ಅಡಿಲೇಡ್ ಟೆಸ್ಟ್’ನಲ್ಲಿ ಅಪರೂಪದ ದಾಖಲೆ ಬರೆದ ಕೊಹ್ಲಿ

Published : Dec 09, 2018, 05:03 PM IST
ಅಡಿಲೇಡ್ ಟೆಸ್ಟ್’ನಲ್ಲಿ ಅಪರೂಪದ ದಾಖಲೆ ಬರೆದ ಕೊಹ್ಲಿ

ಸಾರಾಂಶ

ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್’ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿನೂತನ ದಾಖಲೆ ಬರೆದಿದ್ದಾರೆ. ಪ್ರತಿಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ಬರೆಯುವ ವಿರಾಟ್ ಕೊಹ್ಲಿ ಇದೀಗ ಅಡಿಲೇಡ್ ಟೆಸ್ಟ್’ನಲ್ಲಿ 2 ಅಪರೂಪದ ದಾಖಲೆ ಬರೆದಿದ್ದಾರೆ.

ಅಡಿಲೇಡ್[ಡಿ.09]: ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್’ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿನೂತನ ದಾಖಲೆ ಬರೆದಿದ್ದಾರೆ. ಪ್ರತಿಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ಬರೆಯುವ ವಿರಾಟ್ ಕೊಹ್ಲಿ ಇದೀಗ ಅಡಿಲೇಡ್ ಟೆಸ್ಟ್’ನಲ್ಲಿ 2 ಅಪರೂಪದ ದಾಖಲೆ ಬರೆದಿದ್ದಾರೆ.

ಆಸಿಸ್ ನೆಲದಲ್ಲಿ ವಿರಾಟ್ ಯಾವೆಲ್ಲಾ ರೆಕಾರ್ಡ್ ನಿರ್ಮಿಸುತ್ತಾರೆ..?

ತವರಿನಾಚೆ ಟೆಸ್ಟ್ ಕ್ರಿಕೆಟ್’ನಲ್ಲಿ ಕೊಹ್ಲಿ 2000 ರನ್:
ವಿದೇಶಿ ನೆಲದಲ್ಲಿ 2000 ಟೆಸ್ಟ್ ರನ್ ಬಾರಿಸಿದ ಭಾರತದ ಮೊದಲ ನಾಯಕ ಎನ್ನುವ ಕೀರ್ತಿಗೆ ವಿರಾಟ್ ಪಾತ್ರರಾಗಿದ್ದಾರೆ. ತವರಿನಲ್ಲಿ ಹಾಗೂ ತವರಿನಾಚೆ 2 ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ ಭಾರತದ ನಾಯಕ ಎನ್ನುವ ಅಪರೂಪದ ದಾಖಲೆಯನ್ನು ಸಹಾ ನಿರ್ಮಿಸಿದ್ದಾರೆ.
ಟೆಸ್ಟ್ ಕ್ರಿಕೆಟ್’ನಲ್ಲಿ ಈ ಸಾಧನೆ ಮಾಡಿದ ಒಟ್ಟಾರೆ 5ನೇ ನಾಯಕ ಕೊಹ್ಲಿ. ಈ ಮೊದಲು ಅಲನ್ ಬಾರ್ಡರ್, ರಿಕಿ ಪಾಂಟಿಂಗ್, ಗ್ರೇಮ್ ಸ್ಮಿತ್ ಹಾಗೂ ಆಲಿಸ್ಟರ್ ಕುಕ್ ತವರಿನಾಚೆ 2 ಸಾವಿರ ರನ್ ಪೂರೈಸಿದ ಇತರೆ ನಾಯಕರಾಗಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಸಾವಿರ ರನ್:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಒಂದು ಸಾವಿರ ಟೆಸ್ಟ್ ರನ್ ಪೂರೈಸಿದ್ದಾರೆ. ಈ ಮೂಲಕ ಸಾವಿರ ರನ್ ಪೂರೈಸಿದ 5ನೇ ಭಾರತೀಯ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಇದೀಗ 1029 ರನ್’ಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿಗೂ ಮುನ್ನ ಸಚಿನ್[1809], ವಿವಿಎಸ್ ಲಕ್ಷ್ಮಣ್(1236), ರಾಹುಲ್ ದ್ರಾವಿಡ್[1166] ಹಾಗೂ ವಿರೇಂದ್ರ ಸೆಹ್ವಾಗ್[1031] ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.
   

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಸಿಸಿಗೆ ಬಿಗ್ ಶಾಕ್ ಕೊಟ್ಟ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಹಾಟ್‌ಸ್ಟಾರ್!
ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!