‘ಭಾರತ, ಪಾಕ್, ಕೀನ್ಯಾ, ಇರಾನ್, ಅರ್ಜೆಂಟೀನಾ ಹಾಗೂ ದ.ಕೊರಿಯಾ ತಂಡಗಳು ದುಬೈ ಕಬಡ್ಡಿ ಮಾಸ್ಟರ್ಸ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ.
ಮುಂಬೈ[ಜೂ.12]: ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಸಹಯೋಗದಲ್ಲಿ ಆಯೋಜಿಸಿರುವ ‘ದುಬೈ ಕಬಡ್ಡಿ ಮಾಸ್ಟರ್ಸ್’ನ ವೇಳಾಪಟ್ಟಿ ಪ್ರಕಟಗೊಂಡಿದೆ.
ಜೂ.22ರಿಂದ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲೇ ‘ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿವೆ. ‘ಭಾರತ, ಪಾಕ್, ಕೀನ್ಯಾ, ಇರಾನ್, ಅರ್ಜೆಂಟೀನಾ ಹಾಗೂ ದ.ಕೊರಿಯಾ ತಂಡಗಳು ದುಬೈ ಕಬಡ್ಡಿ ಮಾಸ್ಟರ್ಸ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ.
‘ಭಾರತ, ಪಾಕ್, ಕೀನ್ಯಾ ‘ಎ’ ಗುಂಪಿನಲ್ಲಿವೆ. ಜೂ.30 ರಂದು ಫೈನಲ್ ನಡೆಯಲಿದ್ದು, 9 ದಿನಗಳ ಪಂದ್ಯಾವಳಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ. ಪ್ರತಿ ದಿನ 2 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ರಾತ್ರಿ 8ಕ್ಕೆ, 2ನೇ ಪಂದ್ಯ ರಾತ್ರಿ 9ಕ್ಕೆ ನಡೆಯಲಿದೆ.