ಪಾಕಿಸ್ತಾನ ವೇಗಿ, ಭಾರತದ ವಿರುದ್ದ ಸದಾ ಅಪಸ್ವರ ಎತ್ತುವ ಹಸನ್ ಆಲಿ, ಇದೀಗ ಭಾರತದ ಹರ್ಯಾಣ ಮೂಲದ ಶಾಮಿಯಾ ಅರ್ಝೂ ಕೈ ಹಿಡಿದಿದ್ದಾರೆ. ದುಬೈನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಹಸನ್ ಆಲಿ, ಅರ್ಜೂ ಕೈ ಹಿಡಿದಿದ್ದಾರೆ.
ದುಬೈ(ಆ.20): ಪಾಕಿಸ್ತಾನ ವೇಗಿ, ವಾಘ ಗಡಿಯಲ್ಲಿ ಭಾರತೀಯ ಸೈನಿಕರ ಮುಂದೆ ಅತಿರೇಖದ ವರ್ತನೆ ತೋರಿ ವಿವಾದ ಸೃಷ್ಟಿಸಿದ ಕ್ರಿಕೆಟಿಗ ಇದೀಗ ಭಾರತದ ಶಾಮಿಯಾ ಅರ್ಝೂ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹರಿಯಾಣದ ಮೀವತ್ ಜಿಲ್ಲೆಯ ಶಾಮಿಯಾ ಅರ್ಝೂ ಹಾಗೂ ಹಸನ್ ಆಲಿ ನಡುವಿನ ಗೆಳೆತನ ಪ್ರೀತಿಯಾಗಿ, ಪ್ರೀತಿ ಇದೀಗ ಮದುವೆ ಅರ್ಥ ಪಡೆದಿದೆ.
A post shared by Da Artist Wedding Photography® (@daartistphoto) on Aug 19, 2019 at 10:13am PDT
ಇದನ್ನೂ ಓದಿ: ವಾಘಾ ಗಡಿಯಲ್ಲಿ ತೊಡೆ ತಟ್ಟಿದ್ದ ಹಸನ್ ಅಲಿಗೆ ಚಳಿ ಬಿಡಿಸಿದ ಪಾಕ್ ಕ್ರಿಕೆಟಿಗರು..!
ದುಬೈನ ಪಾಮ್ ಜುಮೇರಾದ ಬಟೂಟಾ ಮಾಲ್‌ನಲ್ಲಿ ಹಸನ್ ಆಲಿ ಹಾಗೂ ಶಾಮಿಯಾ ವಿವಾಹ ಮಹೋತ್ಸವ ನೇರವೇರಿತು. ಹಸನ್ ಆಲಿ ಕುಟಂಬಸ್ಥರು, ಆಪ್ತರು ಹಾಗೂ ಶಾಮಿಯಾ ಪೋಷಕರು ಹಾಗೂ ಕುಟಂಬಸ್ಥರು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಗಸ್ಟ್ 18ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ಶಾಮಿಯಾ ಪೋಷಕರು ದುಬೈಗೆ ತೆರಳಿದ್ದರು.
ಇದನ್ನೂ ಓದಿ: ಪಾಕ್ ವೇಗಿ ಹಸನ್ ಆಲಿ ಸಂಭ್ರಮಾಚರಣೆ ಅರ್ಧಕ್ಕೆ ಕಟ್!
ದುಬೈ ಎಮಿರೈಟ್ಸ್‌ನಲ್ಲಿ ಉದ್ಯೋಗಿಯಾಗಿರುವ ಶಾಮಿಯಾ ಅರ್ಝೂ, ಪಾಕಿಸ್ತಾನ ಕ್ರಿಕೆಟಿಗ ಹಸನ್ ಆಲಿ ಜೊತೆ ವರ್ಷಗಳ ಹಿಂದೆ ಪರಿಚಯವಾಗಿದೆ. ಬಳಿಕ ಆತ್ಮೀಯರಾದ ಇವರಿಬ್ಬರು ಮುದೆವೆಯಾಗಲು ನಿರ್ಧರಿಸಿದ್ದಾರೆ. ಕುಟುಂಬಸ್ಥರ ಒಪ್ಪಿಗೆ ಪಡೆದ ಯುವ ಜೋಡಿ ಇದೀಗ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
ವಾಘಾ ಗಡಿಯಲ್ಲಿ ಸೈನಿಕರ ರಿಟ್ರೀಟ್ ಸೆಲೆಬ್ರೇಷನ್ ವೇಳೆ ಹಸನ್ ಆಲಿ ಅತಿರೇಖದಿಂದ ವರ್ತಿಸಿದ್ದರು. ರಿಟ್ರೀಟ್ ಸೆಲೆಬ್ರೇಷನ್ ವೇಳೆ ಭಾರತೀಯ ಸೈನಿಕರ ಮುಂದೆ ತೊಡೆ ತಟ್ಟಿದ್ದರು. ನಿಯಮ ಮೀರಿ ವರ್ತಿಸಿ ಹಸನ್ ಆಲಿ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಕೂಡ ಹಸನ್ ಆಲಿ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದರು.
ಇದೀಗ ಹಸನ್ ಆಲಿ ಭಾರತೀಯ ಹುಡಿಯನ್ನು ವರಿಸಿದ್ದಾರೆ. ಈ ಮೂಲಕ ಭಾರತೀಯ ಮೂಲದವರನ್ನು ಮದುವೆಯಾಗುತ್ತಿರುವ 4ನೇ ಪಾಕ್ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಹಸನ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಶೋಯಿಬ್ ಮಲ್ಲಿಕ್, ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ವರಿಸಿದ್ದಾರೆ. ಜಹೀರ್ ಅಬ್ಬಾಸ್ ಹಾಗೂ ಮೊಹ್ಸಿನ್ ಹಸನ್ ಖಾನ್ ಭಾರತೀಯರನ್ನು ಮದುವೆಯಾಗಿದ್ದಾರೆ.