ಕೈ-ಕಾಲುಗಳೇ ಇಲ್ಲದಿದ್ದರೂ ರನ್ನಿಂಗ್​ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತದ ಕುವರಿಯ ರೋಚಕ ಕಥೆ ಕೇಳಿ...

ಎರಡು ಕೈ-ಕಾಲು ಕಳೆದುಕೊಂಡರೂ ಮನೋಬಲದಿಂದ ಮುನ್ನುಗ್ಗಿ ಏಷ್ಯನ್​ ಗೇಮ್ಸ್​ವರೆಗೆ ಹೋಗಿ ಭಾರತದ ಕ್ರೀಡಾಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಶಾಲಿನಿ ಸರಸ್ವತಿಯ ರೋಚಕ ಪಯಣ ಇಲ್ಲಿದೆ... 
 

blade runner national level athlete who lost legs and hands Shalini Saraswatis story suc

ಎಲ್ಲವೂ ಸರಿಯಿದ್ದರೂ ಕೊರಗುತ್ತಿದ್ದರೆ, ಅಯ್ಯೋ ಎಲ್ಲಾ ಕಳೆದುಕೊಂಡು ಬಿಟ್ಟೆ, ಮುಂದೆ ದಿಕ್ಕೇ ತೋಚುತ್ತಿಲ್ಲ ಎಂದು ನರಳುತ್ತಿದ್ದರೆ ಈ ಭಾರತದ ಹೆಮ್ಮಯ ಪುತ್ರಿಯ ಜೀವನಗಾಥೆಯನ್ನೊಮ್ಮೆ ಕೇಳಿಬಿಡಿ. ಎರಡೂ ಕೈ-ಕಾಲುಗಳನ್ನು ಕಳೆದುಕೊಂಡ ಮೇಲೆ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿರುವ ಶಾಲಿನಿ ಸರಸ್ವತಿ ಎಂಬ ಮಹಿಳೆ ಬಹುಶಃ ಹೆಚ್ಚಿನವರಿಗೆ ತಿಳಿದಿರಲಿಕ್ಕೇ ಇಲ್ಲ. ಈ ಪ್ರಪಂಚವೇ ಹಾಗಲ್ವೆ? ಏನೇನೋ ಕಾಂಟ್ರವರ್ಸಿ ಮಾಡಿಕೊಂಡವರು ಎಲ್ಲರಿಗೂ ಪರಿಚಯವಾಗಿಬಿಡುತ್ತಾರೆ, ಆದರೆ ಇಂಥ ಸಾಧನೆ ಮಾಡಿದ ಅದೆಷ್ಟೋ ಮಂದಿ ನಮ್ಮ ಪಕ್ಕದ ಮನೆಯಲ್ಲಿಯೇ ಇದ್ದರೂ ನಮಗೆ ತಿಳಿದಿರುವುದಿಲ್ಲ. ಅಂಥ ಅಪೂರ್ವ ಸಾಧಕರಲ್ಲಿ ಒಬ್ಬರು ಶಾಲಿನಿ ಸರಸ್ವತಿ. ಭಾರತದ ಮೊದಲ ಮಹಿಳಾ ಬ್ಲೇಡ್ ರನ್ನರ್ ಎನ್ನುವ ದಾಖಲೆ ಇವರ ಹೆಸರಿನಲ್ಲಿ ಇದೆ. ಕೈ-ಕಾಲುಗಳನ್ನು ಕಳೆದುಕೊಂಡ ಮೇಲೂ 2017 ರಲ್ಲಿ 10 ಸಾವಿರ ಮ್ಯಾರಥಾನ್ ಅನ್ನು ಒಂದು ಗಂಟೆ 35 ನಿಮಿಷಗಳಲ್ಲಿ ಪೂರ್ಣಗೊಳಿಸಿರುವ ಇವರು, 2021 ರಲ್ಲಿ 100 ಮೀ ಓಟದಲ್ಲಿ ರಾಷ್ಟ್ರೀಯ ಚಿನ್ನದ ಪದಕ ಮತ್ತು 2022 ರಲ್ಲಿ ಬೆಳ್ಳಿ ಗೆದ್ದು ತಂದ ಧೀಮಂತೆ.

ಹಾಗಿದ್ದರೆ ಯಾರೀ ಶಾಲಿನಿ? ಶಾಲಿನಿಗೆ ಯಾವುದೇ ಕ್ರೀಡಾ ಹಿನ್ನೆಲೆ ಇಲ್ಲ. ಆದರೆ, ಇವರು  ಏಷ್ಯಾದ ಅತ್ಯಂತ ವೇಗದ ಮಹಿಳೆ ಎಂಬ ದಾಖಲೆಯನ್ನು ಮೊದಲೇ ಬರೆದಿದ್ದರು. ಮದುವೆಯೂ ಆಯಿತು, ಗರ್ಭಿಣಿಯೂ ಆದರು. ಆದರೆ 2012ರಲ್ಲಿ ಶಾಲಿನಿ ಬದುಕಿನಲ್ಲಿ ಭಯಾನಕ ಘಟನೆ ಸಂಭವಿಸಿಬಿಟ್ಟಿತು. ಕನಸು ಮನಸಿನಲ್ಲಿಯೂ ಊಹಿಸದ ನರಕ ಅವರ ಪಾಲಿಗೆ ಬಂತು.  ಕಾಂಬೋಡಿಯಾ ಪ್ರವಾಸಕ್ಕೆ ಹೋಗಿದ್ದ ಅವರು ಅಲ್ಲಿಯೇ  ತಮ್ಮ 4 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದರು. ಆದರೆ ಈ ನಲಿವು ಅಂದೇ ಕೊನೆಯಾಗಿ ಹೋಯ್ತು.  ವಿಚಿತ್ರ ಬ್ಯಾಕ್ಟೀರಿಯಾದ ಸೋಂಕಿನಿಂದ ಅವರು ಬಳಲಿದರು. ಅದನ್ನು ಪತ್ತೆ ಹಚ್ಚುವುದೂ ಕಷ್ಟವಾಯಿತು.  ಆಗ ಶಾಲಿನಿ ಗರ್ಭಿಣಿ. ಆದರೆ, ಬ್ಯಾಕ್ಟೀರಿಯಾ ಅವರ ಬದುಕನ್ನೇ ಸರ್ವನಾಶ ಮಾಡಿತು.  ತಿಂಗಳುಗಟ್ಟಲೆ ಆಸ್ಪತ್ರೆಯ ಬೆಡ್ ನಲ್ಲೇ ಇರಬೇಕಾಯಿತು. ಇದರಿಂದಾಗಿ ಅವರು  ಮಗುವನ್ನು ಕಳೆದುಕೊಂಡರು, ಮಾತ್ರವಲ್ಲದೇ ಅವರ ಕೈ ಮತ್ತು ಕಾಲುಗಳನ್ನೂ ಈ ಬ್ಯಾಕ್ಟೀರಿಯಾ ಬಲಿ ಪಡೆಯಿತು.

Latest Videos

ಭಾರತದ ಈ ಗ್ರಾಮದ ಜನರಿಗೆ ಹೆಸ್ರೇ ಇಲ್ಲ! ಹಾಡು, ಶಿಳ್ಳೆಗಳಿಂದಲೇ ಸಂವಹನ... ವಿಚಿತ್ರ ಊರಿನ ವಿಡಿಯೋ ನೋಡಿ...

ಯಾರೇ ಆಗಿದ್ದರೂ ಬಹುಶಃ ಬದುಕನ್ನೇ ಕೊನೆಗೊಳಿಸಿಕೊಳ್ಳುತ್ತಿದ್ದರು, ಇಲ್ಲವೇ ಜೀವನಪರ್ಯಂತ ತಮಗಾಗಿರುವ ಈ ಭಯಾನಕ ಘಟನೆ ಬಗ್ಗೆ ಕೊರಗಿ ಕೊರಗಿ ಸಾಯುತ್ತಿದ್ದರು. ಆದರೆ ಶಾಲಿನಿ ಹಾಗೆ ಮಾಡಲಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದರು.  ತಮ್ಮ ಫಿಟ್​ನೆಂಟ್​ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಮ್ಯಾರಥಾನ್‌ಗಳಲ್ಲಿ ಭಾಗವಹಿಸಲು ಶುರು ಮಾಡಿದರು.  ಪಿ.ಪಿ.ಅಯ್ಯಪ್ಪ ಎಂಬ ತರಬೇತುದಾರರಿಂದ ಅವರು ಟ್ರೇನಿಂಗ್​ ಪಡೆದುಕೊಂಡರು. ಇದರ ಫಲವಾಗಿ 2017 ರಲ್ಲಿ 10K ಮ್ಯಾರಥಾನ್ ಅನ್ನು ಒಂದು ಗಂಟೆ 35 ನಿಮಿಷಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಾಯಿತು. ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟರು. ಹೀಗೆ ತಮ್ಮ ಸಾಧನೆಯನ್ನು ಮುಂದುರೆಸಿದ  ಶಾಲಿನಿ, 2021 ರಲ್ಲಿ 100 ಮೀ ಓಟದಲ್ಲಿ ರಾಷ್ಟ್ರೀಯ ಚಿನ್ನದ ಪದಕ ಮತ್ತು 2022 ರಲ್ಲಿ ಬೆಳ್ಳಿ ಗೆದ್ದರು.

ತಮ್ಮ ಸಾಧನೆಯನ್ನು ಮುಂದುವರೆಸಿದ ಅಶ್ವಿನಿ ಕೊನೆಗೆ,  ಏಷ್ಯನ್ ಪ್ಯಾರಾ ಗೇಮ್ಸ್​ನಲ್ಲಿಯೂ ಪಾಲ್ಗೊಂಡರು. ಭಾರತದ ಮೊದಲ ಬ್ಲೇಡ್ ರನ್ನರ್​ ಎಂದ ಕಿರೀಟವನ್ನು ತಮ್ಮದಾಗಿಸಿಕೊಂಡರು. ತಮ್ಮ ಈ ಸಾಧನೆಯ ಬಗ್ಗೆ ಮಾತನಾಡಿರುವ ಶಾಲಿನಿ, ನನ್ನದು ಕ್ರೀಡಾ ಹಿನ್ನೆಲೆಯಲ್ಲ. ನನಗೆ ಆದ ಅನುಭವಗಳ ಬಳಿಕ  ಏಷ್ಯನ್ ಗೇಮ್ಸ್‌ವರೆಗೆ ಬರುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕಾಗಿ ಭಾಗವಹಿಸುವುದು ಮತ್ತು ವಿವಿಧ ದೇಶಗಳ ಸಾಕಷ್ಟು ಕ್ರೀಡಾಪಟುಗಳನ್ನು ಭೇಟಿ ಮಾಡಿರುವುದು ನನಗೆ ಹೊಸ ಆರಂಭವನ್ನು ನೀಡಿತು ಎಂದಿದ್ದಾರೆ. ಬೆಂಗಳೂರಿನಲ್ಲಿ  2014ರಲ್ಲಿ ನಡೆದ ಕ್ರೀಡೆಯಲ್ಲಿ ಕೃತಕ ಕಾಲು ಜೋಡಿಸಿ ಭಾಗವಹಿಸಿದ್ದರು. ಅಲ್ಲಿಯೇ  ಕೋಚ್ ಅಯ್ಯಪ್ಪ ಅವರನ್ನು ಭೇಟಿಯಾಗಿ ತರಬೇತಿ ಪಡೆದಿರುವುದಾಗಿ ಶಾಲಿನಿ ತಿಳಿಸಿದ್ದಾರೆ.

 ರನ್ನಿಂಗ್ ಬ್ಲೇಡ್‌ಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದೆ. ತರಬೇತಿಯ ಆರಂಭದಲ್ಲಿ  ತುಂಬಾ ಕಷ್ಟಕರವಾಗಿತ್ತು.  ಓಡಲು ಪ್ರಾರಂಭಿಸುವ ಮೊದಲು ನನ್ನ ಕೈಗಳನ್ನು ಹಾಕಲು ನನಗೆ ಏನಾದರೂ ಬೇಕಿತ್ತು. ಏಷ್ಯನ್ ಗೇಮ್ಸ್ ತಲುಪಿದ ನಂತರ 9 ವರ್ಷಗಳ ಕಠಿಣ ಪರಿಶ್ರಮವಿದೆ. ನಾವು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ ಎಂದು ಹೇಳಿದ್ದಾರೆ.  ಪ್ರಸ್ತುತ ಭಾರತವು ಒಲಿಂಪಿಕ್ಸ್‌ಗಿಂತ ಪ್ಯಾರಾಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುತ್ತಿದೆ ಎನ್ನುವ ಸಂತೋಷವೂ ಶಾಲಿನಿ ಅವರಿಗೆ ಇದೆ.
 

ಕೂದಲು ಬಿಟ್ಕೊಂಡು ತಿರುಗೋದು ಯಾವಾಗ ಗೊತ್ತಾ? ಹೆಣ್ಣುಮಕ್ಕಳಿಗೆ ನಟಿ ಭಾರತಿ ಹೀಗೊಂದು ಪಾಠ...

tags
vuukle one pixel image
click me!