
ಸಿಡ್ನಿ(ಆ.14): ವೃತ್ತಿಪರ ಫುಟ್ಬಾಲರ್ ಆಗುವ ಕಾತರದಲ್ಲಿರುವ ಜಮೈಕಾದ ವೇಗಿ ಉಸೇನ್ ಬೋಲ್ಟ್, ಆ.14 ರಂದು ಆಸ್ಟ್ರೇಲಿಯಾ ಫುಟ್ಬಾಲ್ ಕ್ಲಬ್ ಸೆಂಟ್ರಲ್ ಕೋಸ್ಟ್ ಮರೈನರ್ಸ್‌ಗೆ ಸೇರ್ಪಡೆಗೊಳ್ಳಲಿದ್ದಾರೆ. ಕ್ಲಬ್ ಸೇರ್ಪಡೆ ಒಪ್ಪಂದದಲ್ಲಿ ಉಸೇನ್ ಬೋಲ್ಟ್ ಕೇವಲ ಒಂದೇ ಬೇಡಿಕೆ ಇಟ್ಟಿದ್ದಾರೆ.
ದಿಗ್ಗಜ ಕ್ರೀಡಾಪಟು ಉಸೇನ್ ಬೋಲ್ಟ್ ಒಪ್ಪಂದದಲ್ಲಿ ‘ಬೋಲ್ಟ್ ಯಾವುದೇ ದುಬಾರಿ ಬೇಡಿಕೆಗಳನ್ನು ನಮ್ಮ ಮುಂದಿಟ್ಟಿಲ್ಲ. ಕಪ್ಪು ಬಣ್ಣದ ಕಾರ್‌ವೊಂದನ್ನು ಒದಗಿಸಲು
ಕೇಳಿದ್ದಾರೆ. ಉಳಿದಂತೆ ತಂಡದ ಆಟಗಾರರಿಗೆ ಸಿಗುವ ಸೌಲಭ್ಯಗಳೇ ಬೋಲ್ಟ್‌ಗೂ ಸಿಗಲಿದೆ’ ಎಂದು ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.
‘ಬೋಲ್ಟ್ ಫುಟ್ಬಾಲಿಗನಾಗುವತ್ತ ಬಹಳ ಗಂಭೀರವಾಗಿ ಗಮನ ಹರಿಸುತ್ತಿದ್ದಾರೆ. ಖಾಸಗಿ ರಕ್ಷಕರು, ಕಾರು ಚಾಲಕ, ವೈದ್ಯ ಇಲ್ಲವೇ ಫಿಸಿಯೋ, ದುಬಾರಿ ಹೋಟೆಲ್
ಕೊಠಡಿ ಇದ್ಯಾವುದಕ್ಕೂ ಬೇಡಿಕೆಯಿಟ್ಟಿಲ್ಲ. ಬೋಲ್ಟ್ ಬೇಡಿಕೆಯನ್ನ ಈಡೇರಿಸಲಿದ್ದೇವೆ.’ ಎಂದು ಕ್ಲಬ್ ಮುಖ್ಯಸ್ಥರು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.