
ಕೊಲಂಬೊ(ಜೂ.26): ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನೆ ಶ್ರೀಲಂಕಾ ತಂಡದ ಪ್ರಮುಖ ಕೋಚ್ ಆಗುವಷ್ಟು ಅನುಭವ ಹೊಂದಿಲ್ಲ ಎಂದು ಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ತಿಲಂಗಾ ಸುಮತಿಪಾಲ ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಶ್ರೀಲಂಕಾ ತಂಡದ ಹಿಂದಿನ ಕೋಚ್ ಗ್ರಾಹಂ ಫೋರ್ಡ್ ತಮ್ಮ ಸ್ಥಾನವನ್ನು ತೊರೆದಿದ್ದರು. ಮಹೇಲ, ಟಿ20 ತಂಡದ ಬ್ಯಾಟಿಂಗ್ ಅಥವಾ ಫೀಲ್ಡಿಂಗ್ ಕೋಚ್ ಆಗಬಹುದು ಎಂದು ಸುಮತಿಪಾಲ ಸ್ಥಳೀಯ ನೇತ್ ಎಫ್'ಎಂ ರೇಡಿಯೋದಲ್ಲಿ ಹೇಳಿದ್ದರು.
ಮುಂಬೈ ಇಂಡಿಯನ್ಸ್ ಕೋಚ್ ಮತ್ತು ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲ ತಂಡದಲ್ಲಿ ಆಡುವ ವೇಳೆಯಲ್ಲಿನ ಸಮಕಾಲೀನ ಆಟಗಾರರು ಈಗಲೂ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ. ಮಹೇಲ 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು.
ಜಯವರ್ಧನೆ ಹಾಗೂ ಸಂಗಕ್ಕರ ವಿದಾಯದ ಬಳಿಕ ಲಂಕಾ ತಂಡವು ಸತತವಾಗಿ ಉತ್ತಮವಾಗಿ ಆಟವಾಡಲು ವಿಫಲವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.