
ನವದೆಹಲಿ(ನ.14): ಭಾರತೀಯ ಕ್ರಿಕೆಟಿಗರಿಗೆ ದೇಶದೊಳಗಿನ ವಿಮಾನಯಾನದ ವೇಳೆ ಬ್ಯುಸಿನೆಸ್ ಕ್ಲಾಸ್'ನಲ್ಲಿ ಪ್ರಯಾಣಿಸಲು ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐನ ಆಡಳಿತ ಮಂಡಳಿ (ಸಿಒಎ) ಸಮ್ಮತಿ ಸೂಚಿಸಿದೆ.
ಭಾರತದಲ್ಲಿ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಆಟಗಾರರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಎಕಾನಮಿ ಕ್ಲಾಸ್'ನಲ್ಲಿ ಪ್ರಯಾಣಿಸಬೇಕಿತ್ತು. ಇದರಿಂದ ಆಟಗಾರರ ಖಾಸಗಿತನಕ್ಕೆ ಧಕ್ಕೆಯುಂಟಾಗುತ್ತಿತ್ತು, ಅಲ್ಲದೇ ಉದ್ದವಿರುವ ಆಟಗಾರರು ಕಾಲುಚಾಚಲು ಕಷ್ಟವಾಗುತ್ತಿತ್ತು. ಆದ ಕಾರಣ ಬ್ಯುಸಿನೆಸ್ ಕ್ಲಾಸ್ ಸೌಲಭ್ಯ ಒದಗಿಸುವಂತೆ ಆಟಗಾರರು ಮನವಿ ಮಾಡಿಕೊಂಡಿದ್ದರು. ಆಟಗಾರರ ಮನವಿಯನ್ನು ಬಿಸಿಸಿಐ, ಸಿಒಎ ಮುಂದೆ ಇರಿಸಿತ್ತು.
‘ಇತ್ತೀಚೆಗೆ ನಡೆದ ಸಭೆಯಲ್ಲಿ ಬಿಸಿಸಿಐನ ಮನವಿಯನ್ನು ಸಿಒಎ ಪುರಸ್ಕರಿಸಿದೆ’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.