ಏಷ್ಯಾಕಪ್ 2018: ಶ್ರೀಲಂಕಾ ಗೆಲುವಿಗೆ 250 ರನ್ ಟಾರ್ಗೆಟ್ ನೀಡಿದ ಆಫ್ಘಾನ್

By Web DeskFirst Published Sep 17, 2018, 8:57 PM IST
Highlights

ಏಷ್ಯಾಕಪ್ ಟೂರ್ನಿ 3ನೇ ದಿನದಲ್ಲಿ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡ ಹೋರಾಟ ನಡೆಸುತ್ತಿದೆ. ಲಂಕಾ ಸೋಲಿನಿಂದ ಹೊರಬರೋ ಯತ್ನದಲ್ಲಿದ್ದರೆ, ಆಫ್ಘಾನ್ ಶುಭಾರಂಭದ ವಿಶ್ವಾಸದಲ್ಲಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

ದುಬೈ(ಸೆ.17): ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಸೋಲು ಅನುಭವಿಸಿದ ಶ್ರೀಲಂಕಾ ಇದೀಗ ಅಫ್ಘಾನ್ ವಿರುದ್ಧವೂ 250 ರನ್ ಟಾರ್ಗೆಟ್ ಪಡೆದಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಅಫ್ಘಾನಿಸ್ತಾನ ಉತ್ತಮ ಆರಂಭ ಪಡೆಯಿತು. ಮೊಹಮ್ಮದ್ ಶೆಹಝಾದ್ 34 ರನ್ ಸಿಡಿಸಿ ಔಟಾದರು. ಈ ಮೂಲಕ ಆಫ್ಘಾನ್ ಆರಂಭಿಕರು 57 ರನ್ ಜೊತೆಯಾಟ ನೀಡಿದರು.

ಮತ್ತೊರ್ವ ಆರಂಭಿಕ ಇನ್ಶಾನುಲ್ಲಾ ಜನತ್ 45 ರನ್ ಕಾಣಿಕೆ ನೀಡಿದರು. ಆದರೆ ನಾಯಕ ಅಸ್ಗರ್ ಅಫ್ಘಾನ್ ಕೇವಲ 1ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಆದರೆ ರಹಮತ್ ಶಾ 72 ರನ್ ಸಿಡಿಸಿ ಆಫ್ಘಾನಿಸ್ತಾನ ತಂಡಕ್ಕೆ ಆಸರೆಯಾದರು. ಹಶ್ಮತುಲ್ಹಾ ಶಾಹಿದಿ 37 ಹಾಗೂ ಮೊಹಮ್ಮದ್ ನಬಿ 15 ರನ್ ಕಾಣಿಕೆ ನೀಡಿದರು.

ರಶೀದ್ ಖಾನಮ 13 ರನ್ ಸಿಡಿಸಿದರು. ಈ ಮೂಲಕ ಆಫ್ಘಾನಿಸ್ತಾನ 50 ಓವರ್‌ಗಳಲ್ಲಿ 249 ರನ್‌ಗೆ ಆಲೌಟ್ ಆಯಿತು. ಲಂಕಾ  ಪರ ತಿಸರಾ ಪರೇರಾ 5 ವಿಕೆಟ್ ಕಬಳಿಸಿ ಮಿಂಚಿದರು. ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡದ ಹೋರಾಟ ಜೀವಂತವಾಗಿರಲು ಈ ಪಂದ್ಯವನ್ನ ಗೆಲ್ಲಲೇಬೇಕಿದೆ.  

click me!