ಸಿಯೆಟ್ ವರ್ಷದ ಕ್ರಿಕೆಟಿಗ ಪ್ರಶಸ್ತಿ ಬಾಚಿಕೊಂಡ ಅಶ್ವಿನ್

By Suvarna Web DeskFirst Published May 24, 2017, 9:35 PM IST
Highlights

ಅಶ್ವಿನ್ ಅವರಿಗೆ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹಾಗೂ ಆರ್'ಪಿಜಿ ಮುಖ್ಯಸ್ಥ ಹರ್ಷಾ ಗೋಯೆಂಕಾ ಪ್ರಶಸ್ತಿ ಪ್ರದಾನ ಮಾಡಿದರು.

ಮುಂಬೈ(ಮೇ.24): ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಫ್'ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಸಿಯೆಟ್ ಅಂತರಾಷ್ಟ್ರೀಯ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಿಯೆಟ್ ಕ್ರಿಕೆಟ್ ರೇಟಿಂಗ್ ನೀಡುವ 2017ನೇ ಸಾಲಿನ ಅಂತಾರಾಷ್ಟ್ರೀಯ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆಯುವಲ್ಲಿ ಅಶ್ವಿನ್ ಸಫಲರಾಗಿದ್ದಾರೆ.

ಅಶ್ವಿನ್ ಅವರನ್ನೊಳಗೊಂಡ ಭಾರತ ತಂಡ ತವರಿನ ಅಂಗಣದಲ್ಲಿ ಕಳೆದ ವರ್ಷ ಆಡಿದ 13 ಟೆಸ್ಟ್ ಪಂದ್ಯಗಳಲ್ಲಿ 10 ಪಂದ್ಯಗಳನ್ನು ಜಯಿಸಿದೆ. ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಟೆಸ್ಟ್ ಪಂದ್ಯಗಳನ್ನಾಡಿತ್ತು.

ಅಶ್ವಿನ್ ಮೂರು ಪ್ರಕಾರದ ಕ್ರಿಕೆಟ್ ಟೂರ್ನಿಯಲ್ಲಿ ಕಳೆದ 12 ತಿಂಗಳಲ್ಲಿ ಆಡಿದ ಪಂದ್ಯಗಳಲ್ಲಿ 99 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಯುವ ಬ್ಯಾಟ್ಸ್‌'ಮನ್ ಶುಭ್‌'ಮನ್ ಗಿಲ್, ವರ್ಷದ ಯುವ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದಾರೆ. 19 ವರ್ಷದೊಳಗಿನ ಭಾರತ ತಂಡದ ಆಟಗಾರರಾಗಿರುವ ಶುಭ್‌ಮನ್, ಮುಂಬೈನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನದಿಂದ ಗಮನಸೆಳೆದಿದ್ದರು.

ಅಶ್ವಿನ್ ಅವರಿಗೆ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹಾಗೂ ಆರ್'ಪಿಜಿ ಮುಖ್ಯಸ್ಥ ಹರ್ಷಾ ಗೋಯೆಂಕಾ ಪ್ರಶಸ್ತಿ ಪ್ರದಾನ ಮಾಡಿದರು.

click me!