ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 117 ಭಾರತೀಯರ ಸ್ಪರ್ಧೆ

By Kannadaprabha News  |  First Published Jul 18, 2024, 10:23 AM IST

ಜು.26ರಿಂದ ಫ್ರಾನ್ಸ್‌ ರಾಜಾಧಾನಿ ಪ್ಯಾರಿಸ್‌ನಲ್ಲಿ ಆರಂಭಗೊಳ್ಳಲಿರುವ ಕ್ರೀಡಾಕೂಟದಲ್ಲಿ ನೀರಜ್‌ ಚೋಪ್ರಾ, ಪಿ.ವಿ.ಸಿಂಧು, ಕರ್ನಾಟಕದ ರೋಹನ್‌ ಬೋಪಣ್ಣ ಸೇರಿದಂತೆ ಭಾರತದ ಒಟ್ಟು 117 ಅಥ್ಲೀಟ್‌ಗಳು ಪಾಲ್ಗೊಳ್ಳುವುದಾಗಿ ಐಒಎ ಮಾಹಿತಿ ನೀಡಿದೆ. ಇದರಲ್ಲಿ 70 ಪುರುಷರು, 47 ಮಹಿಳೆಯರಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ


ನವದೆಹಲಿ: ಮುಂಬರುವ ಬಹುನಿರೀಕ್ಷಿತ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಕ್ರೀಡಾಪಟುಗಳ ಪಟ್ಟಿಯನ್ನು ಬುಧವಾರ ಭಾರತ ಒಲಿಂಪಿಕ್‌ ಸಂಸ್ಥೆ(ಐಒಎ) ಅಧಿಕೃತವಾಗಿ ಪ್ರಕಟಿಸಿದೆ.

ಜು.26ರಿಂದ ಫ್ರಾನ್ಸ್‌ ರಾಜಾಧಾನಿ ಪ್ಯಾರಿಸ್‌ನಲ್ಲಿ ಆರಂಭಗೊಳ್ಳಲಿರುವ ಕ್ರೀಡಾಕೂಟದಲ್ಲಿ ನೀರಜ್‌ ಚೋಪ್ರಾ, ಪಿ.ವಿ.ಸಿಂಧು, ಕರ್ನಾಟಕದ ರೋಹನ್‌ ಬೋಪಣ್ಣ ಸೇರಿದಂತೆ ಭಾರತದ ಒಟ್ಟು 117 ಅಥ್ಲೀಟ್‌ಗಳು ಪಾಲ್ಗೊಳ್ಳುವುದಾಗಿ ಐಒಎ ಮಾಹಿತಿ ನೀಡಿದೆ. ಇದರಲ್ಲಿ 70 ಪುರುಷರು, 47 ಮಹಿಳೆಯರಿದ್ದಾರೆ.

Tap to resize

Latest Videos

undefined

ಭಾರತ ಈ ಬಾರಿ ಒಲಿಂಪಿಕ್ಸ್‌ನ ಒಟ್ಟು 16 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. ಈ ಪೈಕಿ ಅಥ್ಲೆಟಿಕ್ಸ್‌ನಲ್ಲಿ ಗರಿಷ್ಠ ಅಂದರೆ 29 ಮಂದಿ(18 ಪುರುಷ, 11 ಮಹಿಳೆಯರು) ಭಾರತವನ್ನು ಪ್ರತಿನಿಧಿಸಲಿದ್ದಾರೆ. ಶೂಟಿಂಗ್‌ನಲ್ಲಿ ಸಾರ್ವಕಾಲಿಕ ಗರಿಷ್ಠ 21 ಮಂದಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದು, ಟೇಬಲ್‌ ಟೆನಿಸ್ ತಂಡದಲ್ಲಿ 8, ಬ್ಯಾಡ್ಮಿಂಟನ್‌ನಲ್ಲಿ 7 ಮಂದಿ ಕಣದಲ್ಲಿದ್ದಾರೆ. ವೇಟ್‌ಲಿಫ್ಟಿಂಗ್‌, ಈಕ್ವೆಸ್ಟ್ರಿಯನ್‌, ಜುಡೋ ಹಾಗೂ ರೋಯಿಂಗ್‌ ಸ್ಪರ್ಧೆಯಲ್ಲಿ ತಲಾ ಒಬ್ಬರು ಸ್ಪರ್ಧಿಸಲಿದ್ದಾರೆ.

ಗೌತಮ್ ಗಂಭೀರ್ ಕೇಳಿದ್ದು ಈ 5 ಸಹಾಯಕ ಸಿಬ್ಬಂದಿ; ಕೇವಲ ಒಬ್ಬರಿಗಷ್ಟೇ ಗ್ರೀನ್ ಸಿಗ್ನಲ್ ಕೊಟ್ಟ ಬಿಸಿಸಿಐ..!

140 ಸಹಾಯಕ ಸಿಬ್ಬಂದಿ: ಭಾರತದ 140 ಸಹಾಯಕ ಸಿಬ್ಬಂದಿ ಕೂಡಾ ಪ್ಯಾರಿಸ್‌ಗೆ ತೆರಳಲಿದ್ದಾರೆ. ಇದರಲ್ಲಿ ಕ್ರೀಡಾಕೂಟದಲ್ಲಿ ಭಾರತ ತಂಡದ ಮುಖ್ಯಸ್ಥರಾಗಿರುವ ಗಗನ್‌ ನಾರಂಗ್‌, 11 ಮಂದಿ ಐಒಎ ಅಧಿಕಾರಿಗಳು, 8 ವೈದ್ಯರ ತಂಡ, ಫಿಸಿಯೋಗಳು, ಕೋಚ್‌ಗಳು ಕೂಡಾ ಒಳಗೊಂಡಿದ್ದಾರೆ.

ಅಭಾ ಸ್ಪರ್ಧೆ ಇಲ್ಲ!

ಮಹಿಳಾ ಶಾಟ್‌ಪುಟ್‌ ತಾರೆ ಅಭಾ ಕಾತೂನ್‌ ಹೆಸರು ಐಒಎ ಪ್ರಕಟಿಸಿದ ಪಟ್ಟಿಯಲ್ಲಿಲ್ಲ. ಇದರೊಂದಿಗೆ ಅಭಾ ಒಲಿಂಪಿಕ್ಸ್‌ನಿಂದ ಹೊರಗುಳಿಯುವುದು ಖಚಿತವಾಗಿದೆ. ಅಭಾ ರ್‍ಯಾಂಕಿಂಗ್‌ ಆಧಾರದಲ್ಲಿ ಒಲಿಂಪಿಕ್ಸ್‌ ಅರ್ಹತೆ ಪಡೆದಿದ್ದರು. ಭಾರತ ಅಥ್ಲೆಟಿಕ್ಸ್‌ ಸಂಸ್ಥೆ ಪ್ರಕಟಿಸಿದ ಪಟ್ಟಿಯಲ್ಲೂ ಅವರ ಹೆಸರಿತ್ತು. ಆದರೆ ಇತ್ತೀಚೆಗಷ್ಟೇ ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆ ಪ್ರಕಟಿಸಿದ್ದ ಪಟ್ಟಿಯಲ್ಲಿ ಅಭಾ ಹೆಸರು ನಾಪತ್ತೆಯಾಗಿತ್ತು. ಇನ್ನು, ಅಭಾ ಆಯ್ಕೆಯಾಗದಿರುವ ಕಾರಣ ಏನು ಎಂಬುದು ಐಒಎ ಬಹಿರಂಗಪಡಿಸಿಲ್ಲ.

Breaking: ಮಾಜಿ ಕ್ರಿಕೆಟಿಗನ ಮನೆಯಲ್ಲೇ ಶ್ರೀಲಂಕಾ ಆಟಗಾರನನ್ನು ಗುಂಡಿಕ್ಕಿ ಬರ್ಬರ ಹತ್ಯೆ..!

ಕರ್ನಾಟಕದ 8 ಮಂದಿ ಸ್ಪರ್ಧೆ

ಈ ಬಾರಿ ಒಲಿಂಪಿಕ್ಸ್‌ನಲ್ಲಿ ಕರ್ನಾಟಕದ 8 ಮಂದಿ ಸ್ಪರ್ಧಿಸಲಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಎಂ.ಆರ್.ಪೂವಮ್ಮ, ಮಿಜೊ ಚಾಕೊ ಕುರಿಯನ್‌, ಬ್ಯಾಡ್ಮಿಂಟನ್‌ನಲ್ಲಿ ಅಶ್ವಿನಿ ಪೊನ್ನಪ್ಪ, ಗಾಲ್ಫ್‌ನಲ್ಲಿ ಅದಿತಿ ಅಶೋಕ್‌, ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್‌ ಹಾಗೂ ಧಿನಿಧಿ ದೇಸಿಂಘು ಸ್ಪರ್ಧಿಸಲಿದ್ದಾರೆ. ಟೇಬಲ್‌ ಟೆನಿಸ್‌ನಲ್ಲಿ ಅರ್ಚನಾ ಕಾಮತ್‌, ಟೆನಿಸ್‌ನಲ್ಲಿ ರೋಹನ್‌ ಬೋಪಣ್ಣ ಕಣದಲ್ಲಿದ್ದಾರೆ.

ಕಳೆದ ಬಾರಿ 122 ಮಂದಿ

2021ರಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 68 ಪುರುಷರು, 54 ಮಹಿಳೆಯರ ಸೇರಿ ಭಾರತದ 122 ಮಂದಿ ಸ್ಪರ್ಧಿಸಿದ್ದರು. ಈ ಬಾರಿ ಅಥ್ಲೀಟ್‌ಗಳ ಸಂಖ್ಯೆ ಕಡಿಮೆಯಾಗಿದೆ.
 

click me!