸೇರಿ 11 ಪದಕ ಬಾಚಿದ ಭಾರತ, ಪದಕ ಗಳಿಕೆಯನ್ನು 81ಕ್ಕೆ ಏರಿಸಿತು. ಇದು 1951ರಿಂದ ಶುರುವಾದ ಏಷ್ಯಾಡ್‌ನಲ್ಲಿ ಭಾರತದ ಆವೃತ್ತಿಯೊಂದರ ಶ್ರೇಷ್ಠ ಸಾಧನೆ. 2018ರಲ್ಲಿ ಪಡೆದಿದ್ದ 70 ಪದಕಗಳ ದಾಖಲೆ ಈ ಬಾರಿ ಪತನಗೊಂಡಿತು. ಸದ್ಯ ಭಾರತ 18 ಚಿನ್ನ, 31 ಬೆಳ್ಳಿ, 32 ಕಂಚು ಜಯಿಸಿದ್ದು, ಪಟ್ಟಿಯಲ್ಲಿ 4ನೇ ಸ್ಥಾನ ಭದ್ರಪಡಿಸಿಕೊಂಡಿದೆ.
ಹಾಂಗ್‌ಝೋ(ಅ.05): ಏಷ್ಯನ್ ಗೇಮ್ಸ್‌ನ ಸಾರ್ವಕಾಲಿಕ ದಾಖಲೆಯನ್ನು ಮುರಿಯಬೇಕೆಂಬ ದೃಢ ನಿರ್ಧಾರದೊಂದಿಗೇ ಈ ಬಾರಿ ಚೀನಾಕ್ಕೆ ತೆರಳಿದ್ದ ಭಾರತೀಯ ಅಥ್ಲೀಟ್‌ಗಳು, ಕೂಟ ಮುಕ್ತಾಯಕ್ಕೆ ಇನ್ನೂ 3 ದಿನ ಬಾಕಿ ಇರುವಾಗಲೇ ಅದನ್ನು ಸಾಧಿಸಿದ್ದಾರೆ. ಬುಧವಾರ 3 ಚಿನ್ನ ಸೇರಿ 11 ಪದಕ ಬಾಚಿದ ಭಾರತ, ಪದಕ ಗಳಿಕೆಯನ್ನು 81ಕ್ಕೆ ಏರಿಸಿತು. ಇದು 1951ರಿಂದ ಶುರುವಾದ ಏಷ್ಯಾಡ್‌ನಲ್ಲಿ ಭಾರತದ ಆವೃತ್ತಿಯೊಂದರ ಶ್ರೇಷ್ಠ ಸಾಧನೆ. 2018ರಲ್ಲಿ ಪಡೆದಿದ್ದ 70 ಪದಕಗಳ ದಾಖಲೆ ಈ ಬಾರಿ ಪತನಗೊಂಡಿತು. ಸದ್ಯ ಭಾರತ 18 ಚಿನ್ನ, 31 ಬೆಳ್ಳಿ, 32 ಕಂಚು ಜಯಿಸಿದ್ದು, ಪಟ್ಟಿಯಲ್ಲಿ 4ನೇ ಸ್ಥಾನ ಭದ್ರಪಡಿಸಿಕೊಂಡಿದೆ.
ನೀರಜ್ ಬಂಗಾರ ಬೇಟೆಗಿಲ್ಲ ಬ್ರೇಕ್: ಕಿಶೋರ್‌ಗೆ ರಜತ!
undefined
ಭಾರತೀಯರದ್ದೇ ಸ್ಪರ್ಧೆ ಎಂಬಂತಿದ್ದ ಪುರುಷರ ಜಾವೆಲಿನ್ ಎಸೆತದಲ್ಲಿ ಯಾರ ನಿರೀಕ್ಷೆಯೂ ಹುಸಿಗೊಳಿಸದೆ ನೀರಜ್ ಚೋಪ್ರಾ ಮತ್ತೆ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಅವರಿಗೆ ಪ್ರಬಲ ಪೈಪೋಟಿ ನೀಡಿದ ಕಿಶೋರ್ ಜೆನಾ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 2018ರಲ್ಲೂ ಚಿನ್ನ ಜಯಿಸಿದ್ದ ನೀರಜ್, ಈ ಬಾರಿ 4ನೇ ಪ್ರಯತ್ನದಲ್ಲಿ 88.88 ಮೀ. ದೂರ ದಾಖಲಿಸಿ ಚಾಂಪಿಯನ್ ಪಟ್ಟ ತಮ್ಮಲ್ಲೇ ಉಳಿಸಿಕೊಂಡರು. 2ನೇ ಪ್ರಯತ್ನದಲ್ಲಿ 84.49 ಮೀ. ದಾಖಲಿಸಿದ್ದ ನೀರಜ್‌ರನ್ನು, ತಮ್ಮ 3ನೇ ಪ್ರಯತ್ನದಲ್ಲಿ 86.77 ಮೀ. ದೂರಕ್ಕೆಸೆದ ಕಿಶೋರ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದರು. ಬಳಿಕ 4ನೇ ಪ್ರಯತ್ನದಲ್ಲಿ 87.54 ಮೀ. ದೂರ ದಾಖಲಿಸಿದರೂ ಕಿಶೋರ್ 2ನೇ ಸ್ಥಾನಿಯಾದರು. ಜಪಾನ್‌ನ ಡೀನ್ ರೋಡ್ರಿಕ್ (82.68 ಮೀ.) ಕಂಚು ಜಯಿಸಿದರು. ಈ ಮೂವರನ್ನು ಹೊರತುಪಡಿಸಿ ಬೇರೆಯಾರೂ 80ಮೀ. ಗಡಿ ದಾಟಲಿಲ್ಲ. ಇತ್ತೀಚೆಗಷ್ಟೇ ವಿಶ್ವ ಅಥ್ಲೆಟಿಕ್ಸ್‌ನಲ್ಲಿ 84.77 ಮೀಟರ್‌ನೊಂದಿಗೆ 5ನೇ ಸ್ಥಾನಿಯಾಗಿದ್ದ ಒಡಿಶಾದ ಕಿಶೋರ್‌ಗೆ ಇದು ಮೊದಲ ಅಂತಾರಾಷ್ಟ್ರೀಯ ಪದಕ.
Asian Games 2023 ದಕ್ಷಿಣ ಕೊರಿಯ ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ..!
ಚೀನಾ ರೆಫ್ರಿಗಳಿಂದ ಭಾರತೀಯರಿಗೆ ‘ಮೋಸ’ ?
ಅಥ್ಲೆಟಿಕ್ಸ್‌ನಲ್ಲಿ ಪದಕ ಗೆಲ್ಲುವ ಭಾರತೀಯ ಅಥ್ಲೀಟ್‌ಗಳನ್ನು ಚೀನಾದ ಅಧಿಕಾರಿಗಳು, ರೆಫ್ರಿಗಳು ‘ಟಾರ್ಗೆಟ್’ ಮಾಡುತ್ತಿದ್ದಾರೆಯೇ?. ಅಭಿಮಾನಿಗಳಲ್ಲಿ ಹೀಗೊಂದು ಅನುಮಾನ ಶುರುವಾಗಿದ್ದು, ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್‌ನ ಉಪಾಧ್ಯಕ್ಷೆ, ದಿಗ್ಗಜ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಸಹ ಚೀನಿಯರು ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ ಜ್ಯೋತಿ ಯರ್ರಾಜಿ ಸ್ಪರ್ಧೆ ವೇಳೆ ಗೊಂದಲ ಸೃಷ್ಟಿಸಿದ್ದ ರೆಫ್ರಿಗಳು ಬುಧವಾರ ಜಾವೆಲಿನ್ ಎಸೆತದಲ್ಲೂ ಎಡವಟ್ಟು ಮಾಡಿದರು.
Asian Games 2023: ಜೈ ಹೋ ನೀರಜ್, ಮತ್ತೆ ಚಿನ್ನ ಗೆದ್ದ ಜಾವಲಿನ್ ಹೀರೋ..! ಕಿಶೋರ್‌ಗೆ ಬೆಳ್ಳಿ ಕಿರೀಟ
ನೀರಜ್ ತಮ್ಮ ಮೊದಲ ಎಸೆತವನ್ನು ಅಂದಾಜು 88+ ಮೀ. ದೂರಕ್ಕೆಸೆದರೂ ತಾಂತ್ರಿಕ ಕಾರಣ ನೀಡಿ ಮರು ಯತ್ನ ಮಾಡುವಂತೆ ಸೂಚಿಸಿದರು. ಅಧಿಕಾರಿಗಳ ಈ ನಡೆ ನೀರಜ್‌ರನ್ನು ಸ್ವಲ್ಪ ಕಾಲ ವಿಚಲಿತಗೊಳಿಸಿದರೂ, ಭಾರತದ ಚಾಂಪಿಯನ್ ಅಥ್ಲೀಟ್ ಚಿನ್ನ ಗೆಲ್ಲುವುದನ್ನು ತಪ್ಪಿಸಲಾಗಲಿಲ್ಲ. ಕಿಶೋರ್‌ರ ಯತ್ನವನ್ನೂ ಲೈನ್ ಜಡ್ಜ್ ತಪ್ಪಾಗಿ ಫೌಲ್ ಎಂದು ಘೋಷಿಸಿದರು. ಕಿಶೋರ್ ಹಾಗೂ ನೀರಜ್ ಇಬ್ಬರೂ ಪ್ರತಿಭಟಿಸಿದ ಬಳಿಕ ತೀರ್ಪು ಬದಲಾಯಿತು. ಇದೇ ವೇಳೆ ಲಾಂಗ್ ಜಂಪ್ ಫೈನಲ್‌ನಲ್ಲಿ ಮುರಳಿ ಶ್ರೀಶಂಕರ್ ನೆಗೆದ ದೂರವನ್ನೂ ಸರಿಯಾಗಿ ಅಳತೆ ಮಾಡಿಲ್ಲ ಎನ್ನುವ ಆರೋಪಗಳು ಸಹ ಭಾರತೀಯ ಅಧಿಕಾರಿಗಳಿಂದ ಕೇಳಿಬರುತ್ತಿದೆ.
61 ವರ್ಷ ಬಳಿಕ ರಿಲೇ ತಂಡಕ್ಕೆ ಚಿನ್ನ!
ಭಾರತದ ಪುರುಷರ 4*400 ಮೀ. ರಿಲೇ ತಂಡ 1962ರ ಬಳಿಕ ಚಿನ್ನದ ಪದಕ ಹೆಕ್ಕಿದೆ. ಮೊಹಮದ್ ಅನಸ್, ಅಮೊಲ್ ಜಾಕೊಬ್, ಮೊಹಮದ್ ಅಜ್ಮಲ್, ರಾಜೇಶ್ ರಮೇಶ್ ಅವರಿದ್ದ ತಂಡ ರಾಷ್ಟ್ರೀಯ ದಾಖಲೆ (3 ನಿಮಿಷ 01.58 ಸೆಕೆಂಡ್) ಯೊಂದಿಗೆ ನಿರೀಕ್ಷೆಯಂತೆಯೇ ಸ್ವರ್ಣ ಸಾಧನೆ ಮಾಡಿತು. ಇತ್ತೀಚೆಗಷ್ಟೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ರಿಲೇ ತಂಡ ಐತಿಹಾಸಿಕ 5ನೇ ಸ್ಥಾನ ಪಡೆದಿತ್ತು.
ಇದೇ ವೇಳೆ ಮಹಿಳೆಯರ 4*400 ಮೀ. ರಿಲೇ ತಂಡ ಬೆಳ್ಳಿ ಸಂಪಾದಿಸಿತು. ವಿದ್ಯಾ ರಾಮರಾಜ್, ಐಶ್ವರ್ಯಾ, ಪ್ರಾಚಿ, ಶುಭಾ ಇದ್ದ ತಂಡ 3 ನಿಮಿಷ 27.85 ಸೆಕೆಂಡ್‌ಗಳಲ್ಲಿ ಕ್ರಮಿಸಿ, ರಾಷ್ಟ್ರೀಯ ದಾಖಲೆಯೊಂದಿಗೆ ಪದಕ ಗಳಿಸಿತು.