
ಬೆಂಗಳೂರು(ಆ.28) ಇಶಾನ್ ಕಿಶನ್ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದರೂ ಪ್ಲೇಯಿಂಗ್-11ನಲ್ಲಿ ಖಾಯಂ ಸ್ಥಾನವಿಲ್ಲ. ಟೀಂ ಇಂಡಿಯಾ ಜೊತೆ ಜರ್ನಿ ಮಾಡಿದ್ರೂ ಅಲ್ಲೊಂದು ಇಲ್ಲೊಂದು ಪಂದ್ಯಗಳನ್ನಾಡುತ್ತಿದ್ದಾರೆ. ಒನ್ಡೇ ಕ್ರಿಕೆಟ್ನಲ್ಲಿ ಡಬಲ್ ಸೆಂಚುರಿ ಬಾರಿಸಿದ್ರೂ ಇಲ್ಲಿಯವರೆಗೂ ಆಡಿರೋದು ಕೆಲವೇ ಕೆಲ ಪಂದ್ಯ ಮಾತ್ರ. ಆದ್ರೆ ಈಗ ಇಶಾನ್ ಕಿಶನ್‌ಗೆ ಗೋಲ್ಡನ್ ಅಪರ್ಚಿನಿಟಿ ಸಿಕ್ಕಿದೆ. ಅದು ಬದ್ಧವೈರಿ ಪಾಕಿಸ್ತಾನ ವಿರುದ್ಧ ಆಡೋ ಅವಕಾಶ.
ಇಶಾನ್ ಕಿಶನ್ ಏಷ್ಯಾಕಪ್ ತಂಡಕ್ಕೆ ಸೆಲೆಕ್ಟ್ ಆಗಿದ್ದಾರೆ. ಕೆ ಎಲ್ ರಾಹುಲ್ ಸಹ ಆಯ್ಕೆಯಾಗಿದ್ದು, ಅವರು ಲೀಗ್ ಪಂದ್ಯಗಳನ್ನ ಆಡುವುದಿಲ್ಲ. ಇಂಜುರಿಯಿಂದ ಕನ್ನಡಿಗ ರಿಕವರಿಯಾಗಿದ್ದರೂ ಹಳೆಯ ಗಾಯವೊಂದು ಅವರನ್ನ ಕಾಡ್ತಿದೆ. ಹೀಗಾಗಿ ಅವರು ಮೊದಲೆರಡು ಪಂದ್ಯ ಆಡಿಲ್ಲ ಅಂತ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರೇ ಹೇಳಿದ್ದಾರೆ. ರಾಹುಲ್ ಆಡಲ್ಲ ಅಂದ್ರೆ ಆಗ ಇಶಾನ್ ಕಿಶನ್‌ಗೆ ಆಡೋ ಅವಕಾಶ ಸಿಗುತ್ತೆ. ಸಂಜು ಸ್ಯಾಮ್ಸನ್ ಟೀಮ್ನಲ್ಲಿದ್ದರೂ ಅವರು ರಿಸರ್ವ್ ಪ್ಲೇಯರ್. ಹೀಗಾಗಿ ಕಿಶನ್‌ಗೆ ಪಾಕ್ ವಿರುದ್ಧ ಆಡೋದು ಪಕ್ಕಾ.
ಓಪನರ್ ಆಗಿ ಸಕ್ಸಸ್, ಮಿಡಲ್ ಆರ್ಡರ್ನಲ್ಲೂ ಸಕ್ಸಸ್ ಆಗ್ತಾರಾ..?
ಇಶಾನ್ ಕಿಶನ್ ಒನ್ಡೇ ಕ್ರಿಕೆಟ್ನಲ್ಲಿ ಓಪನರ್ ಆಗಿ ಸಕ್ಸಸ್ ಆಗಿದ್ದಾರೆ. ದ್ವಿಶತಕ ಬಾರಿಸುವ ಮೂಲಕ ಮೀಸಲು ಆರಂಭಿಕ ಸ್ಥಾನವನ್ನ ಖಾಯಂ ಮಾಡಿಕೊಂಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಇಶಾನ್ ಇಲ್ಲಿಯವರೆಗೆ ಓಪನರ್, ನಂಬರ್ 3 ಮತ್ತು 4 ಸ್ಲಾಟ್ನಲ್ಲಿ ಆಡಿ ರನ್ ಹೊಡೆದಿದ್ದಾರೆ. ಆದ್ರೆ ಏಷ್ಯಾಕಪ್‌ನಲ್ಲಿ ಅವರು ನಂಬರ್ 5 ಸ್ಲಾಟ್ನಲ್ಲಿ ಆಡಬೇಕಾಗಬಹುದು. ಯಾಕಂದ್ರೆ ರಾಹುಲ್ ಆಡೋದು ನಂಬರ್ 5 ಸ್ಲಾಟ್ನಲ್ಲೇ.
Asia Cup 2023: ಏಷ್ಯಾಕಪ್ ಟೂರ್ನಿಗೆ 17 ಆಟಗಾರರನ್ನೊಳಗೊಂಡ ಬಲಿಷ್ಠ ಆಫ್ಘಾನಿಸ್ತಾನ ತಂಡ ಪ್ರಕಟ
ಗಿಲ್-ರೋಹಿತ್ ಓಪನರ್ಸ್. ಕೊಹ್ಲಿ, ಶ್ರೇಯಸ್ 3 ಮತ್ತು 4ನೇ ಪ್ಲೇಸ್ನಲ್ಲಿ ಆಡ್ತಾರೆ. ಆಗ ಇಶಾನ್‌ಗೆ ಆಡೋಕೆ ಚಾನ್ಸ್ ಸಿಗೋದು 5ನೇ ಕ್ರಮಾಂಕದಲ್ಲಿ. ಇದೇ ಕ್ರಮಾಂಕದಲ್ಲಿ ರಾಹುಲ್ ಸಕ್ಸಸ್ ಆಗಿದ್ದಾರೆ. ವಿಕೆಟ್ ಕೀಪಿಂಗ್ ಜೊತೆ ಮ್ಯಾಚ್ ಫಿನಿಶಿಂಗ್ ಮಾಡುತ್ತಿದ್ದರು. ಈಗ ಆ ಜವಾವ್ದಾರಿ ಕಿಶನ್ ಮೇಲೆ ಬೀಳಲಿದೆ. ನಂಬರ್ 6 ಸ್ಲಾಟ್ನಲ್ಲಿ ಹಾರ್ದಿಕ್ ಪಾಂಡ್ಯ, 7ನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಸಹ ಇರಲಿದ್ದಾರೆ. ಇವರ ಜೊತೆ ಕೂಡಿಕೊಂಡು ಇಶಾನ್ ಮ್ಯಾಚ್ ಫಿನಿಶ್ ಮಾಡ್ಬೇಕು.
ಟೀಂ ಇಂಡಿಯಾದಲ್ಲಿ ಸಾಲು ಸಾಲು ಓಪನರ್ಸ್..!
ರೋಹಿತ್, ಗಿಲ್, ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಹೀಗೆ ಸಾಲು ಸಾಲು ಓಪನರ್ಸ್ ಟೀಂ ಇಂಡಿಯಾದಲ್ಲಿದ್ದಾರೆ. ಅವರೆಲ್ಲರೂ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಹೀಗಾಗಿ ಆರಂಭಿಕ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈಗ ಇಶಾನ್ ಓಪನರ್ ಸ್ಲಾಟ್ಗೆ ಫೈಟ್ ಕೊಡುವ ಬದಲು ಲೋ ಆರ್ಡರ್ನಲ್ಲಿ ಆಡಿ ರನ್ ಗಳಿಸಿದ್ರೆ ಪರ್ಮನೆಂಟಾಗಿ ಪ್ಲೇಸ್ ಇರಲಿದೆ. ಒಟ್ನಲ್ಲಿ ಇಶಾನ್ ಕಿಶನ್ ಪಾಲಿಗೆ ಏಷ್ಯಾಕಪ್ ಗೋಲ್ಡನ್ ಅಪರ್ಚಿನಿಟಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.