ಅಡಿಲೇಡ್ ಟೆಸ್ಟ್: ಆಸಿಸ್’ಗೆ ಮೊದಲ ಆಘಾತ

Published : Dec 09, 2018, 10:32 AM IST
ಅಡಿಲೇಡ್ ಟೆಸ್ಟ್: ಆಸಿಸ್’ಗೆ ಮೊದಲ ಆಘಾತ

ಸಾರಾಂಶ

ಅಡಿಲೇಡ್’ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್’ನಲ್ಲಿ ಟೀಂ ಇಂಡಿಯಾ 323 ರನ್’ಗಳ ಕಠಿಣ ಗುರಿ ನೀಡಿದೆ. ಸವಾಲಿನ ಗುರಿ ಬೆನ್ನತ್ತಿರುವ ಆಸಿಸ್ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. 

ಅಡಿಲೇಡ್[ಡಿ.09]: ಟೀಂ ಇಂಡಿಯಾ ನೀಡಿದ್ದ ಕಠಿಣ ಸವಾಲು ಬೆನ್ನತ್ತಿರುವ ಆಸ್ಟ್ರೆಲಿಯಾ ತಂಡಕ್ಕೆ ಮೊದಲ ಆಘಾತ ಎದುರಾಗಿದ್ದು, ಆ್ಯರೋನ್ ಫಿಂಚ್ 11 ರನ್ ಬಾರಿಸಿ ಅಶ್ವಿನ್’ಗೆ ವಿಕೆಟ್ ಒಪ್ಪಿಸಿದ್ದಾರೆ.

ಅಡಿಲೇಡ್’ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್’ನಲ್ಲಿ ಟೀಂ ಇಂಡಿಯಾ 323 ರನ್’ಗಳ ಕಠಿಣ ಗುರಿ ನೀಡಿದೆ. ಸವಾಲಿನ ಗುರಿ ಬೆನ್ನತ್ತಿರುವ ಆಸಿಸ್ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. ಮೊದಲ ವಿಕೆಟ್’ಗೆ ಮಾರ್ಕಸ್ ಹ್ಯಾರಿಸ್-ಆ್ಯರೋನ್ ಫಿಂಚ್ ಜೋಡಿ 12 ಓವರ್’ಗಳಲ್ಲಿ 28 ರನ್’ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭದ ಮುನ್ಸೂಚನೆ ನೀಡಿದರು. ಆದರೆ 12ನೇ ಓವರ್’ನ ಕೊನೆಯ ಎಸೆತದಲ್ಲಿ ಅಶ್ವಿನ್ ಬೌಲಿಂಗ್’ನಲ್ಲಿ ಫಿಂಚ್ ಪ್ಯಾಡ್’ಗೆ ಬಡಿದ ಚೆಂಡನ್ನು ಪಂತ್ ಕ್ಯಾಚ್ ಪಡೆದು ಔಟ್’ಗಾಗಿ ಮನವಿ ಸಲ್ಲಿಸಿದರು. ಒಂದು ವೇಳೆ ಫಿಂಚ್ ಡಿಆರ್’ಎಸ್ ಬಳಸಿದ್ದರೆ ಫಿಂಚ್ ನಾಟ್’ಔಟ್ ಆಗುತ್ತಿದ್ದರು.

ಈಗಾಗಲೇ ಫಿಚ್ ಸ್ಪಿನ್ನರ್’ಗಳಿಗೆ ಸಾಕಷ್ಟು ನೆರವು ನೀಡುತ್ತಿದ್ದು, ಅಶ್ವಿನ್ ಇಂದು ಮತ್ತಷ್ಟು ವಿಕೆಟ್ ಕಬಳಿಸುವ ಸಾಧ್ಯತೆಯಿದೆ. ನಾಲ್ಕನೇ ದಿನದಾಟದಲ್ಲಿ ಇನ್ನೂ 38 ಓವರ್’ಗಳು ಬಾಕಿಯಿದ್ದು, ಆಸಿಸ್ ಗೆಲ್ಲಲು 295 ರನ್’ಗಳ ಅವಶ್ಯಕತೆಯಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ: 
250& 307
ಆಸ್ಟ್ರೇಲಿಯಾ: 
235 & 28/1*

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ