ಬೆಸ್ಟ್ IPL ಟೀಂ ಪ್ರಕಟಿಸಿದ ಅನಿಲ್ ಕುಂಬ್ಳೆ-ಕೊಹ್ಲಿಗೆ ಕೊಕ್!

By Web Desk  |  First Published May 10, 2019, 10:02 PM IST

12ನೇ ಆವೃತ್ತಿ ಐಪಿಎಲ್ ಟೂರ್ನಿ ಪ್ರದರ್ಶನ ಆಧರಿಸಿ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಅತ್ಯುತ್ತಮ ತಂಡ ಆಯ್ಕೆ ಮಾಡಿದ್ದಾರೆ. ಕುಂಬ್ಳೆ ಆಯ್ಕೆ ಮಾಡಿರೋ ಬೆಸ್ಟ್ ಐಪಿಎಲ್ ತಂಡದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿಲ್ಲ.


ಮುಂಬೈ(ಮೇ.09): 12ನೇ ಆವೃತ್ತಿ ಐಪಿಎಲ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಟೂರ್ನಿ ರೋಚಕ ಘಟ್ಟ ತಲುಪುತ್ತಿದ್ದಂತೆ ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅತ್ಯುತ್ತಮ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ.  ಕುಂಬ್ಳೆ ಪ್ರಕಟಿಸಿರೋ ತಂಡದಲ್ಲಿ  RCB ನಾಯಕ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿಲ್ಲ. 

ಇದನ್ನೂ ಓದಿ: ಹಾರ್ದಿಕ್ ಶರ್ಟ್ ಬೆಲೆಗೆ ಬೆಂಗ್ಳೂರಲ್ಲಿ ಸಿಗುತ್ತೆ 1BHK ಬಾಡಿಗೆ ಮನೆ!

Tap to resize

Latest Videos

ಅನಿಲ್ ಕುಂಬ್ಳೆ ಪ್ರಕಟಿಸಿರೋ ಅತ್ಯುತ್ತಮ ಐಪಿಎಲ್ ತಂಡದಲ್ಲಿ ಎಂ.ಎಸ್.ಧೋನಿಗೆ ನಾಯಕ ಸ್ಥಾನ ನೀಡಲಾಗಿದೆ. ಇನ್ನು ಇಬ್ಬರು ಕನ್ನಡಿಗರಿಗೆ ಸ್ಥಾನ ನೀಡಲಾಗಿದೆ. ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಗೋಪಾಲ್‌ಗೆ ಕುಂಬ್ಳೆ ಅವಕಾಶ ನೀಡಿದ್ದಾರೆ. ಆಲ್ರೌಂಡರ್ ಕೋಟಾದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಆ್ಯಂಡ್ರೆ ರಸೆಲ್‌ಗೆ ಸ್ಥಾ ನೀಡಲಾಗಿದೆ.

ಇದನ್ನೂ ಓದಿ: IPL 12ರಲ್ಲಿ ಕನ್ನಡದ ಕಂಪು; ದಿಗ್ಗಜರ ಬಾಯಲ್ಲಿ ಕನ್ನಡ ಕಲರವ

ಕುಂಬ್ಳೆ ಪ್ರಕಟಿಸಿದ ಬೆಸ್ಟ್ IPL ಟೀಂ:

ಡೇವಿಡ್ ವಾರ್ನರ್, ಕೆಎಲ್ ರಾಹುಲ್, ಶ್ರೇಯಲ್ ಅಯ್ಯರ್, ರಿಷಬ್ ಪಂತ್, ಎಂ.ಎಸ್.ಧೋನಿ(ನಾಯಕ), ಹಾರ್ದಿಕ್ ಪಾಂಡ್ಯ, ಆ್ಯಂಡ್ರೆ ರಸೆಲ್, ಶ್ರೇಯಸ್ ಗೋಪಾಲ್, ಇಮ್ರಾನ್, ಕಾಗಿಸೋ ರಬಾಡ, ಜಸ್ಪ್ರೀತ್ ಬುಮ್ರಾ

click me!