ಇಂಗ್ಲೆಂಡ್ ಕ್ರಿಕೆಟ್ ತಂಡದ ಸೂಪರ್ ಹೀರೋ, ವಿಶ್ವಕಪ್ ಗೆಲುವಿನ ಸವ್ಯಸಾಚಿ ಬೆನ್ ಸ್ಟೋಕ್ಸ್ ಏಕಾಂಗಿ ಹೋರಾಟದ ಮೂಲಕ ಇಂಗ್ಲೆಂಡ್ ತಂಡಕ್ಕೆ ಆ್ಯಷಸ್ ಸರಣಿಯಲ್ಲಿ ಒಂದು ವಿಕೆಟ್‌ನ ರೋಚಕ ಗೆಲುವು ತಂದಿತ್ತಿದ್ದಾರೆ. ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿ ನಿಲ್ಲುವಂತೆ ಮಾಡಿದ್ದ ಈ ಪಂದ್ಯ ಹಲವರ ಕಣ್ಣಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ಪಂದ್ಯ ಹೇಗಿತ್ತು..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್...
ಲೀಡ್ಸ್(ಆ.25): ಯಾವ ಟಿ20 ಕ್ರಿಕೆಟ್’ಗೂ ಕಡಿಮೆ ಇರದಂತಹ ರೋಚಕತೆ, ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ ಕೆಚ್ಚೆದೆಯ ಹೋರಾಟ ಮತ್ತೊಮ್ಮೆ ಇಂಗ್ಲೆಂಡ್ ತಂಡಕ್ಕೆ 1 ವಿಕೆಟ್’ಗಳ ರೋಚಕ ಜಯ ಸಿಕ್ಕಿದೆ. ಆ್ಯಷಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ 359 ರನ್‌ಗಳ ಗುರಿಯನ್ನು ಮುಟ್ಟಲು ಯಶಸ್ವಿಯಾಗಿದೆ.
ಆ್ಯಷಸ್ ಕದನ: ಲೀಡ್ಸ್ ಟೆಸ್ಟ್‌ನಲ್ಲಿ ಇತಿಹಾಸ ಬರೆಯುತ್ತಾ ಇಂಗ್ಲೆಂಡ್..?
undefined
ಅಜೇಯ 135 ರನ್ ಸಿಡಿಸಿದ ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ಸ್ಮರಣೀಯ ಗೆಲುವು ತಂದಿತ್ತರು. ಕೊನೆಯ ವಿಕೆಟ್‌ಗೆ ಮುರಿಯದ 76 ರನ್’ಗಳ ಜತೆಯಾಟವಾಡುವ ಮೂಲಕ ಆಸ್ಟ್ರೇಲಿಯಾ ಎದುರು ವಿರೋಚಿತ ಗೆಲುವು ತಂದಿತ್ತರು. ಇದರೊಂದಿಗೆ ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ 1-1ರ ಸಮಬಲ ಸಾಧಿಸಿತು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 67 ರನ್’ಗಳಿಗೆ ಆಲೌಟ್ ಆದರೂ ಪಂದ್ಯ ಗೆಲ್ಲಬಹುದು ಎನ್ನುವುದನ್ನು ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಸಾಬೀತುಪಡಿಸಿದೆ.
ಡೇನಿಸ್ ಲಿಲ್ಲಿ ದಾಖಲೆ ಅಳಿಸಿ ಹಾಕಿದ ನೇಥನ್ ಲಯನ್..!
ಆಸ್ಟ್ರೇಲಿಯಾ ನೀಡಿದ್ದ 359 ರನ್‌ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ಮೂರನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತ್ತು. ಆತಿಥೇಯರು ಗೆಲ್ಲಲು ಇನ್ನೂ 202 ರನ್’ಗಳ ಅವಶ್ಯಕತೆಯಿತ್ತು. ನಾಲ್ಕನೇ ದಿನದಾಟದ ಆರಂಭದಲ್ಲೇ ಇಂಗ್ಲೆಂಡ್ ನಾಯಕ ರೂಟ್ ವಿಕೆಟ್ ಕಳೆದುಕೊಂಡಿತು. ತಮ್ಮ ಖಾತೆಗೆ ಕೇವಲ 2 ರನ್ ಸೇರಿಸಿ ನೇಥನ್ ಲಯನ್ ಬೌಲಿಂಗ್’ನಲ್ಲಿ ಡೇವಿಡ್ ವಾರ್ನರ್ ಹಿಡಿದ ಅದ್ಭುತ ಕ್ಯಾಚ್’ಗೆ ಪೆವಿಲಿಯನ್ ಸೇರಬೇಕಾಯಿತು. ಆದರೆ ಆ ಬಳಿಕ ಜತೆಯಾದ ಬೆನ್ ಸ್ಟೋಕ್ಸ್- ಜಾನಿ ಬೇರ್’ಸ್ಟೋ ಜೋಡಿ 86 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡದ ಮೊತ್ತವನ್ನು 240ರ ಗಡಿ ದಾಟಿಸಿದರು. ಉತ್ತಮ ಬ್ಯಾಟಿಂಗ್ ಆಡುವ ಮುನ್ಸೂಚನೆ ನೀಡಿದ್ದ ಬೇರ್’ಸ್ಟೋ 36 ರನ್ ಬಾರಿಸಿ ಜೋಸ್ ಹ್ಯಾಜಲ್’ವುಡ್’ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಜೋಸ್ ಬಟ್ಲರ್[01] ಹಾಗೂ ಕ್ರಿಸ್ ವೋಕ್ಸ್[01] ಪೆವಿಲಿಯನ್ ಪರೇಡ್ ನಡೆಸಿದಾಗ ಇಂಗ್ಲೆಂಡ್ ಅಭಿಮಾನಿಗಳ ಮನದಲ್ಲಿ ಆತಂಕದ ಕಾರ್ಮೋಡ ಮನೆಮಾಡಿತ್ತು. ಇದಾದ ಬಳಿಕ ಜೋಫ್ರಾ ಆರ್ಚರ್ ಜತೆ ಸ್ಟೋಕ್ಸ್ 25 ರನ್‌ಗಳ ಜತೆಯಾಟವಾಡುವುದರೊಂದಿಗೆ ತಂಡದ ಮೊತ್ತವನ್ನು 280ರತ್ತ ಕೊಂಡ್ಯೊಯ್ದರು. ಆರ್ಚರ್ ಬಲಿ ಪಡೆದ ಲಯನ್ ಮತ್ತೆ ಆಸೀಸ್’ಗೆ ಯಶಸ್ಸು ಒದಗಿಸಿಕೊಟ್ಟರು. ಇದರ ಬೆನ್ನಲ್ಲೇ ಸ್ಟುವರ್ಟ್ ಬ್ರಾಡ್ ಕೂಡಾ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದಾಗ ಆಸ್ಟ್ರೇಲಿಯಾ ಆಟಗಾರರು ಪಂದ್ಯ ಗೆದ್ದಂತೆ ಸಂಭ್ರಮಿಸಿದರು.
ಎದೆ ಮುಟ್ಟಿಕೊಂಡು ಹೇಳುತ್ತೇನೆ, ನಾನು ಅಂಪೈರ್‌ಗೆ ಹಾಗೆ ಹೇಳಿಲ್ಲ: ಬೆನ್ ಸ್ಟೋಕ್ಸ್
ಆಸೀಸ್’ಗೆ ಶಾಕ್ ಕೊಟ್ಟ ಸ್ಟೋಕ್ಸ್: ಇಂಗ್ಲೆಂಡ್ ತಂಡದ 9ನೇ ವಿಕೆಟ್ ಬಿದ್ದಾಗ 286 ರನ್’ಗಳಾಗಿದ್ದವು. ಇನ್ನೂ ಇಂಗ್ಲೆಂಡ್’ಗೆ ಗೆಲ್ಲಲು ಬರೋಬ್ಬರಿ 73 ರನ್’ಗಳ ಅವಶ್ಯಕತೆಯಿತ್ತು. ಈ ವೇಳೆ ಜ್ಯಾಕ್ ಲೀಚ್ ಜತೆ ಅಮೋಘ ಇನಿಂಗ್ಸ್ ಕಟ್ಟಿದ ಸ್ಟೋಕ್ಸ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಬೆನ್ ಸ್ಟೋಕ್ಸ್ 219 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಆಕರ್ಷಕ ಸಿಕ್ಸರ್’ಗಳ ನೆರವಿನಿಂದ ಅಜೇಯ 135 ರನ್ ಬಾರಿಸಿ ಇಂಗ್ಲೆಂಡ್ ಗೆಲುವಿನ ರೂವಾರಿ ಎನಿಸಿದರು. 10ನೇ ವಿಕೆಟ್’ಗೆ 76 ರನ್’ಗಳ ಜತೆಯಾಟದಲ್ಲಿ ಸ್ಟೋಕ್ಸ್ ಬಾರಿಸಿದ್ದು ಬರೋಬ್ಬರಿ 74 ರನ್’ಗಳಾದರೆ, ಲೀಚ್ ಬಾರಿಸಿದ್ದು ಕೇವಲ 1 ರನ್ ಮಾತ್ರ.
ಅಂಕಿ-ಆಟ:
* 359 ರನ್ ಚೇಸ್- ಇಂಗ್ಲೆಂಡ್ ನೆಲದಲ್ಲಿ ನಾಲ್ಕನೇ ಇನಿಂಗ್ಸ್’ನಲ್ಲಿ ಯಶಸ್ವಿಯಾಗಿ ಗುರಿ ಮುಟ್ಟಿದ ಗರಿಷ್ಠ ಮೊತ್ತ.
* 76* ನಾಲ್ಕನೇ ಇನಿಂಗ್ಸ್’ನಲ್ಲಿ 10ನೇ ವಿಕೆಟ್’ಗೆ ಮೂಡಿಬಂದ ಎರಡನೇ ಗರಿಷ್ಠ ಜತೆಯಾಟ.
* 1922/23ರ ಬಳಿಕ ಇಂಗ್ಲೆಂಡ್ ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್’ನಲ್ಲಿ ಒಂದು ವಿಕೆಟ್’ಗಳ ರೋಚಕ ಜಯ ಸಾಧಿಸಿದೆ.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 179&246
ಇಂಗ್ಲೆಂಡ್: 67&362/9