ಕೊಹ್ಲಿ ಬಾಲ್ಯದ ಕೋಚ್ ಹೆಗಲಿಗೆ ಮಹಿಳಾ ತಂಡದ ಜವಾಬ್ದಾರಿ?

By Web DeskFirst Published Aug 14, 2018, 12:19 PM IST
Highlights

ಟೀಂ ಇಂಡಿಯಾ ಮಹಿಳಾ ತಂಡದ ಕೋಚ್ ಆಯ್ಕೆ ಅಂತಿಮ ಘಟ್ಟ ತಲುಪಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ಹೆಗಲಿಗೆ ಮಹಿಳಾ ತಂಡದ ಕೋಚಿಂಗ್ ಜವಾಬ್ದಾರಿ ನೀಡ್ತಾರ? ಇಲ್ಲ ಕನ್ನಡಿಗರಿಗೆ ಸಿಗುತ್ತಾ ಮಹಿಳಾ ತಂಡ ಕೋಚ್ ಸ್ಥಾನ? ಇಲ್ಲಿದೆ.

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ನೇಮಕಗೊಳ್ಳುವ ಸಾಧ್ಯತೆ ಇದೆ. ಕಳೆದ ಶುಕ್ರವಾರ ಬಿಸಿಸಿಐ 20೦ ಸದಸ್ಯರ ಸಂದರ್ಶನ ನಡೆಸಿತ್ತು. 

ಪೈಪೋಟಿಯಲ್ಲಿರುವ ಅಂತಿಮ 6 ಸದಸ್ಯರ ಪಟ್ಟಿ ಬಹಿರಂಗಗೊಂಡಿದ್ದು, ರಾಜ್‌ಕುಮಾರ್ ಸಹ ಇದ್ದಾರೆ. 6 ಸದಸ್ಯರ ಪಟ್ಟಿಯಲ್ಲಿ ಕರ್ನಾಟಕದ ಮೂವರು ಸ್ಥಾನ ಪಡೆದಿರುವುದು ವಿಶೇಷ. ಸದ್ಯ ಬಾಂಗ್ಲಾದೇಶ ತಂಡದ ಸ್ಪಿನ್ ಕೋಚ್ ಆಗಿರುವ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ, ಭಾರತ ತಂಡದ ಮಾಜಿ ನಾಯಕಿ, ರಾಜ್ಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಮಮತಾ ಮಾಬೆನ್ ಹಾಗೂ ಕರ್ನಾಟಕ ಸೇರಿ ಹಲವು ರಣಜಿ ತಂಡಗಳ ಕೋಚ್ ಆಗಿ ಯಶಸ್ಸು ಸಾಧಿಸಿರುವ, ಹಾಲಿ ಭಾರತ ಅಂಡರ್-19 ತಂಡದ ಬೌಲಿಂಗ್ ಕೋಚ್ ಸನತ್ ಕುಮಾರ್ ಕೋಚ್ ಹುದ್ದೆಗೆ ಪೈಪೋಟಿ ನಡೆಸುತ್ತಿದ್ದಾರೆ. 

ಭಾರತ ಮಹಿಳಾ ತಂಡದ ಹಂಗಾಮಿ ಕೋಚ್ ರಮೇಶ್ ಪೊವಾರ್ ಹಾಗೂ ಮಾಜಿ ಕ್ರಿಕೆಟಿಗ ಅತುಲ್ ಬಡಾಡೆ ಸಹ ಸ್ಪರ್ಧೆಯಲ್ಲಿದ್ದಾರೆ. ಮುಂದಿನ ತಿಂಗಳು ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಐಸಿಸಿ ಏಕದಿನ ಚಾಂಪಿಯನ್‌ಶಿಪ್‌ನ ಭಾಗವಾಗಿರುವ ಸರಣಿಯಲ್ಲಿ ಆಡಲಿದೆ. ಅದಕ್ಕೂ ಮೊದಲು ನೂತನ ಕೋಚ್ ಅನ್ನು ಆಯ್ಕೆ ಮಾಡಲಿದೆ.

click me!