ಮುಂಬೈ ಇಂಡಿಯನ್ಸ್ ಗೆಲ್ಲಿಸಿದ ರೋಹಿತ್ ಶರ್ಮಾ'ಗೆ ಬಿಸಿಸಿಐ ನೀಡಲಿದೆ ಬಂಪರ್ ಸ್ಥಾನ !

Published : May 24, 2017, 10:23 PM ISTUpdated : Apr 11, 2018, 12:41 PM IST
ಮುಂಬೈ ಇಂಡಿಯನ್ಸ್ ಗೆಲ್ಲಿಸಿದ ರೋಹಿತ್ ಶರ್ಮಾ'ಗೆ ಬಿಸಿಸಿಐ ನೀಡಲಿದೆ ಬಂಪರ್ ಸ್ಥಾನ !

ಸಾರಾಂಶ

ರೋಹಿತ್ ಶರ್ಮಾ ನಾಯಕತ್ವದ ಮುಂಬೈ' ಇಂಡಿಯನ್ಸ್ ಪಡೆ ಫೈನಲ್ ಸೇರಿದಂತೆ ಐಪಿಎಲ್'ನಲ್ಲಿ ಒಟ್ಟು 13 ಪಂದ್ಯ ಜಯಗಳಿಸಿ ಮೊದಲ ಸ್ಥಾನಗಳಿಸಿತ್ತು. ಪೊಲ್ಲಾರ್ಡ್, ಮಲಿಂಗಆ, ಪಾರ್ಥೀವ್ ಪಟೇಲ್, ಪಾಂಡ್ಯ ಸೇರಿದಂತೆ ಬಹುತೇಕ ಎಲ್ಲ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರು.

ನವದೆಹಲಿ(ಮೇ.23): ಇಂಡಿಯನ್ ಪ್ರೀಮಿಯರ್ ಲೀಗ್'ನ 10ನೇ ಆವೃತ್ತಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸಿ ಟ್ರೋಫಿ ಗೆಲ್ಲಿಸಿಕೊಟ್ಟ ರೋಹಿತ್ ಶರ್ಮಾ'ಗೆ ಬಿಸಿಸಿಐ'ನಿಂದ ಬಂಪರ್ ಸ್ಥಾನ ಒಲಿದು ಬರುವ ಸಾಧ್ಯತೆಯಿದೆ.

ರೋಹಿತ್ ಶರ್ಮಾ ನಾಯಕತ್ವದ ಮುಂಬೈ' ಇಂಡಿಯನ್ಸ್ ಪಡೆ ಫೈನಲ್ ಸೇರಿದಂತೆ ಐಪಿಎಲ್'ನಲ್ಲಿ ಒಟ್ಟು 13 ಪಂದ್ಯ ಜಯಗಳಿಸಿ ಮೊದಲ ಸ್ಥಾನಗಳಿಸಿತ್ತು. ಪೊಲ್ಲಾರ್ಡ್, ಮಲಿಂಗಆ, ಪಾರ್ಥೀವ್ ಪಟೇಲ್, ಪಾಂಡ್ಯ ಸೇರಿದಂತೆ ಬಹುತೇಕ ಎಲ್ಲ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರು.

ಆದರೆ ತಂಡದ ನೇತೃತ್ವ ವಹಿಸಿ ಗೆಲುವು ದೊರಕಿಸಿಕೊಟ್ಟ ನಾಯಕ ರೋಹಿತ್ ಶರ್ಮಾ'ಗೆ ಅದೃಷ್ಟ ಕುಲಾಯಿಸುವ ಸಾಧ್ಯತೆಯಿದೆ. ಭಾರತೀಯ ಕ್ರಿಕೆಟ್ ಮಂಡಳಿ ಶರ್ಮಾರನ್ನು ಚಾಂಪಿಯನ್ಸ್ ಟ್ರೋಫಿ'ಗೆ ಉಪನಾಯಕನ ಸ್ಥಾನ ನೀಡುವ ಬಗ್ಗೆ ಚಿಂತಿಸಿದೆ ಎನ್ನಲಾಗಿದೆ. ಅಲ್ಲದೆ ಮುಂದಿನ ಭಾರತದ ಸರಣಿಗಳಿಗೆ ಅವರೆ ಉಪ ನಾಯಕನಾಗಿ ಮುಂದುವರಿಯಲಿದ್ದಾರೆ ಎನ್ನುವ ಮಾತುಗಳು ಬಿಸಿಸಿಐ'ನ ಕೆಲವು ಮೂಲಗಳಿಂದ ಕೇಳಿಬರುತ್ತಿದೆ.

ಒಂದು ವೇಳೆ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕನಾಗಿ ವಿಫಲವಾದರೆ ರೋಹಿತ್ ಶರ್ಮಾ'ಗೆ ಟೀಂ ಇಂಡಿಯಾ' ಸಾರಥ್ಯ ನೀಡುವ ಸಂಭವವು ಹೆಚ್ಚಾಗಿದೆ. ಕೊಹ್ಲಿ ಬಿಟ್ಟರೆ ನಾಯಕನಿಗೆ ಹೆಚ್ಚು ಸೂಕ್ತವಾಗುವ ವ್ಯಕ್ತಿ ಇವರೆ ಎಂಬುದು ಬಿಸಿಸಿಐ'ನ ಆಲೋಚನೆಯಾಗಿದೆ. ಮುಂಬೈ ಐಪಿಎಲ್ ಟ್ರೋಪಿ ಗೆದ್ದಾಗ ಭಾರತ ತಂಡದ ನಾಯಕತ್ವ ವಹಿಸುತ್ತೀರಾ ಎಂದು ರೋಹಿತ್ ಅವರನ್ನು  ಮಾಧ್ಯಮದವರ ಪ್ರಶ್ನಿಸಿದಾಗ' ಅವಕಾಶ ನೀಡಿದರೆ ತಾವು ರೆಡಿ ಎಂಬ ಸುಳಿವನ್ನು ನೀಡಿದ್ದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ಕೆ.ಗೌತಮ್‌!
ಭಾರತ ಎದುರು ಅಂಡರ್-19 ಏಷ್ಯಾಕಪ್ ಗೆದ್ದ ಪಾಕ್ ಆಟಗಾರರಿಗೆ ಪ್ರಧಾನಿ ಭಾರೀ ಬಹುಮಾನ ಘೋಷಣೆ!