Asian Games 2023: ಅಥ್ಲೆಟಿಕ್ಸ್‌ನಲ್ಲಿ ಕಳೆದ ಸಲದ ದಾಖಲೆ ಮುರಿಯುತ್ತಾ ಭಾರತ?

By Kannadaprabha News  |  First Published Sep 29, 2023, 10:42 AM IST

ಜಾವೆಲಿನ್‌ನಲ್ಲಿ ನೀರಜ್‌, ಶಾಟ್‌ಪುಟ್‌ನಲ್ಲಿ ತಜೀಂದರ್‌ ಪಾಲ್‌, 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್‌ ಸಾಬ್ಳೆ, ಪುರುಷರ ಹಾಗೂ ಮಹಿಳೆಯರ 4X400 ಮೀ. ರಿಲೇ ತಂಡಗಳು ಏಷ್ಯನ್‌ ದಾಖಲೆ ಹೊಂದಿದ್ದಾರೆ. ಉಳಿದಂತೆ ಪುರುಷರ ಲಾಂಗ್‌ಜಂಪ್‌ನಲ್ಲಿ ಜೆಸ್ವಿನ್‌ ಆ್ಯಲ್ಡ್ರಿನ್‌, ಮುರಳಿ ಶ್ರೀಶಂಕರ್‌ ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್‌ಗಳು ಎನಿಸಿದ್ದಾರೆ


ಹಾಂಗ್ಝೂ(ಸೆ.29): ಭಾರತಕ್ಕೆ ಏಷ್ಯಾಡ್‌ನಲ್ಲಿ ಈ ವರೆಗೂ ಅತಿಹೆಚ್ಚು ಪದಕ ಅಥ್ಲೆಟಿಕ್ಸ್‌ನಿಂದಲೇ ಬಂದಿದೆ. ಶುಕ್ರವಾರ ಅಥ್ಲೆಟಿಕ್ಸ್‌ ಸ್ಪರ್ಧೆಗಳು ಆರಂಭಗೊಳ್ಳಲಿದ್ದು, ಕಳೆದ ಆವೃತ್ತಿಯಲ್ಲಿ 8 ಚಿನ್ನ ಸೇರಿ ಒಟ್ಟು 20 ಪದಕ ಗೆದ್ದಿದ್ದ ಭಾರತ ಈ ಸಲ ಆ ದಾಖಲೆಯನ್ನು ಮುರಿಯಲು ಎದುರು ನೋಡುತ್ತಿದೆ. ಒಲಿಂಪಿಕ್‌, ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ 65 ಅಥ್ಲೀಟ್‌ಗಳ ಭಾರತ ತಂಡವನ್ನು ಮುನ್ನಡೆಸಲಿದ್ದು, ಈ ಬಾರಿ ಕನಿಷ್ಠ 25 ಪದಕ ನಿರೀಕ್ಷಿಸಲಾಗುತ್ತಿದೆ ಎಂದು ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್‌(ಎಎಫ್‌ಐ) ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

ಜಾವೆಲಿನ್‌ನಲ್ಲಿ ನೀರಜ್‌, ಶಾಟ್‌ಪುಟ್‌ನಲ್ಲಿ ತಜೀಂದರ್‌ ಪಾಲ್‌, 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್‌ ಸಾಬ್ಳೆ, ಪುರುಷರ ಹಾಗೂ ಮಹಿಳೆಯರ 4X400 ಮೀ. ರಿಲೇ ತಂಡಗಳು ಏಷ್ಯನ್‌ ದಾಖಲೆ ಹೊಂದಿದ್ದಾರೆ. ಉಳಿದಂತೆ ಪುರುಷರ ಲಾಂಗ್‌ಜಂಪ್‌ನಲ್ಲಿ ಜೆಸ್ವಿನ್‌ ಆ್ಯಲ್ಡ್ರಿನ್‌, ಮುರಳಿ ಶ್ರೀಶಂಕರ್‌, ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಶೈಲಿ ಸಿಂಗ್‌, ಪುರುಷರ ಟ್ರಿಪಲ್‌ ಜಂಪ್‌ನಲ್ಲಿ ಪ್ರವೀಣ್‌ ಚಿತ್ರವೇಲ್‌, ಪುರುಷರ ಡೆಕಥ್ಲಾನ್‌ನಲ್ಲಿ ತೇಜಸ್ವಿನ್‌ ಶಂಕರ್‌, ಮಹಿಳೆಯರ ಹೆಪ್ಟಾಥ್ಲಾನ್‌ನಲ್ಲಿ ಸಪ್ನಾ ಬರ್ಮನ್‌, ಮಹಿಳೆಯರ 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ಪಾರುಲ್‌ ಚೌಧರಿ, ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಜ್ಯೋತಿ ಯರ್ರಾಜಿ, ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ವಿದ್ಯಾ ರಾಮರಾಜ್‌, ಪುರುಷರ 1500 ಮೀ. ಓಟದಲ್ಲಿ ಅಜಯ್‌ ಸರೋಜ್‌ ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್ಸ್‌ ಎನಿಸಿದ್ದಾರೆ.

Latest Videos

undefined

ಬೆಳ್ಳಿ ಗೆದ್ದ ರಾಮ್‌ಕುಮಾರ್‌ ರಾಮನಾಥನ್‌-ಸಾಕೇತ್‌ ಮೈನೇನಿ ಜೋಡಿ

ಸ್ಕ್ವ್ಯಾಶ್‌: ಭಾರತಕ್ಕೆ 2 ಪದಕ ಖಚಿತ

ಭಾರತ ಪುರುಷ ಹಾಗೂ ಮಹಿಳಾ ಸ್ಕ್ವ್ಯಾಶ್‌ ತಂಡಗಳು ಸೆಮಿಫೈನಲ್‌ ಪ್ರವೇಶಿಸಿದ್ದು, ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿವೆ. ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಪುರುಷರ ತಂಡ ನೇಪಾಳ ವಿರುದ್ಧ 3-0 ಅಂತರದಲ್ಲಿ ಜಯಿಸಿ ಅಂತಿಮ-4 ಸುತ್ತಿಗೇರಿತು. ಮಹಿಳಾ ತಂಡ ಅಂತಿಮ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 0-3ರಲ್ಲಿ ಸೋತರೂ, ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಸೆಮೀಸ್‌ಗೇರಿತು.

ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಭಾರತ ಮಹಿಳಾ ತಂಡ ಲಗ್ಗೆ

ಭಾರತ ಮಹಿಳಾ ಬ್ಯಾಡ್ಮಿಂಟನ್‌ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಗುರುವಾರ ಮಂಗೋಲಿಯಾ ವಿರುದ್ಧ 3-0 ಸುಲಭ ಜಯ ಸಾಧಿಸಿತು. ಪಿ.ವಿ.ಸಿಂಧು ತಮ್ಮ ಎದುರಾಳಿ ಗನ್ಬಾತರ್‌ ವಿರುದ್ಧ 21-3, 21-3ರಲ್ಲಿ ಗೆದ್ದರೆ, 2ನೇ ಸಿಂಗಲ್ಸ್‌ನಲ್ಲಿ ಅಶ್ಮಿತಾ 21-2, 21-3ರಲ್ಲಿ ಖೆರ್ಲೆನ್‌ ವಿರುದ್ಧ ಗೆದ್ದರು. 3ನೇ ಸಿಂಗಲ್ಸ್‌ನಲ್ಲಿ ಅನುಪಮಾ ಉಪಾಧ್ಯಾಯ 21-0, 21-2ರಲ್ಲಿ ಖುಲಾಂಗೋ ವಿರುದ್ಧ ಜಯಭೇರಿ ಬಾರಿಸಿದರು. ಕ್ವಾರ್ಟರ್‌ನಲ್ಲಿ ಭಾರತಕ್ಕೆ ಬಲಿಷ್ಠ ಥಾಯ್ಲೆಂಡ್‌ ಎದುರಾಗಲಿದೆ.

ಅಶ್ವಿನ್ ಇನ್, ಅಕ್ಸರ್ ಪಟೇಲ್ ಔಟ್, ವಿಶ್ವಕಪ್ ಟೂರ್ನಿಗೆ ಅಂತಿಮ ತಂಡ ಪ್ರಕಟ!

ರಾಜ್ಯ ಕಿರಿಯರ ಅಥ್ಲೆಟಿಕ್ಸ್‌: 3 ಹೊಸ ಕೂಟ ದಾಖಲೆ

ಬೆಂಗಳೂರು: ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಆಯೋಜಿಸುತ್ತಿರುವ ರಾಜ್ಯ ಕಿರಿಯರ ಹಾಗೂ ಅಂಡರ್‌-20 ಅಥ್ಲೆಟಿಕ್ಸ್‌ ಕೂಟದ 2ನೇ ದಿನವಾದ ಗುರುವಾರ ಮೂರು ಹೊಸ ಕೂಟ ದಾಖಲೆಗಳು ನಿರ್ಮಾಣವಾದವು. ಬಾಲಕರ ಅಂಡರ್‌-20 ವಿಭಾಗದ 10000 ಮೀ. ಓಟದಲ್ಲಿ ಹಾವೇರಿಯ ಶಿವಾಜಿ ಪಿ. 30 ನಿಮಿಷ 34.90 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ತಮ್ಮ ಹೆಸರಲ್ಲೇ ಇದ್ದ ದಾಖಲೆ (31 ನಿಮಿಷ 34.3 ಸೆಕೆಂಡ್‌)ಯನ್ನು ಉತ್ತಮಗೊಳಿಸಿಕೊಂಡರು. 

ಬಾಲಕರ ಅಂಡರ್‌-23 ವಿಭಾಗದ 10000 ಮೀ. ಓಟದಲ್ಲಿ ಯಾದಗಿರಿಯ ವೈಭವ್‌ 32 ನಿಮಿಷ 17 ಸೆಕೆಂಡ್‌ಗಳಲ್ಲಿ ಓಟ ಪೂರ್ತಿಗೊಳಿಸಿ ತಮ್ಮ ಹೆಸರಲ್ಲೇ ಇದ್ದ ದಾಖಲೆ(32 ನಿಮಿಷ 39 ಸೆಕೆಂಡ್‌)ಯನ್ನು ಉತ್ತಮಗೊಳಿಸಿದರು. ಇನ್ನು ಬಾಲಕರ ಅಂಡರ್‌-16 ಶಾಟ್‌ಪುಟ್‌ನಲ್ಲಿ ಉಡುಪಿಯ ಅನುರಾಗ್‌ 16.86 ಮೀ. ದೂರಕ್ಕೆ ಗುಂಡು ಎಸೆದು ಗಣೇಶ್‌ ನಾಯ್ಕ್‌(15.68 ಮೀ.) ಹೆಸರಲ್ಲಿದ್ದ ದಾಖಲೆ ಮುರಿದರು.
 

click me!