ಏಷ್ಯನ್ ಗೇಮ್ಸ್ ಮೆಲುಕು: ಚೊಚ್ಚಲ ಕ್ರೀಡಾಕೂಟಕ್ಕೆ ದೆಹಲಿ ಆತಿಥ್ಯ

Published : Aug 14, 2018, 12:35 PM ISTUpdated : Sep 09, 2018, 10:21 PM IST
ಏಷ್ಯನ್ ಗೇಮ್ಸ್ ಮೆಲುಕು: ಚೊಚ್ಚಲ ಕ್ರೀಡಾಕೂಟಕ್ಕೆ ದೆಹಲಿ ಆತಿಥ್ಯ

ಸಾರಾಂಶ

ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಆಗಸ್ಟ್ 18 ರಿಂದ ಆರಂಭಗೊಳ್ಳಲಿರುವ ಅತೀ ದೊಡ್ಡ ಕ್ರೀಡಾಹಬ್ಬಕ್ಕೆ ಭಾರತ ಈಗಾಗಲೇ ಇಂಡೋನೇಷ್ಯಾದ ಜಕರ್ತಾದಲ್ಲಿ ಬೀಡುಬಿಟ್ಟಿದೆ. ಈ ವರೆಗೆ 17 ಏಷ್ಯನ್ ಗೇಮ್ಸ್ ಆಯೋಜಿಸಲಾಗಿದೆ. ಆರಂಭಿಕ 4 ಕ್ರೀಡಾಕೂಟದ ಸಂಕ್ಷಿಪ್ತ ವಿವರ ಇಲ್ಲಿದೆ. 

ಬೆಂಗಳೂರು(ಆ.14):  ಮೊದಲ ಏಷ್ಯನ್ ಗೇಮ್ಸ್ ನಡೆದಿದ್ದು 1951ರಲ್ಲಿ. ನವದೆಹಲಿ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿತ್ತು. 11 ರಾಷ್ಟ್ರಗಳು ಪಾಲ್ಗೊಂಡಿದ್ದವು. ಜಪಾನ್ 60 ಪದಕಗಳೊಂದಿಗೆ ಮೊದಲ ಸ್ಥಾನ ಪಡೆಯಿತು. 15 ಚಿನ್ನ ಸೇರಿ 51 ಪದಕ ಪಡೆದ ಭಾರತ 2ನೇ ಸ್ಥಾನ ಪಡೆದುಕೊಂಡಿತು.

1954: 2ನೇ ಏಷ್ಯನ್ ಗೇಮ್ಸ್1954ರಲ್ಲಿ ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆಯಿತು. 19 ರಾಷ್ಟ್ರಗಳು ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿದ್ದವು. 98 ಪದಕಗಳೊಂದಿಗೆ ಸತತ 2ನೇ ಬಾರಿಗೆ ಜಪಾನ್ ಮೊದಲ ಸ್ಥಾನ ಪಡೆಯಿತು. 5 ಚಿನ್ನ, 4 ಬೆಳ್ಳಿ, 8 ಕಂಚಿನೊಂದಿಗೆ 17 ಗೆದ್ದ ಭಾರತ 5ನೇ ಸ್ಥಾನ ಪಡೆದುಕೊಂಡಿತು.

1958 : 3ನೇ ಆವೃತ್ತಿಯ ಏಷ್ಯನ್ ಗೇಮ್ಸ್ 1958 ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ನಡೆಯಿತು. 20 ರಾಷ್ಟ್ರಗಳು ಪಾಲ್ಗೊಂಡಿದ್ದವು. 67 ಚಿನ್ನ ಸೇರಿ 138 ಪದಕ ಗೆದ್ದ ಜಪಾನ್ ಮೊದಲ ಸ್ಥಾನ ಪಡೆದು ಹ್ಯಾಟ್ರಿಕ್ ಬಾರಿಸಿತು. 5ಚಿನ್ನ, ತಲಾ 4 ಬೆಳ್ಳಿ ಹಾಗೂ ಕಂಚಿನೊಂದಿಗೆ ಒಟ್ಟು 13 ಪದಕ ಗೆದ್ದ ಭಾರತ 7ನೇ ಸ್ಥಾನ ಪಡೆಯಿತು.

1962 : ಇಂಡೋನೇಷ್ಯಾದ ಜಕಾರ್ತ 1962ರಲ್ಲಿ 4ನೇ ಆವೃತ್ತಿಯ ಗೇಮ್ಸ್‌ಗೆ ಆತಿಥ್ಯ ವಹಿಸಿತು. 17 ರಾಷ್ಟ್ರಗಳು ಕಣಕ್ಕಿಳಿದಿದ್ದವು. ಜಪಾನ್ 152 ಪದಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡರೆ, 33 ಪದಕ ಗೆದ್ದ ಭಾರತ 3ನೇ ಶ್ರೇಷ್ಠ ರಾಷ್ಟ್ರವಾಗಿ ಹೊರಹೊಮ್ಮಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪತ್ನಿ ಜೊತೆ ಪ್ರೇಮಾನಂದ ಮಹಾರಾಜ್ ಭೇಟಿಯಾದ ಕೊಹ್ಲಿ, ಕಣ್ಣೀರಿಟ್ಟ ಅನುಷ್ಕಾ
ಐಪಿಎಲ್ ಹರಾಜು: ವಿದೇಶಿ ಆಟಗಾರರ ಸಂಬಳಕ್ಕೆ ಬ್ರೇಕ್; ಫಾರೀನ್ ಆಟಗಾರರಿಗೆ ಗರಿಷ್ಠ ಸಿಗೋ ಸ್ಯಾಲರಿ ಇಷ್ಟೇ!