ಬಾಂಗ್ಲಾ ವನಿತೆಯರ ಯಶಸ್ಸಿನ ಹಿಂದೆ ಭಾರತದ ಮಾಜಿ ಆಟಗಾರ್ತಿ

First Published Jun 12, 2018, 11:48 AM IST
Highlights

6 ಬಾರಿ ಚಾಂಪಿಯನ್ ಬಲಿಷ್ಠ ‘ಭಾರತವನ್ನು ಮಣಿಸುವ ಮೂಲಕ ಭಾನುವಾರ, ಚೊಚ್ಚಲ ಬಾರಿಗೆ ಮಹಿಳಾ ಏಷ್ಯಾಕಪ್ ಟಿ-20 ಕಿರೀಟ ಮುಡಿಗೇರಿಸಿಕೊಂಡ ಬಾಂಗ್ಲಾದೇಶದ ಯಶಸ್ಸಿನ ಹಿಂದೆ ‘ಭಾರತದ ಮಾಜಿ ಆಟಗಾರ್ತಿಯ ಪಾತ್ರವಿದೆ. 

ಢಾಕಾ[ಜೂ.12]: 6 ಬಾರಿ ಚಾಂಪಿಯನ್ ಬಲಿಷ್ಠ ‘ಭಾರತವನ್ನು ಮಣಿಸುವ ಮೂಲಕ ಭಾನುವಾರ, ಚೊಚ್ಚಲ ಬಾರಿಗೆ ಮಹಿಳಾ ಏಷ್ಯಾಕಪ್ ಟಿ-20 ಕಿರೀಟ ಮುಡಿಗೇರಿಸಿಕೊಂಡ ಬಾಂಗ್ಲಾದೇಶದ ಯಶಸ್ಸಿನ ಹಿಂದೆ ‘ಭಾರತದ ಮಾಜಿ ಆಟಗಾರ್ತಿಯ ಪಾತ್ರವಿದೆ. 

ಕೇವಲ 3 ವಾರಗಳ ಹಿಂದೆಯಷ್ಟೇ ತಂಡದ ಕೋಚ್ ಆಗಿ ನೇಮಕಗೊಂಡ ಅನುಜಾ ಜೈನ್, ಅಲ್ಪ ಅವಧಿಯಲ್ಲಿ ಜಾದೂ ಪ್ರದರ್ಶಿಸಿದ್ದಾರೆ. ಕಳೆದ ತಿಂಗಳು ದ.ಆಫ್ರಿಕಾ ವಿರುದ್ಧದ ಏಕದಿನ ಹಾಗೂ ಟಿ-20 ಸರಣಿಯಲ್ಲಿ ಬಾಂಗ್ಲಾ ವೈಟ್‌ವಾಶ್ ಆಗಿತ್ತು. ಇದಾದ ಬಳಿಕ ಕೋಚ್ ಡೇವಿಡ್ ಕೇಪಲ್‌ರನ್ನು ಕೈಬಿಟ್ಟು, ಮೇ 21ರಂದು ‘ಭಾರತ ತಂಡದ ಮಾಜಿ ವಿಕೆಟ್ ಕೀಪರ್, ಅನುಜಾರನ್ನು ಕೋಚ್ ಸ್ಥಾನಕ್ಕೆ ನೇಮಕ ಮಾಡಿಕೊಂಡಿತ್ತು.

The Celebration!

Photo : Asian Cricket Council pic.twitter.com/1hZQoT2JIt

— Bangladesh Cricket (@BCBtigers)

ಇದನ್ನು ಓದಿ: ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ ಬಾಂಗ್ಲಾದೇಶ ಮಹಿಳಾ ಪಡೆ

ಬಲಿಷ್ಠ ಭಾರತ ತಂಡವನ್ನು ಮಣಿಸಿ ಬಾಂಗ್ಲಾದೇಶ ಪ್ರಶಸ್ತಿ ಗೆದ್ದಿರುವುದು ಸಹಜವಾಗಿಯೇ ಖುಷಿ ತಂದಿದೆ. ಆಟಗಾರ್ತಿಯರ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಸಿಕ್ಕಂತಾಗಿದೆ. ಹರ್ಮನ್’ಪ್ರೀತ್ ಕೌರ್, ಮಿಥಾಲಿ ರಾಜ್, ಸ್ಮೃತಿ ಮಂದಾನ ಅವರಂತಹ ಆಟಗಾರ್ತಿಯನ್ನು ಕಟ್ಟಿಹಾಕಲು ಮಾಡಿದ ಯೋಜನೆಯಲ್ಲಿ ಯಶಸ್ಸು ಕಂಡೆವು.  ನಮ್ಮ ಮುಂದಿನ ಗುರಿಯೇನಿದ್ದರೂ ಇದೇ ನವೆಂಬರ್’ನಲ್ಲಿ ವೆಸ್ಟ್’ಇಂಡಿಸ್’ನಲ್ಲಿ ಜರುಗುವ ವಿಶ್ವ ಟಿ20 ಟೂರ್ನಿಗೆ ಅರ್ಹತೆ ಗಿಟ್ಟಿಸಲು ಸಜ್ಜಾಗುತ್ತಿದ್ದೇನೆ ಎಂದು ಕೋಚ್ ಅನುಜಾ ಹೇಳಿದ್ದಾರೆ.

click me!