ಚೆಸ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಸೋಲು ಕಂಡು ರನ್ನರ್‌ಅಪ್ ಸ್ಥಾನ ಪಡೆದ ಆರ್. ಪ್ರಜ್ಞಾನಂದನ ಪಾಲಕರಿಗೆ ಮಹೀಂದ್ರಾ & ಮಹೀಂದ್ರಾ ಕಂಪನಿಯ ಚೇರ್ಮನ್ ಆನಂದ್ ಮಹೀಂದ್ರಾ ಎಲೆಕ್ಟ್ರಿಕ್ ಕಾರು ಉಡುಗೊರೆ ನೀಡಲಿದ್ದಾರೆ.
ನವದೆಹಲಿ (ಆ.28): ತಮ್ಮ ಅಸಾಧಾರಣ ಔದಾರ್ಯ ಮತ್ತು ವಿನೂತನ ಚಿಂತನೆಯ ಮೂಲಕವೇ ಮನೆ ಮಾತಾಗಾಗಿರುವ ಮಹೀಂದ್ರಾ & ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಚೆಸ್ ಸೂಪರ್‌ಸ್ಟಾರ್ ಆರ್.ಪ್ರಜ್ಞಾನಂದನಿಗೆ ವಿನೂತನ ಘೋಷಣೆ ಮಾಡಿದ್ದಾರೆ. ಸ್ವತಃ ಅನಂದ್ ಮಹೀಂದ್ರಾ ಅವರೇ ಟ್ವಿಟರ್‌ನಲ್ಲಿ ಈ ಘೋಷಣೆ ಮಾಡಿದ್ದಾರೆ. ಚೆಸ್ ವಿಶ್ವಕಪ್‌ನಲ್ಲಿ ರನ್ನರ್‌ಅಪ್ ಆಗಿರುವ ಪ್ರಜ್ಞಾನಂದನ ತಾಯಿ ಶ್ರೀಮಂತಿ ನಾಗಲಕ್ಷ್ಮೀ ಮತ್ತು ಅವರ ತಂದೆ ರಮೇಶ್ ಬಾಬು ಅವರಿಗೆ ಮಹೀಂದ್ರಾ ಎಕ್ಸ್‌ಯುವಿ 400 ಇವಿ ಕಾರ್‌ಅನ್ನು ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ. ಪ್ರಜ್ಞಾನಂದ ಚೆಸ್ ಲೋಕದಲ್ಲಿ ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡುವ ಹಿಂದೆ ಅವರ ತಂದೆಯ ತಾಯಿಯ ಅಚಲವಾದ ಸಮರ್ಪಣೆ, ಅವಿರತ ಬೆಂಬಲ ಹಾಗೂ ಪೋಷಣೆಯ ಮಾರ್ಗದರ್ಶನ ಸಹಕಾರಿಯಾಗಿದೆ ಎಂದು ಆನಂದ್ ಮಹೀಂದ್ರಾ ಅಭಿಪ್ರಾಯಪಟ್ಟಿದ್ದಾರೆ. ಆನಂದ್ ಮಹೀಂದ್ರಾ ಅವರ ಈ ಘೋಷಣೆಯ ಹಿಂದೆ ಇನ್ನೊಂದು ವಿಚಾರವೂ ಅಡಗಿದೆ. ಇದು ತಮ್ಮ ಮಕ್ಕಳನ್ನು ಕ್ರೀಡೆಯ ಕಡೆಗೆ ಅದರಲ್ಲೂ ಬೋರ್ಡ್ ಗೇಮ್‌ಗಳ ಕಡೆಗೆ ಪೋಷಕರು ಪ್ರೇರೇಪಿಸಬೇಕು ಎನ್ನುವ ಉದ್ದೇಶವನ್ನೂ ಹೊಂದಿದೆ. ಇಂದು ವಿಡಿಯೋ ಗೇಮ್‌ಗಳು ವ್ಯಾಪಕವಾಗಿ ಪ್ರಖ್ಯಾತಿ ಪಡೆದುಕೊಳ್ಳುತ್ತಿದೆ. ಇಮಥ ಸಮಯದಲ್ಲಿ ಚೆಸ್‌ನಂಥ ಕ್ರೀಡೆಗಳನ್ನು ಆಡುವ ನಿರ್ಧಾರ ಮಾಡಿದ ಮಕ್ಕಳಿಗೆ ಪ್ರೋತ್ಸಾಹ ನೀಡುವ ತಂದೆ-ತಾಯಿ ಕೂಡ ಶ್ಲಾಘನೆಗೆ ಅರ್ಹರು ಎಂದಿದ್ದಾರೆ. ಇದನ್ನು ಇವಿಗಳು ಪಡೆದುಕೊಳ್ಳುತ್ತಿರುವ ಪ್ರಖ್ಯಾತಿಯೊಂದಿಗೂ ಹೋಲಿಕೆ ಮಾಡಿ ಅರು ಟ್ವೀಟ್ ಮಾಡಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಆನಂದ್ ಮಹೀಂದ್ರಾ, 'ಇವಿ ಕಾರ್‌ಗಳಲ್ಲಿ ನಾವು ಗಮನ ನೀಡಿದ್ದರಿಂದ ಭವಿಷ್ಯದ ಉತ್ತಮ ಜಗತ್ತಿಗೆ ನಾವು ಹೂಡಿಕೆ ಮಾಡುತ್ತಿದ್ದೇವೆ. ಅದೇ ರೀತಿಯಲ್ಲಿ ನಾವು ಎಕ್ಸ್‌ಯುವಿ 400 ಇವಿಯನ್ನು ಪ್ರಜ್ಞಾನಂದ ಅವರ ತಾಯಿ ಶ್ರೀಮತಿ ನಾಗಲಕ್ಷ್ಮೀ ಹಾಗೂ ಅವರ ತಂದೆ ಶ್ರೀ ರಮೇಶ್ ಬಾಬು ಅವರಿಗೆ ನೀಡಲಿದ್ದೇವೆ. ಅವರು ತಮ್ಮ ಮಗನ ಉತ್ಸಾಹವನ್ನು ಪೋಷಿಸಿದ್ದಕ್ಕಾಗಿ ಮತ್ತು ಅವರಿಗೆ ತಮ್ಮ ಅವಿರತ ಬೆಂಬಲವನ್ನು ನೀಡಿದ್ದಕ್ಕಾಗಿ ನಮ್ಮ ಕೃತಜ್ಞತೆಗೆ ಅರ್ಹರು' ಎಂದು ಬರೆದುಕೊಂಡಿದ್ದಾರೆ.
ಆನಂದ್ ಮಹೀಂದ್ರಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ರಾಜೇಶ್ ಜೆಜುರಿಕರ್ ಅವರು ಗಮನಾರ್ಹ ಸಾಧನೆಗಳಿಗಾಗಿ ರಮೇಶಬಾಬು ಪ್ರಜ್ಞಾನಂದ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ವಿಶೇಷ ಆವೃತ್ತಿಯನ್ನು ರಚಿಸಲು ಮತ್ತು ಅದನ್ನು ರಮೇಶಬಾಬು ಪ್ರಜ್ಞಾನಂದ ಅವರ ಪೋಷಕರಾದ ಶ್ರೀಮತಿ ನಾಗಲಕ್ಷ್ಮಿ ಮತ್ತು ಶ್ರೀ ರಮೇಶಬಾಬು ಅವರಿಗೆ ತಲುಪಿಸಲು ತಮ್ಮ ತಂಡವು ಸಹಕರಿಸುತ್ತದೆ ಎಂದು ಅವರು ಘೋಷಿಸಿದರು.
ಚೆಸ್ ವಿಶ್ವಕಪ್‌ನಲ್ಲಿ ಪ್ರಜ್ಞಾನಂದನ ಸಾಧನೆ ಮೆಚ್ಚಿದ ಆನಂದ್ ಮಹೀಂದ್ರಾ
ಭಾರತೀಯ ಹಾಗೂ ಜಗತ್ತಿನ ಚೆಸ್ ಲೋಕದಲ್ಲಿ ಹೊಸ ಸೆನ್ಸೇಷನ್ ಆಗಿರುವ ಪ್ರಜ್ಞಾನಂದ ಅವರ ವಯಸ್ಸು ಕೇವಲ 18. ಚೆಸ್ ವಿಶ್ವಕಪ್‌ನ ಫೈನಲ್‌ಗೇರಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನೆಸ್ ಕಾರ್ಲ್‌ಸೆನ್ ವಿರುದ್ಧ ಅವರು ಸೋಲು ಕಂಡಿದ್ದರು. ಅವರ ಅಸಾಧಾರಣ ಪ್ರದರ್ಶನ ಮತ್ತು ಎರಡು ಸತತ ಡ್ರಾಗಳ ಹೊರತಾಗಿಯೂ, ಅವರು ಫೈನಲ್‌ನ ಟೈ-ಬ್ರೇಕ್ ಸುತ್ತಿನಲ್ಲಿ ಅಲ್ಪ ಅಂತರದಲ್ಲಿ ಸೋತರು. ಚಿಕ್ಕ ವಯಸ್ಸಿನಲ್ಲಿಯೇ ಅವರು ತೋರಿರುವ ಆಟಕ್ಕೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ.
5 ವರ್ಷದ ಹುಡುಗಿಗೆ 95 ವರ್ಷವಾದ್ರೆ ಹೇಗೆ ಕಾಣ್ತಾಳೆ: AI ವೈರಲ್ ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ
Appreciate your sentiment, Krishlay, & many, like you, have been urging me to gift a Thar to
But I have another idea …
I would like to encourage parents to introduce their children to Chess & support them as they pursue this cerebral game (despite the surge in… https://t.co/oYeDeRNhyh https://t.co/IlFIcqJIjm