
ಜಮ್ಮು-ಕಾಶ್ಮೀರ(ಸೆ.17): 2019ರ ಐಪಿಎಲ್ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಎಲ್ಲಾ ತಂಡಗಗಳು ತಯಾರಿ ಆರಂಭಿಸಿದೆ. ಆರ್‌ಸಿಬಿ ಹೊಸ ಕೋಚ್ ಹಾಗೂ ಸಪೂರ್ಟ್ ಸ್ಟಾಪ್ ನೇಮಕ ಮಾಡಿದರೆ, ಇತರ ತಂಡಗಳು ಕೆಲ ಬದಲಾವಣೆ ಮಾಡಿದೆ.
12ನೇ ಆವೃತ್ತಿ ಐಪಿಎಲ್ ಟೂರ್ನಿ ಸಿದ್ಧತೆ ನಡವೆಯೂ ಹೊಸ ತಂಡವೊಂದು ಚುಟುಕು ಟೂರ್ನಿ ಸೇರಿಕೊಳ್ಳಲು ತಯಾರಿ ಆರಂಭಿಸಿದೆ. ಹೌದು, ಎಲ್ಲವೂ ಅಂದುಕೊಂಡಂತೆ ನಡೆದರೆ ಜಮ್ಮ ಮತ್ತು ಕಾಶ್ಮೀರ ತಂಡ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ.
ಮುಂದಿನ ಐಪಿಎಲ್ ಟೂರ್ನಿಗೆ ಜಮ್ಮ ಮತ್ತು ಕಾಶ್ಮೀರ ತಂಡವನ್ನ ಸೇರಿಕೊಳ್ಳೋ ಕುರಿತು ಐಪಿಎಲ್ ಚೇರ್ಮಮೆನ್ ರಾಜೀವ್ ಶುಕ್ಲಾ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಜಮ್ಮು ಮತ್ತು ಕಾಶ್ಮೀರ ಗರ್ವನರ್ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ತಂಡವನ್ನ ಐಪಿಎಲ್ ಟೂರ್ನಿಗೆ ಸೇರಿಸಿಕೊಳ್ಳೋ ಮೂಲಕ ಶ್ರೀನಗರದಲ್ಲಿ ಐಪಿಎಲ್ ಟೂರ್ನಿಯ ಕೆಲ ಪಂದ್ಯ ಆಯೋಜಿಸುವ ಕುರಿತು ಶುಕ್ಲಾ ಜೊತೆ ಮಾತುಕತೆ ನಡೆಸಿದ್ದೇನೆ. ಈ ಕುರಿತು ಶೀಘ್ರದಲ್ಲೇ ಐಪಿಎಲ್ ಮ್ಯಾನೇಜ್ಮೆಂಟ್ ನಿರ್ಧಾರ ಕೈಗೊಳ್ಳೋ ಭರವಸೆ ಇದೆ ಎಂದು ಸತ್ಯಪಾಲ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಿಂದ ಈಗಾಗಲೇ ಮೂವರು ಕ್ರಿಕೆಟಿಗರು ಐಪಿಎಲ್ ಟೂರ್ನಿಯಲ್ಲಿ ಮಿಂಚಿದ್ದಾರೆ. ಆರ್‌ಸಿಬಿ ಹಾಗೂ ಟೀಂ ಇಂಡಿಯಾಗೂ ಆಯ್ಕೆಯಾಗಿದ್ದ ಪರ್ವೇಜ್ ರಸೂಲ್, ಕಳೆದ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಾಲಾದದ ಮನ್ಜೂರ್ ಅಹಮ್ಮದ್ ದಾರ್ ಹಾಗೂ ಜಮ್ಮ ಮತ್ತು ಕಾಶ್ಮೀರ ಮೂಲದ ಮಿಥುನ್ ಮನ್ಹಾಸ್ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.