ಏಷ್ಯಾಕಪ್ 2018: ಟೀಂ ಇಂಡಿಯಾಗೆ ಖಲೀಲ್ ಅಹಮ್ಮದ್‌ಗೆ ಎಂಟ್ರಿ?

By Web DeskFirst Published Sep 17, 2018, 10:01 PM IST
Highlights

ಹಾಂಗ್ ಕಾಂಗ್ ವಿರುದ್ಧದ ಹೋರಾಟದೊಂದಿಗೆ ಭಾರತದ ಏಷ್ಯಾಕಪ್ ಪಯಣ ಆರಂಭಗೊಳ್ಳಲಿದೆ. ಮೊದಲ ಪಂದ್ಯಕ್ಕಾಗಿ ಟೀಂ ಇಂಡಿಯಾ ಅಂತಿಮ ಕಸರತ್ತು ನಡೆಸುತ್ತಿದೆ. ಇದೀಗ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಆಯ್ಕೆ ಹೆಚ್ಚು ಕುತೂಹಲ ಕೆರಳಿಸಿದೆ.

ದುಬೈ(ಸೆ.17): ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ ಹೋರಾಟ ನಡೆಸಲಿದೆ. ಸೆಪ್ಟೆಂಬರ್ 18 ರಂದು ಭಾರತ ಹಾಗೂ ಹಾಂಗ್ ಕಾಂಗ್ ನಡುವಿನ ಪಂದ್ಯ ಇದೀಗ ಭಾರಿ ಕುತೂಹಲ ಮೂಡಿಸಿದೆ. 

ಏಷ್ಯಾಕಪ್ ಟೂರ್ನಿಗೆ ಆಯ್ಕೆಯಾಗಿರೋ ಯುವ ವೇಗಿ ಖಲೀಲ್ ಅಹಮ್ಮದ್‌ಗೆ  ಮೊದಲ ಪಂದ್ಯದಲ್ಲಿ ಸ್ಥಾನ ಪಡೆಯೋ ಸಾಧ್ಯತೆ ಇದೆ. ಈ ಕುರಿತು ನಾಯಕ ರೋಹಿತ್ ಶರ್ಮಾ ಸೂಚನೆ ನೀಡಿದ್ದಾರೆ.

ಖಲೀಲ್ ಅಹಮ್ಮದ್ ವೇರಿಯೇಶನ್ , ಸ್ಪೀಡ್ ಹಾಗೂ ಪ್ರತಿಭೆ ತಂಡಕ್ಕೆ ನೆರವಾಗಲಿದೆ. ಹೀಗಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ರೋಹಿತ್ ಹೇಳಿದ್ದಾರೆ. ಖಲೀಲ್ ಅವಕಾಶ ಪಡೆದರೆ, ವೇಗಿಗಳ ಆಯ್ಕೆ ನಿಜಕಕ್ಕೂ ಕಗ್ಗಂಟಾಗಲಿದೆ.

ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿದರೆ, ಕೆಎಲ್ ರಾಹುಲ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸೋ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಮತ್ತೊರ್ವ ಕನ್ನಡಿಗ ಮನೀಶ್ ಪಾಂಡೆ ಅವಕಾಶ ಪಡೆಯೋ ಸಾಧ್ಯತೆ ಇದೆ. ಎಂ ಎಸ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ಸ್ಥಾನ ಖಚಿತ.

ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚೆಹಾಲ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಬಲಿಷ್ಠ ತಂಡವನ್ನ ಕಣಕ್ಕಿಳಿಸಿ ಪಾಕಿಸ್ತಾನ ವಿರುದ್ದದ ಪಂದ್ಯಕ್ಕೆ ರೈಟ್ ಕಾಂಬಿನೇಶ್ ಸೆಟ್ ಮಾಡಿಕೊಳ್ಳಲು ಟೀಂ ಇಂಡಿಯಾ ಮುಂದಾಗಿದೆ.

ಹಾಂಗ್ ಕಾಂಗ್ ಹೋರಾಟ ಭಾರತಕ್ಕೆ ಸುಲುಭ ಸವಾಲಾಗಿದ್ದರೂ, ಪಾಕ್ ವಿರುದ್ಧ ಪಂದ್ಯದ ದೃಷ್ಟಿಯಿಂದ ಮಹತ್ವ ಪಡೆಯಲಿದೆ. ಇದೀಗ ಎಲ್ಲರ ಚಿತ್ತ ಟೀಂ ಇಂಡಿಯಾ ಹನ್ನೊಂದರ ಬಳಗತ್ತ ನೆಟ್ಟಿದೆ.
 

click me!