ಪುಲ್ವಾಮ ದಾಳಿ: ಹುತಾತ್ಮರ ಕುಟುಂಬಗಳಿಗೆ ಬಿಸಿಸಿಐ 5 ಕೋಟಿ?

Published : Feb 18, 2019, 08:52 AM IST
ಪುಲ್ವಾಮ ದಾಳಿ: ಹುತಾತ್ಮರ ಕುಟುಂಬಗಳಿಗೆ ಬಿಸಿಸಿಐ 5 ಕೋಟಿ?

ಸಾರಾಂಶ

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಆಡಳಿತ ಸಮಿತಿಗೆ ಬಿಸಿಸಿಐ ಹಂಗಾಮಿ ಅಧ್ಯಕ್ಷ ಖನ್ನಾ ಮನವಿಮಾಡಿದ್ದಾರೆ. ಇಷ್ಟೇ ಅಲ್ಲ ಐಪಿಎಲ್ ಫ್ರಾಂಚೈಸಿಗಳು ಆಯಾ ರಾಜ್ಯದ ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗಲು ಮನವಿ ಮಾಡಿದ್ದಾರೆ.

ನವದೆಹಲಿ(ಫೆ.18): ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಕುಟುಂಬಗಳಿಗೆ ಬಿಸಿಸಿಐ ಕನಿಷ್ಠ 5 ಕೋಟಿ ನೆರವು ನೀಡಬೇಕು ಎಂದು ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಭಾನುವಾರ, ಸುಪ್ರೀಂ ಕೋರ್ಟ್‌ ನೇಮಿತ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌ಗೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಪುಲ್ವಾಮ ದಾಳಿ: ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯ ಬಹಿಷ್ಕರಿಸಲು CCI ಆಗ್ರಹ!

‘ನಮಗೆ ಅತೀವ ಬೇಸರವಾಗಿದೆ, ಉಗ್ರರ ದಾಳಿಯನ್ನು ನಾವು ಖಂಡಿಸುತ್ತೇವೆ. ಹುತಾತ್ಮರ ಕುಟುಂಬಗಳಿಗೆ ಸಾಂತ್ವನ ಹೇಳುತ್ತಾ, ಬಿಸಿಸಿಐ ಕನಿಷ್ಠ 5 ಕೋಟಿ ನೆರವು ನೀಡಬೇಕು ಎಂದು ಮನವಿ ಮಾಡುತ್ತೇನೆ. ಸರ್ಕಾರದ ಸೂಕ್ತ ಇಲಾಖೆಯ ಮುಖಾಂತರ ಹುತಾತ್ಮರ ಕುಟುಂಬಗಳಿಗೆ ಹಣ ತಲುಪಿಸಬೇಕು ಎಂದು ಕೇಳಿಕೊಳ್ಳುತ್ತೇನೆ’ ಎಂದು ಖನ್ನಾ, ರಾಯ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪುಲ್ವಾಮ ದಾಳಿ: ಭಾರತದಲ್ಲಿ ಪಾಕಿಸ್ತಾನ ಲೀಗ್ ಕ್ರಿಕೆಟ್ ಪ್ರಸಾರ ನಿರ್ಬಂಧ!

ಇದೇ ವೇಳೆ ಬಿಸಿಸಿಐನೊಂದಿಗೆ ನೋಂದಾಯಿತ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಹಾಗೂ ಐಪಿಎಲ್‌ ಫ್ರಾಂಚೈಸಿ ಮಾಲೀಕರಿಗೂ ಹಣ ಸಹಾಯ ಮಾಡುವಂತೆ ಖನ್ನಾ ಮನವಿ ಮಾಡಿದರು. ಭಾರತ-ಆಸ್ಪ್ರೇಲಿಯಾ ನಡುವಿನ ಸರಣಿಯ ಆರಂಭಿಕ ಪಂದ್ಯ ಹಾಗೂ ಐಪಿಎಲ್‌ನ ಉದ್ಘಾಟನಾ ಪಂದ್ಯದ ವೇಳೆ ವೀರ ಯೋಧರಿಗೆ 2 ನಿಮಿಷ ಶ್ರದ್ಧಾಂಜಲಿ ಸಲ್ಲಿಸುವಂತೆ ಆಟಗಾರರಲ್ಲಿ ಮನವಿ ಮಾಡುವುದಾಗಿ ಖನ್ನಾ ಹೇಳಿದ್ದಾರೆ. ಫೆ.24ರಂದು ಭಾರತ-ಆಸ್ಪ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯ ನಡೆಯಲಿದ್ದು, ಮಾ.23ಕ್ಕೆ ಮೊದಲ ಐಪಿಎಲ್‌ ಪಂದ್ಯ ನಿಗದಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?
ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!