
ಲಂಡನ್[ಆ.20]: ಕುತ್ತಿಗೆ ನೋವಿನಿಂದ ಬಳಲುತ್ತಿರುವ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಆಗಸ್ಟ್ 22ರಿಂದ ಆರಂಭವಾಗಲಿರು ಮೂರನೇ ಆ್ಯಷಸ್ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈ ವಿಚಾರವನ್ನು ಖಚಿತ ಪಡಿಸಿದೆ.
ಬೌನ್ಸರ್ ಎಸೆತಕ್ಕೆ ಗಾಯಗೊಂಡ ಸ್ಮಿತ್ ಪಂದ್ಯದಿಂದ ಔಟ್; ಜೋಫ್ರಾ ವಿರುದ್ಧ ಆಕ್ರೋಶ!
ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಜೋಫ್ರಾ ಆರ್ಚರ್ ಬೌಲಿಂಗ್ ವೇಳೆ ಸ್ಮಿತ್ ಗಾಯಗೊಂಡಿದ್ದರು. ಆರ್ಚರ್ ಎಸೆದ ಬೌನ್ಸರ್ ಸ್ಮಿತ್ ಕುತ್ತಿಗೆಗೆ ಬಡಿದಿತ್ತು. ನೋವು ತಾಳಲಾರದೇ ಸ್ಮಿತ್ ನೆಲಕ್ಕೆ ಉರುಳಿದ್ದರು. ಆ ಬಳಿಕ ಚೇತರಿಸಿಕೊಂಡು ಮತ್ತೆ ಕ್ರೀಸ್’ಗಿಳಿದರಾದರೂ ಹೆಚ್ಚು ಹೊತ್ತು ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಸ್ಮಿತ್ 92 ರನ್ ಬಾರಿಸಿ ಕ್ರಿಸ್ ವೋಕ್ಸ್’ಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಅನುಪಸ್ಥಿತಿಯಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಮಾರ್ನಸ್[59] ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು.
ಆ್ಯಷಸ್ ಕದನ: ಲಾರ್ಡ್ಸ್ ಟೆಸ್ಟ್ ಡ್ರಾನಲ್ಲಿ ಅಂತ್ಯ
ಸ್ಮಿತ್ ಆ್ಯಷಸ್ ಸರಣಿಯ ಮೊದಲ ಪಂದ್ಯದ ಎರಡು ಇನಿಂಗ್ಸ್’ಗಳಲ್ಲೂ 142 ಹಾಗೂ 144 ರನ್ ಬಾರಿಸಿ ಗಮನ ಸೆಳೆದಿದ್ದರು. ಎರಡನೇ ಪಂದ್ಯದಲ್ಲೂ ಕೇವಲ 8 ರನ್’ಗಳಿಂದ ಶತಕ ವಂಚಿತರಾಗಿದ್ದರು. ಆ್ಯಷಸ್ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಜಯಿಸುವುದರೊಂದಿಗೆ 1-0 ಮುನ್ನಡೆ ಕಾಯ್ದುಕೊಂಡಿತ್ತು. ಎರಡನೇ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಸರಣಿ ಸಮಬಲ ಸಾಧಿಸಲು ಇಂಗ್ಲೆಂಡ್ ಇದೀಗ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.