ಹಾಂಕಾಂಗ್ ವಿರುದ್ದ ಟೀಂ ಇಂಡಿಯಾಗೆ ಪ್ರಯಾಸದ ಗೆಲುವು

Published : Sep 19, 2018, 01:04 AM IST
ಹಾಂಕಾಂಗ್ ವಿರುದ್ದ ಟೀಂ ಇಂಡಿಯಾಗೆ ಪ್ರಯಾಸದ ಗೆಲುವು

ಸಾರಾಂಶ

ಏಷ್ಯಾಕಪ್ ಟೂರ್ನಿಯನ್ನ ಟೀಂ ಇಂಡಿಯಾ ಪ್ರಯಾಸದ ಗೆಲುವಿನೊಂದಿಗೆ ಆರಂಭಿಸಿದೆ. ಕ್ರಿಕೆಟ್ ಶಿಶು ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರದರ್ಶನ ಹೇಗಿತ್ತು? ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತದ ಲೆಕ್ಕಾಚಾರ ಉಲ್ಟಾ ಹೊಡೆದದ್ದು ಎಲ್ಲಿ? ಇಲ್ಲಿದೆ ಪಂದ್ಯದ ಹೈಲೈಟ್ಸ್.

ದುಬೈ(ಸೆ.18): ಏಷ್ಯಾಕಪ್ ಟೂರ್ನಿಯ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಯಾಸದ ಗೆಲುವು ಸಾಧಿಸಿದೆ.  ಈ ಮೂಲಕ ಟೂರ್ನಿಯಲ್ಲಿ ರೋಹಿತ್ ಶರ್ಮಾ ಸೈನ್ಯ ಶುಭಾರಂಭ ಮಾಡಿದರೂ, ಪಾಕಿಸ್ತಾನ ವಿರುದ್ಧದ ಪಂದ್ಯ ಮತ್ತಷ್ಟು ಕಠಿಣವಾಗಲಿದೆ.

ಭಾರತ ವಿರುದ್ಧ ಗೆಲುವಿಗೆ 286 ರನ್ ಟಾರ್ಗೆಟ್ ಪಡೆದ ಹಾಂಕಾಂಗ್ ತಂಡಕ್ಕೆ ನಿಜಾಕತ್ ಖಾನ್ ಹಾಗೂ ಅಂಶುಮಾನ್ ರಾತ್ 174 ರನ್ ಜೊತೆಯಾಟ ನೀಡಿದರು. ಇದು ಟೆಸ್ಟ್ ಮಾನ್ಯತೆ ಪಡೆದ ದೇಶದ ವಿರುದ್ಧ ಹಾಂಕಾಂಗ್ ನೀಡಿದ ಗರಿಷ್ಠ ಜೊತೆಯಾಟ ಅನ್ನೋ ಹೆಗ್ಗಳಿಕೆಗೂ ಪಾತ್ರವಾಯಿತು.

ಆರಂಭಿಕರ ವಿಕೆಟ್‌ಗಾಗಿ ಟೀಂ ಇಂಡಿಯಾ ಪರದಾಡಿತು. ಒಂದು ಹಂತದಲ್ಲಿ ಹಾಂಕಾಂಗ್ ಸಂಪೂರ್ಣವಾಗಿ ಮೇಲುಗೈ ಸಾಧಿಸಿತ್ತು. ಇಷ್ಟೇ ಅಲ್ಲ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಅಂಶುಮಾನ್ 73 ರನ್ ಸಿಡಿಸಿ ಔಟಾದರೆ, ನಿಜಾಕತ್ 92 ರನ್ ಸಿಡಿಸಿ 8 ರನ್‌ಗಳಿಂದ ಶತಕ ವಂಚಿತರಾದರು. 

ಆರಂಭಿಕರ ವಿಕೆಟ್ ಪತನದ ಬಳಿಕ ಹಾಂಕಾಂಗ್ ಕುಸಿತ ಕಂಡಿತು. ಕ್ರಿಸ್ಟೋಪರ್ ಕಾರ್ಟರ್ 3 ರನ್ ಸಿಡಿಸಿ ಔಟಾದರು. 2 ಸಿಕ್ಸರ್ ಸಿಡಿಸಿ ಗುಡುಗಿದ ಬಾಬರ್ ಹಯಾತ್ 18 ರನ್ ಸಿಡಿಸಿ ಔಟಾದರು. ಕಿಂಚಿತ್ ಶಾ 17 ರನ್ ಕಾಣಿಕೆ ನೀಡಿದರು. ಐಜಾಜ್ ಖಾನ್ ಶೂನ್ಯ ಸುತ್ತಿದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Asian Gamesನಲ್ಲಿ ಹಿಂದಿನ ದಾಖಲೆ ಮುರಿಯತ್ತಾ ಭಾರತ? ಈ ಬಾರಿ ಗಳಿಸಿದ ಪದಕಗಳೆಷ್ಟು? ಫುಲ್​ ಡಿಟೇಲ್ಸ್​
RCB retention list: 13 ಸ್ಟಾರ್‍‌ಗಳನ್ನ ಉಳಿಸಿಕೊಂಡ ಆರ್‌ಸಿಬಿ, ನಾಲ್ವರಿಗೆ ಗೇಟ್‌ಪಾಸ್