
ದುಬೈ(ಸೆ.18): ಹಾಂಕಾಂಗ್ ವಿರುದ್ಧ ಸುಲುಭ ಗೆಲುವಿನ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾ ಇದೀಗ ಗೆಲುವಿಗಾಗಿ ಕಠಿಣ ಹೋರಾಟ ನಡೆಸುತ್ತಿದೆ. 174 ರನ್ ಜೊತೆಯಾಟದ ಮೂಲಕ ಭಾರತದ ಆತಂಕಕ್ಕೆ ಕಾರಣವಾಗಿದ್ದ ಹಾಂಕಾಂಗ್ ಆರಂಭಿಕರ ವಿಕೆಟ್ ಪತನಗೊಂಡಿದೆ. ಈ ಮೂಲಕ ಟೀಂ ಇಂಡಿಯಾ ನಿಟ್ಟುಸಿರುಬಿಟ್ಟಿದೆ.
ಗೆಲುವಿಗೆ 286 ರನ್ ಟಾರ್ಗೆಟ್ ಪಡೆದಿರುವ ಹಾಂಕಾಂಗ್ ತಂಡಕ್ಕೆ ನಿಜಾಕತ್ ಖಾನ್ ಹಾಗೂ ಅಂಶುಮಾನ್ ರಾತ್ 174 ರನ್ ಜೊತೆಯಾಟ ನೀಡಿದರು. ಅಂಶುಮಾನ್ 73 ರನ್ ಸಿಡಿಸಿದರೆ, ನಿಜಾಕತ್ 92 ರನ್ ಸಿಡಿಸಿ 8 ರನ್‌ಗಳಿಂದ ಶತಕ ವಂಚಿತರಾದರು.
ಆರಂಭಿಕರ ವಿಕೆಟ್ ಕಬಳಿಸಿದ ಟೀಂ ಇಂಡಿಯಾ ಇದೀಗ ಗೆಲುವಿಗಾಗಿ ಹೋರಾಟ ನಡೆಸುತ್ತಿದೆ. ಸದ್ಯ ಹಾಂಕಾಂಗ್ 2 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿದೆ. ಗೆಲುವಿಗೆ ಇನ್ನು 79 ಎಸೆತದಲ್ಲಿ 110 ರನ್‌ಗಳ ಅವಶ್ಯಕತೆ ಇದೆ.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 285 ರನ್ ಸಿಡಿಸಿತ್ತು. ಶಿಖರ್ ಧವನ್ 127 ಹಾಗೂ ಅಂಬಾಟಿ ರಾಯುಡು 60 ರನ್ ಕಾಣಿಕೆ ನೀಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.