ಶೀಘ್ರ ನೀರಜ್ ಚೋಪ್ರಾ- ಪಿವಿ ಸಿಂಧು ಮದುವೆ? ಫೋಟೋ ಹಾಕಿ ಫ್ಯಾನ್ಸ್ ತಲೆಗೆ ಹುಳ ಬಿಟ್ರು ಸ್ಪೋರ್ಟ್ ಸ್ಟಾರ್ಸ್ !

By Suvarna News  |  First Published Feb 6, 2024, 11:39 AM IST

ಅರೆ, ಬ್ಯಾಟ್ಮಿಂಟನ್ ತಾರೆ ಪಿವಿ ಸಿಂಧು ಹಾಗೂ ಜಾವೆಲಿನ್ ಪಟು ನೀರಜ್ ಚೋಪ್ರಾ ಮದ್ವೆಯಾಗ್ತಾ ಇದಾರಾ? ಹೀಗೊಂದು ದೊಡ್ಡ ಅನುಮಾನ ಹುಟ್ಟು ಹಾಕಿದಾರೆ ಈ ಇಬ್ಬರೂ ಕ್ರೀಡಾಪಟುಗಳು ಸೇರಿ. ಇದಕ್ಕೆ ಕಾರಣ ಈ ಇಬ್ಬರೂ ಸೇರ್ ಮಾಡಿರೋ ಫೋಟೋಸ್..


ಬ್ಯಾಟ್ಮಿಂಟನ್ ತಾರೆ, ಎರಡು ಬಾರಿ ಒಲಿಂಪಿಕ್ ಮೆಡಲ್ ಗೆದ್ದ ಪಿವಿ ಸಿಂಧು ಹಾಗೂ ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಪಟು ನೀರಜ್ ಚೋಪ್ರಾ ಭಾರತದ ಹೆಮ್ಮೆಯ ಕ್ರೀಡಾಪಟುಗಳು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಈಗ ಇವರಿಬ್ರೂ ಮದುವೆಯಾಗ್ತಿದಾರಾ ಎಂಬ ಅನುಮಾನ ಇಬ್ಬರ ಫ್ಯಾನ್ಸ್‌ಗಳಲ್ಲೂ ರೋಮಾಂಚನ ಹುಟ್ಟಿಸಿದೆ. 

ಈ ಅನುಮಾನ ಹೊಗೆಯಾಡೋಕೆ ಕಾರಣ ಇನ್ಸ್ಟಾಗ್ರಾಂನಲ್ಲಿ ಈ ಇಬ್ಬರೂ ಕ್ರೀಡಾಪಟುಗಳು ಹಾಕಿರುವ ಪೋಟೋಗಳು.
ಹೌದು, ಅತ್ತ ಪಿವಿ ಸಿಂಧು ತನ್ನ ಇನ್ಸ್ಟಾ ಖಾತೆಯಲ್ಲಿ ಜಾವೆಲಿನ್ ಫೋಟೋ 'ಇದು ಹೇಗೆ ನನ್ನ ಬಳಿ ಬಂತು? ಗೆಸ್ ಮಾಡ್ತೀರಾ' ಅಂತ ಕೇಳಿದ್ರೆ, ಇತ್ತ ನೀರಜ್ ಕೂಡಾ ತನ್ನ ಖಾತೆಯಲ್ಲಿ ಬ್ಯಾಟ್ಮಿಂಟನ್ ಸೆಟ್ ಚಿತ್ರ ಹಾಕಿ - 'ಇದರರ್ಥವೇನು ಗೆಸ್ ಮಾಡ್ತೀರಾ' ಕೇಳಿದಾರೆ. 
ಅವರ ಕ್ರೀಡೆಯ ಫೋಟೋ ಇವರು, ಇವರ ಕ್ರೀಡೆಯ ಸಂಕೇತದ ಚಿತ್ರ ಅವ್ರು ಹಾಕಿರೋದ್ ನೋಡ್ತಿದ್ರೆ ಈ ಇಬ್ರೂ ಸಧ್ಯದಲ್ಲೇ ಮದುವೆ ಆಗ್ತಿದಾರೆ, ಇದಂತೂ ದೊಡ್ಡ ಸುದ್ದಿ ಎಂದು ಫ್ಯಾನ್ಸ್ ಸಂಭ್ರಮಿಸ್ತಾ ಇದಾರೆ. 
ಮತ್ತೆ ಕೆಲವರು ಯಾವಾಗ ಮದುವೆ ಎಂದು ಕೇಳ್ತಿದ್ರೆ ಕೆಲ ನೆಟ್ಟಿಗರು ಕಂಗ್ರಾಜುಲಶನ್ಸ್ ಕೂಡಾ ಹೇಳ್ತಿದಾರೆ. 'ಜಾವೆಲಿನ್ ಮೀಟ್ಸ್ ಬ್ಯಾಂಡ್ಮಿಂಟನ್' ಎಂದು ಕ್ರೀಡಾಭಿಮಾನಿಗಳು ಖುಷಿಯಾಗಿದ್ದಾರೆ.

Tap to resize

Latest Videos

undefined

ನೀರಜ್ ಹಾಗೂ ಸಿಂದು ಇಬ್ಬರೂ ಏಕಕಾಲದಲ್ಲಿ ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. 

 

ಈ ಮಧ್ಯೆ ಕೆಲ ನೆಟ್ಟಿಗರು ಮಾತ್ರ, ಮದುವೆ ಗಿದುವೆ ಇರ್ಲಿಕ್ಕಿಲ್ಲ- ಇಬ್ಬರೂ ಕೊಲಾಬೊರೇಶನ್‌ನಲ್ಲಿ ಆಡ್ತಿರಬಹುದು ಎನ್ನುತ್ತಿದ್ದಾರೆ. ಬರುವ ಒಲಿಂಪಿಕ್ಸ್ ತಯಾರಿ ಇರಬಹುದು ಎಂದೂ ಹೇಳ್ತಿದಾರೆ. 'ಒಲಂಪಿಕ್ ಪಂದ್ಯಗಳು ನಡೆಯುತ್ತಿವೆ, ಆದ್ದರಿಂದ ನಮ್ಮ ದೇಶವನ್ನು ಬೆಂಬಲಿಸುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರತಿಯೊಬ್ಬ ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಎರಡೂ ಕ್ರೀಡಾಪಟುಗಳ ಸಹಯೋಗವಾಗಿದೆ' ಎಂದೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಎಲ್ಲದರ ನಡುವೆ, ಈ ಇಬ್ಬರೂ ಗೋಲ್ಡನ್ ಕ್ರೀಡಾಪಟುಗಳು ಮದುವೆಯಾಗುವ ವಿಷಯವೇ ನಿಜವಾಗಿರ್ಲಿ ಎಂದೂ ಕೆವರು ಹಾರೈಸುತ್ತಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by PV Sindhu (@pvsindhu1)

click me!