ಮೈಸೂರು ಅರಮನೆಯಲ್ಲಿ ಮತ್ತೊಂದು ಅರಸು ಕುಡಿ ಆಗಮನಕ್ಕೆ ಕ್ಷಣಗಣನೆ! ಅಲಮೇಲಮ್ಮನ ಶಾಪಕ್ಕೆ ಕೊನೆ !

By Bhavani BhatFirst Published Oct 4, 2024, 4:34 PM IST
Highlights

ಮೈಸೂರು ದಸರಾ ಸಂದರ್ಭದಲ್ಲಿ ರಾಣಿ ತ್ರಿಶಿಕಾ ಕುಮಾರಿ ಅವರ ಚಲನವಲನಗಳು, ಅವರು ಗರ್ಭಿಣಿ ಆಗಿರಬಹುದು ಎಂಬ ಸುದ್ದಿ ಸಂಚಲನಕ್ಕೆ ಆಸ್ಪದ ನೀಡಿವೆ. ಈ ಮೂಲಕ ಅಲಮೇಲಮ್ಮನ ಶಾಪ ಮರೆಗೆ ಸರಿಯುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.

ಮೈಸೂರಿನಲ್ಲಿ ನಾಡಹಬ್ಬ ದಸರಾ ಆರಂಭವಾಗಿದೆ. ನಿನ್ನೆಯೇ ಅರಮನೆಯಲ್ಲಿ ವೈಭವದ ಪೂಜೆಯೊಂದಿಗೆ ನವರಾತ್ರಿ ಹಬ್ಬದ ಶುರುವಾತು ಆಗಿದೆ. ಪೀಠಸ್ಥ ಮಹಾರಾಜ, ಈಗಿನ ಮೈಸೂರು ಸಂಸದ ಯದುವೀರ ಶ್ರೀಕಂಠದತ್ತ ಒಡೆಯರ್‌ ವೈಭವದ ಖಾಸಗಿ ದರ್ಬಾರ್‌ ನಡೆಸಿಕೊಟ್ಟಿದ್ದಾರೆ. ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಅವರೂ ಅಲ್ಲಿದ್ದರು. ಯುವರಾಜ್‌ ಆದ್ಯವೀರ್‌ ಕೂಡ ಅಲ್ಲಿದ್ದ.

ಆದ್ರೆ, ಗಮನ ಸೆಳೆದ ವಿಷಯ ಅಂದ್ರೆ ರಾಣಿ ತ್ರಿಶಿಕಾ ಕುಮಾರಿ. ಎಲ್ಲ ಅಲಂಕಾರ ಮಾಡಿಕೊಂಡಿದ್ದ ತ್ರಿಶಿಕಾ ಕುಮಾರಿ, ಹೊಟ್ಟೆಯನ್ನು ಮಾತ್ರ ಕವರ್‌ ಮಾಡಿಕೊಂಡಿದ್ದರು. ಸ್ವಲ್ಪ ಗಮನಿಸಿದರೆ, ತ್ರಿಶಿಕಾ ಕುಮಾರಿ ಮತ್ತೆ ಗರ್ಭಿಣಿಯಾಗಿದ್ದಾರೆ ಎಂದು ಎಂಥವರೂ ಹೇಳಬಹುದಾಗಿತ್ತು.  ಅವರ ನಡೆ ನುಡಿಯಲ್ಲಿ ಅವರು ತಮ್ಮ ಹೊಟ್ಟೆಯ ಭಾಗವನ್ನು ಪ್ರೊಟೆಕ್ಟ್‌ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಅಲ್ಲಿಗೆ ತ್ರಿಶಿಕಾ ಮತ್ತೆ ಗರ್ಭಿಣಿ ಆಗಿರುವುದು ಖಚಿತ. ಆದರೆ ಈ ವಿಚಾರವನ್ನೇನೂ ಮೈಸೂರು ಅರಮನೆ ಖಚಿತಪಡಿಸಿಲ್ಲ. ಈ ವಿಷಯದಲ್ಲಿ ಮೈಸೂರು ಅರಮನೆಯವರು ತುಂಬಾ ಮಗುಂ. ಕಳೆದ ಬಾರಿ ತ್ರಿಶಿಕಾ ಗರ್ಭಿಣಿಯಾಗಿದ್ದುದನ್ನು ಸುದ್ದಿ ಮಾಡಿದಾಗಲೇ ಯದುವೀರ್‌ ಮೀಡಿಯಾಗಳ ಮೇಲೆ ಗರಂ ಆಗಿದ್ದರು. "ಅದು ನಮ್ಮ ಖಾಸಗಿ ವಿಷಯ" ಅಂದಿದ್ದರು. ಆದ್ರೆ ಸದ್ಯದಲ್ಲೇ ರಾಣಿ ತ್ರಿಶಿಕಾ ಗುಡ್‌ ನ್ಯೂಸ್‌ ಕೊಡಲಿದ್ದಾರೆ ಅಂತಿವೆ ಅರಮನೆಯ ಗುಪ್ತ ಮೂಲಗಳು.

Latest Videos

ಅದೆಲ್ಲ ಸರಿ. ಇನ್ನೊಂದು ಮಗು ಮಾಡಿಕೊಳ್ಳಬೇಕು ಎಂಬ ಉತ್ಸಾಹ ಯದುವೀರ್‌ ದಂಪತಿಗೆ ಬಂದುದು ಕುತೂಹಲಕರ. ಯಾಕೆಂದರೆ ಅರಮನೆಯ ಹಿಂದಿನ ಹಿಸ್ಟರಿ ತೆಗೆದು ನೋಡಿದರೆ, ಎಲ್ಲ ಒಂದೊಂದೇ ಮಕ್ಕಳು. ಎರಡು ಮಕ್ಕಳು ಇರುವುದು ಅತ್ಯಪರೂಪ. ಯದುವೀರರಿಗೆ ಈಗಾಗಲೇ ಮುಂದಿನ ಅರಸು ಕುಡಿ ಆದ್ಯವೀರನ ರೂಪದಲ್ಲಿ ಬಂದಾಗಿದೆ. ಆದರೂ ಇನ್ನೊಂದು ಮಗು- ಹೆಣ್ಣಾದರೆ ಒಳ್ಳೆಯದು, ಇರಲಿ- ಅಂತ ಅಂದುಕೊಂಡಿರಬಹುದೋ ಏನೋ. 

ಅದಿರಲಿ, ಈಗ ಮೈಸೂರು ಅರಮನೆಯ ಇತಿಹಾಸ ಬಲ್ಲವರಿಗೆ ಇನ್ನೊಂದು ವಿಚಾರ ಕೊರೆಯುತ್ತದೆ. ಅದೇನೆಂದರೆ, ಅಲಮೇಲಮ್ಮನ ಶಾಪಕ್ಕೆ ಹಾಗಾದರೆ ಮುಕ್ತಿ ಸಿಕ್ಕಿತಾ? ಅನ್ನುವುದು. ʼʼಮೈಸೂರು ಅರಸರಿಗೆ ಮಕ್ಕಳಾಗದಿರಲಿ" ಅನ್ನುವುದು ಶಾಪದ ನುಡಿ. ಅದು ಇಲ್ಲಿಯವರೆಗೂ ಸುಳ್ಳಾದುದೇ ಇಲ್ಲ. ಅದಕ್ಕಾಗಿಯೇ ಇಲ್ಲಿ ಸಂತಾನವಿಲ್ಲದ ತಲೆಮಾರಿನಲ್ಲಿ ದತ್ತು ತೆಗೆದುಕೊಳ್ಳಲಾಗುತ್ತದೆ. ಆದರೆ ಅರಮನೆಯಲ್ಲಿಯೇ ಜನಿಸಿದ ಮಕ್ಕಳಿಗೆ ಮಕ್ಕಳಾಗುವುದಿಲ್ಲ. ಅಂದರೆ, ಈ ಹಿಂದಿನ ಶ್ರೀಕಂಠದತ್ತ ಅರಸಿಂಹರಾಜ ಒಡೆಯರ್‌ ಅವರು ಸ್ವತಃ ಅರಮನೆಯಲ್ಲೇ ಜನಿಸಿದ ಕುಡಿ. ಅವರಿಗೆ ಮಕ್ಕಳಾಗಲಿಲ್ಲ. ಅದಕ್ಕಾಗಿಯೇ ಯದುವೀರರನ್ನು ದತ್ತು ತೆಗೆದುಕೊಳ್ಳಲಾಯಿತ. ದತ್ತುಮಕ್ಕಳಿಗೆ ಮಕ್ಕಳಾಗದಿರಲಿ ಎಂದೇನೂ ಅಲಮೇಲಮ್ಮನ ಶಾಪ ಇಲ್ಲವಲ್ಲ? ಹೀಗಾಗಿ ಯದುವೀರರಿಗೆ ಮಕ್ಕಳಾಗಲು ಯಾವ ಅಭ್ಯಂತರವೂ ಇಲ್ಲ.

ಮೈಸೂರು ದಸರಾ: ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭಿಸಿದ ಯದುವೀರ ಒಡೆಯರ್
 

ಅಲಮೇಲಮ್ಮನ ಶಾಪದ ಪ್ರಭಾವ ಎನ್ನುವಂತೆ ಅಂದಿನಿಂದ ಇಂದಿನ ತನಕವೂ ತಲಕಾಡು ಮರಳು ತುಂಬಿದ ಪ್ರದೇಶವಾಗಿದೆ. ಹಾಗೆಯೇ ಇದರ ಸಮೀಪದ ಮಾಲಂಗಿ ಕೂಡ ಮಡುವಾಗಿ ಭಯಂಕರ ಪ್ರಪಾತವಾಗಿದೆ. ಅಷ್ಟೇ ಅಲ್ಲ ಆ ಕಾಲದಿಂದಲೂ ಮೈಸೂರು ಅರಸರಿಗೆ ಮಕ್ಕಳಾಗದೆ ಅವರು ದತ್ತು ಪಡೆದವರಿಗೆ ಮಾತ್ರ ಸಂತಾನ ಪ್ರಾಪ್ತವಾಗುವುದು ನಡೆದುಕೊಂಡು ಬರುತ್ತಿದೆ. ಈ ಘಟನೆ ನಡೆದ ಬಳಿಕ ಮಹಾರಾಜರು ಅಲಮೇಲಮ್ಮನ ಶಾಪ ನಿವಾರಣೆಗಾಗಿ ಅಲಮೇಲಮ್ಮನ ಚಿನ್ನದ ವಿಗ್ರಹವೊಂದನ್ನು ಮಾಡಿಸಿ ಅವರ ಕಾಲದಿಂದಲೇ ನವರಾತ್ರಿ ಹಬ್ಬದಲ್ಲಿ ಅದಕ್ಕೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಜಾರಿಗೆ ತಂದರು ಎನ್ನಲಾಗಿದ್ದು, ಅಲ್ಲಿಂದ ಇಲ್ಲಿವರೆಗೂ ನಿರಂತರವಾಗಿ ಪೂಜೆ ನಡೆದುಕೊಂಡು ಬಂದಿದೆ.

ಎಂಟು ವರ್ಷದ ಕೆಳಗೆ ನಾವಿಬ್ರೂ ಹೇಗಿದ್ವಿ ಗೊತ್ತಾ? ಕೇಳ್ತಿದ್ದಾರೆ ಮೈಸೂರು ಮಹಾರಾಣಿ

ಆದರೆ ಅರಮನೆಯಲ್ಲಿ ಘಟಿಸುತ್ತಿರುವ ಘಟನೆಗಳನ್ನು ನೋಡಿದರೆ, ಈ ಶಾಪವೂ ಸುಳ್ಳಾಗುವ ಕಾಲ ಬಂದಿತೇನೋ ಅನಿಸುತ್ತದೆ. ಯಾಕೆಂದರೆ ಇಬ್ಬಿಬ್ಬರು ಮಕ್ಕಳನ್ನು ಯಾವ ರಾಜರೂ ಇದುವರೆಗೆ ಹೊಂದಿಲ್ಲ.  ಮುಂದಿನ ತಲೆಮಾರಿನಲ್ಲಿ, ಒಬ್ಬರಲ್ಲಾ ಒಬ್ಬ ಮಕ್ಕಳಿಗೆ ಮಕ್ಕಳು ಆಗುವ ಚಾನ್ಸ್‌ ಇದ್ದೇ ಇರುತ್ತದಲ್ಲವೇ? ಒಂದು ವೇಳೆ ಪಟ್ಟವೇರಿದವರಿಗೆ ಮಗುವಾಗಲಿಲ್ಲ ಎಂದಿಟ್ಟುಕೊಂಡರೂ, ಇನ್ನೊಬ್ಬರಿಗೆ ಆಗಲೇಬೇಕಲ್ಲವೇ? ಇಂಥ ಲೆಕ್ಕಾಚಾರದಿಂದಲೇ ಎರಡನೇ ಮಗು ಜನಿಸಿದೆ- ಎಂಬುದು ಅರಮನೆಗೆ ಆಪ್ತರಾದ ಜ್ಯೋತಿಷಿಗಳೊಬ್ಬರ ಊಹೆ. 


  

click me!