ಲಂಡನ್‌ನಲ್ಲಿ ಹುಟ್ಟಲಿದೆ ವಿರುಷ್ಕಾ ಎರಡನೇ ಮಗು, ಡೆಲಿವರಿ ಡೇಟ್ ಏನು?

By Suvarna News  |  First Published Feb 17, 2024, 1:13 PM IST

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರಸ್ತುತ ಲಂಡನ್‌ನಲ್ಲಿದ್ದು, ಅಲ್ಲಿಯೇ ತಮ್ಮ ಎರಡನೇ ಮಗುವನ್ನು ಬರ ಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ ಎನ್ನಲಾಗಿದೆ. 


ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಎರಡನೇ ಮಗು ಹುಟ್ಟುವ ಸಮಯ ತುಂಬಿತಾ? ಬಹುಷಃ ತುಂಬಾ ಹತ್ತಿರದಲ್ಲಿದೆ ಎನ್ನುತ್ತಿವೆ ವದಂತಿಗಳು. ಏಕೆಂದರೆ, ವಿರುಷ್ಕಾ ದಂಪತಿ ಲಂಡನ್‌ನಲ್ಲಿದ್ದು, ಅಲ್ಲಿಯೇ ಎರಡನೇ ಮಗುವನ್ನು ಬರ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. 

ಈ ಸೆಲೆಬ್ರಿಟಿ ಜೋಡಿ ತಮ್ಮ ಮಗುವಿನ ಆಗಮನದ ಬಗ್ಗೆ ಅಧಿಕೃತವಾಗಿ ದೃಢೀಕರಿಸದಿದ್ದರೂ, ಉದ್ಯಮಿ ಹರ್ಷ್ ಗೋಯೆಂಕಾ ಅವರು ಟ್ವೀಟ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲ ಕೆರಳಿಸಿದ್ದಾರೆ. ಸೆಲೆಬ್ರಿಟಿ ದಂಪತಿಗಳು ಶೀಘ್ರದಲ್ಲೇ ಲಂಡನ್‌ನಲ್ಲಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಬಹುದು ಎಂದು ಅವರು ಸೂಚಿಸಿದ್ದಾರೆ.

Tap to resize

Latest Videos

undefined

ಟ್ವೀಟ್‌ನಲ್ಲೇನಿದೆ?
'ಮುಂದಿನ ದಿನಗಳಲ್ಲಿ ಹೊಸ ಮಗು ಜನಿಸಲಿದೆ! ಮಗು ಶ್ರೇಷ್ಠ ಕ್ರಿಕೆಟ್ ಪಟು ತಂದೆಯಂತೆ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆಯೋ ಅಥವಾ ಅದು ತಾಯಿಯನ್ನು ಅನುಸರಿಸಿ ಚಲನಚಿತ್ರ ತಾರೆಯಾಗಬಹುದೇ?' ಎಂದು ಗೋಯೆಂಕಾ ಟ್ವೀಟ್ ಮಾಡಿದ್ದಾರೆ. ಜೊತೆಗೆ, 'ಮೇಡ್ ಇನ್ ಇಂಡಿಯಾ' ಮತ್ತು 'ಟು ಬಿ ಬಾರ್ನ್ ಇನ್ ಲಂಡನ್' ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಸಹ ಬಳಸಿದ್ದಾರೆ. ಈ ಟ್ವೀಟ್ ಓದಿದ ಪ್ರತಿಯೊಬ್ಬರೂ ಇದು ವಿರುಷ್ಕಾ ಎರಡನೇ ಮಗುವಿನ ಕುರಿತು ಎಂದು ಹೇಳುವುದರೊಂದಿಗೆ ಹಲವಾರು ಪ್ರತಿಕ್ರಿಯೆ ನೀಡುತ್ತಿದ್ದಾರೆ. 

ಪ್ರೇಮಿಗಳ ದಿನದಂದೇ ವಿವಾಹ ವಾರ್ಷಿಕೋತ್ಸವ: 2ನೇ ಮಗನ ಮುಖ ರಿವೀಲ್​ ಮಾಡಿದ ಅಗ್ನಿಸಾಕ್ಷಿ ನಟ...
 
ಫೆಬ್ರವರಿ 3, 2024ರಂದು, ಎಬಿ ಡಿವಿಲಿಯರ್ಸ್ ಅವರು ಟೆಸ್ಟ್ ಸರಣಿಯಿಂದ ವಿರಾಟ್ ಕೊಹ್ಲಿ ಅನುಪಸ್ಥಿತಿಯನ್ನು ತಿಳಿಸುವ ಯೂಟ್ಯೂಬ್ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದರು. ವೀಡಿಯೊದಲ್ಲಿ, ಭಾರತೀಯ ಕ್ರಿಕೆಟಿಗನ ವೈಯಕ್ತಿಕ ಜೀವನದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಅವರು ವೀಕ್ಷಕರಿಗೆ ಭರವಸೆ ನೀಡಿದರು. ಎಬಿ ಡಿವಿಲಿಯರ್ಸ್ ವಿರಾಟ್ ತನ್ನ ಕುಟುಂಬಕ್ಕೆ ಆದ್ಯತೆ ನೀಡಿದ್ದಕ್ಕಾಗಿ ಶ್ಲಾಘಿಸಿದರು ಮತ್ತು ಭಾರತದ ಮಾಜಿ ನಾಯಕ ಮತ್ತು ಅವರ ಪತ್ನಿ ಅನುಷ್ಕಾ ತಮ್ಮ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದರು.

ಮಾಧುರಿ ದೀಕ್ಷಿತ್​ಗೆ ಬಿಗ್​ಬಾಸ್​ ಅಂಕಿತಾ ಸೆಡ್ಡು- ಧಕ್​ ಧಕ್​ ಎಂದು ಕಿಚ್ಚು ಹೊತ್ತಿಸಿದ ಕಾಂಟ್ರವರ್ಸಿ ಕ್ವೀನ್​!

2017ರಲ್ಲಿ ವಿರಾಟ್ ಮತ್ತು ಅನುಷ್ಕಾ ವಿವಾಹವಾದರು. ಅವರ ಮೊದಲ ಮಗು ವಾಮಿಕಾ 2021 ರಲ್ಲಿ ಜನಿಸಿತು. ಇದೀಗ ಎರಡನೇ ಮಗು ಲಂಡನ್‌ನಲ್ಲಿ ಈ ಜಗತ್ತಿಗೆ ಕಾಲಿಡಲು ದಿನಗ

click me!