ಹಾಂಕಾಂಗ್ ಗೆಲುವಿಗೆ 286 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ

By Web DeskFirst Published Sep 18, 2018, 8:53 PM IST
Highlights

ಏಷ್ಯಾಕಪ್ ಟೂರ್ನಿಯಲ್ಲಿ ಹಾಂಕಾಂಗ್ ವಿರುದ್ಧ ಟೀಂ ಇಂಡಿಯಾ 285 ರನ್ ಸಿಡಿಸಿದೆ. ಹಾಂಕಾಂಗ್ ವಿರುದ್ದ ಟೀಂ ಇಂಡಿಯಾ ಬ್ಯಾಟಿಂಗ್ ಪ್ರದರ್ಶನ ಹೇಗಿತ್ತು. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.
 

ದುಬೈ(ಸೆ.18): ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತನ್ನ ಅಭಿಯಾನ ಆರಂಭಿಸಿದೆ. ಹಾಂಕಾಂಗ್ ವಿರುದ್ಧದ ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಭರ್ಜರಿ ಸೆಂಚುರಿ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 285 ರನ್ ಪೇರಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಶಿಖರ್ ಧವನ್ ಹಾಗೂ ನಾಯಕ ರೋಹಿತ್ ಶರ್ಮಾ 45 ರನ್‌ಗಳ ಜೊತೆಯಾಟ ನೀಡಿದರು. ರೋಹಿತ್ ಆಟ 23 ರನ್‌ಗಳಿಗೆ ಅಂತ್ಯವಾಯಿತು.

ಅಂಬಾಟಿ ರಾಯುಡು 60 ರನ್ ಕಾಣಿಕೆ ನೀಡಿದರೆ, ಶಿಖರ್ ಧವನ್ ಭರ್ಜರಿ ಸೆಂಚುರಿ ಸಿಡಿಸಿರು. ಧವನ್ 127 ರನ್ ಸಿಡಿಸಿ ಔಟಾದರು. ಆದರೆ ಎಂ.ಎಸ್ ಧೋನಿ ಶೂನ್ಯ ಸುತ್ತಿದರು. ದಿನೇಶ್ ಕಾರ್ತಿಕ್ 33 ರನ್ ನೀಡಿದರು. ಕೇದಾರ್ ಜಾಧವ್ ಅಜೇಯ 28 ರನ್  ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 285 ರನ್ ಸಿಡಿಸಿತು. ಇದೀಗ ಹಾಂಕಾಂಗ್ ಗೆಲುವಿಗೆ 286 ರನ್ ಸಿಡಿಸಬೇಕಿದೆ.

click me!
Last Updated Sep 19, 2018, 9:29 AM IST
click me!