ಧಮಿಕಾ ನಿರ್ಶೋನಾ 2001ರಿಂದ 2004ರ ವರೆಗೆ ಗಾಲೆ ಕ್ರಿಕೆಟ್ ಕ್ಲಬ್ ಪರ ಒಟ್ಟು 12 ಪ್ರಥಮ ದರ್ಜೆ ಪಂದ್ಯಗಳನ್ನು 8 ಲಿಸ್ಟ್ ಎ ಪಂದ್ಯಗಳನ್ನಾಡಿದ್ದರು. ಉತ್ತಮ ಆಲ್ರೌಂಡರ್ ಆಗಿ ರೂಪುಗೊಂಡಿದ್ದ ಧಮಿಕಾ ನಿರ್ಶೋನಾ, ಬ್ಯಾಟಿಂಗ್‌ನಲ್ಲಿ 300ಕ್ಕೂ ಹೆಚ್ಚು ರನ್, ಬೌಲಿಂಗ್‌ನಲ್ಲಿ 19 ವಿಕೆಟ್ ಕಬಳಿಸಿದ್ದರು.
ಕ್ಯಾಂಡಿ: ದ್ವೀಪರಾಷ್ಟ್ರ ಶ್ರೀಲಂಕಾದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಶ್ರೀಲಂಕಾ ಅಂಡರ್ 19 ತಂಡದ ಮಾಜಿ ನಾಯಕ ಧಮಿಕಾ ನಿರ್ಶೋನಾ ಅವರನ್ನು ಮಂಗಳವಾರ ತಡರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯು ಮಾಜಿ ಕ್ರಿಕೆಟಿಗ ಖಂಂಡಾ ಮವಾತಾ ಅವರ ನಿವಾಸದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕೆಲವು ಮಾಧ್ಯಮಗಳ ವರದಿ ಪ್ರಕಾರ, ಈ ಘಟನೆ ನಡೆಯುವ ವೇಳೆಯಲ್ಲಿ ಧಮಿಕಾ ನಿರ್ಶೋನಾ ಅವರ ಜತೆ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಜತೆಗಿದ್ದರು ಎನ್ನಲಾಗುತ್ತಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ಶವಪರೀಕ್ಷೆಗೆ ಕಳಿಸಿಕೊಟ್ಟಿದ್ದಾರೆ. ತನಿಖೆಯಿಂದಷ್ಟೇ ಈ ಪ್ರಕರಣ ಕುರಿತಂತೆ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
A former Sri Lankan U19 captain reportedly shot dead in Ambalangoda 😭. Gone too soon brother. Discipline is number 1 in any profession. https://t.co/5QseJBpXJO
— Amila Kalugalage (@akalugalage)ಧಮಿಕಾ ನಿರ್ಶೋನಾ ಶ್ರೀಲಂಕಾದ ಯುವ ಆಟಗಾರರ ಪಟ್ಟಿಯಲ್ಲಿ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಗಮನ ಸೆಳೆದಿದ್ದರು. ವಯೋಮಾನದ ಕ್ರಿಕೆಟ್ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು. ಆದರೆ ತಮ್ಮ 20ನೇ ವಯಸ್ಸಿಗೆ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.
ಕೊನೆಗೂ ತಪ್ಪೊಪ್ಪಿಕೊಂಡ ಕ್ರಿಕೆಟಿಗ ಅಮಿತ್ ಮಿಶ್ರಾ..!
ಧಮಿಕಾ ನಿರ್ಶೋನಾ 2001ರಿಂದ 2004ರ ವರೆಗೆ ಗಾಲೆ ಕ್ರಿಕೆಟ್ ಕ್ಲಬ್ ಪರ ಒಟ್ಟು 12 ಪ್ರಥಮ ದರ್ಜೆ ಪಂದ್ಯಗಳನ್ನು 8 ಲಿಸ್ಟ್ ಎ ಪಂದ್ಯಗಳನ್ನಾಡಿದ್ದರು. ಉತ್ತಮ ಆಲ್ರೌಂಡರ್ ಆಗಿ ರೂಪುಗೊಂಡಿದ್ದ ಧಮಿಕಾ ನಿರ್ಶೋನಾ, ಬ್ಯಾಟಿಂಗ್‌ನಲ್ಲಿ 300ಕ್ಕೂ ಹೆಚ್ಚು ರನ್, ಬೌಲಿಂಗ್‌ನಲ್ಲಿ 19 ವಿಕೆಟ್ ಕಬಳಿಸಿದ್ದರು.
2000ನೇ ಇಸವಿಯಲ್ಲಿ ಶ್ರೀಲಂಕಾ ಅಂಡರ್ 19 ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಧಮಿಕಾ ನಿರ್ಶೋನಾ, ಮುಂದಿನ ಎರಡು ವರ್ಷಗಳ ಕಾಲ ಅಂಡರ್ 19 ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಲಂಕಾ ತಂಡವನ್ನು ಪ್ರತಿನಿಧಿಸಿದ್ದರು.