
ಅಡಿಲೇಡ್[ಜ. 16] ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ 299ರನ್ ಚೇಸಿಂಗ್ ಮಾಡಿ ಭಾರತ ವಿಜಯಮಾಳೆ ಹಾಕಿಕೊಂಡಿದೆ. ವಿರಾಟ್ ಬ್ಯಾಟಿನಿಂದ ಸಿಡಿದ ಶತಕ ಅನೇಕ ದಾಖಲೆ ಪುಡಿ ಮಾಡಿದೆ.
ಧೋನಿ ಮತ್ತು ವಿರಾಟ್ ಪ್ರದರ್ಶನ ಭಾರತಕ್ಕೆ ಜಯ ತಂದುಕೊಟ್ಟಿದೆ. ಆದರೆ ಬ್ಯಾಟಿಂಗ್ ನಡೆಸುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಮಾಡಿರುವ ಎಡವಟ್ಟುವೊಂದು ಅಂಪೈರ್ ಹಾಗೂ ಎದುರಾಳಿ ತಂಡದ ಆಟಗಾರ ಗಮನಕ್ಕೆ ಬಂದಿಲ್ಲ!
ಚೇಸಿಂಗ್‌ನಲ್ಲಿ ಧೋನಿ ಈಗಲೂ ನಂ.1- ಕೊಹ್ಲಿಗೆ ಎಷ್ಟನೇ ಸ್ಥಾನ?
ನೇಥನ್ ಲೀಯಾನ್ ಎಸೆದ 45ನೇ ಓವರ್ನ ಕೊನೆ ಎಸೆತದಲ್ಲಿ ಒಂದು ರನ್ ತೆಗೆದುಕೊಳ್ಳಲು ಓಡಿರುವ ಧೋನಿ ಅದನ್ನ ಪೂರ್ಣಗೊಳಿಸದೇ ವಾಪಸ್ ಆಗಿದ್ದಾರೆ. ಇದು ಅಂಪೈರ್ ಅಥವಾ ಎದುರಾಳಿ ತಂಡದವರ ಗಮನಕ್ಕೆ ಬಂದಿಲ್ಲ. ಕಾಮೆಂಟರಿ ಮಾಡುತ್ತಿದ್ದ ಗಿಲ್ ಕ್ರಿಸ್ಟ್ ಇದನ್ನು ಹೇಳಿದ್ದಾರೆ.
ಈ ವೇಳೆ ಭಾರತಕ್ಕೆ 3 ಓವರ್ಗಳಲ್ಲಿ 25ರನ್ ಬೇಕಿತ್ತು. ಕ್ರೀಸ್ ಅದಲು ಬದಲಾಗಿದ್ದರೆ ಪಂದ್ಯದ ಗತಿ ಬದಲಾಗುತ್ತಿತ್ತು ಎಂಬ ಮಾತು ಇದೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ತುಣುಕು ಹರಿದಾಡುತ್ತಿದ್ದು ಪಂದ್ಯ ಮುಗಿದು ಫಲಿತಾಂಶವೂ ಬಂದಾಗಿದೆ.
\
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.