ಕರ್ತವ್ಯದಲ್ಲಿ ನಿರತರಾಗಿದ್ದ ಮುಖ್ಯ ಪೊಲೀಸ್ ಪೇದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕುಟುಂಬಕ್ಕೆ ಆಧಾರವಾಗಿದ್ದ ಹೆಡ್‌ಕಾನ್ಸ್‌ಸ್ಟೇಬಲ್ ಅಗಲಿಕೆಯಿಂದ ಕುಟುಂಬ ಮಾತ್ರವಲ್ಲ, ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.
ಶಿವಮೊಗ್ಗ(ಡಿ.13) ಹೃದಯಾಘಾತ ಆರೋಗ್ಯ ಸಮಸ್ಯೆ ಭಾರತಕ್ಕೆ ಕಳೆದ ಹಲವು ವರ್ಷಗಳಿಂದ ಬಹುವಾಗಿ ಕಾಡುತ್ತಿದೆ. ಪ್ರಮುಖವಾಗಿ ಕೋವಿಡ್ ಬಳಿಕ ದೇಶದಲ್ಲಿನ ಹೃದಯಾಘಾತ ಪ್ರಮಾಣ ಹೆಚ್ಚಾಗಿದೆ. ಇದೀಗ ಕರ್ತವ್ಯದಲ್ಲಿದ್ದ 42 ವರ್ಷದ ಹೆಡ್ ಕಾನ್ಸ್‌ಸ್ಟೇಬಲ್ ಪರಶುರಾಮಪ್ಪ ಹೃದಯಾಘಾತದಿಂದ ಮೃತಪಟ್ಟ ಘಟನೆ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಡೆದಿದೆ. ಕುಟುಂಬಕ್ಕೆ ಆಧಾರವಾಗಿದ್ದ ಪರಶುರಾಮಪ್ಪ ತೀವ್ರ ಹೃದಯಾಘಾತ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.
ಇಆರ್‌ಎಸ್‌ಎಸ್ ವಾಹನದಲ್ಲಿ ಕರ್ತವ್ಯ ನಿರತರಾಗಿದ್ದ ಸಶಸ್ತ್ರ ಮೀಸಲು ಪಡೆಯ ಮುಖ್ಯ ಪೊಲೀಸ್ ಪೇದೆ ಪರಶುರಾಮಪ್ಪ ಶಿಸ್ತಿನ ಸಿಪಾಯಿಯಾಗಿದ್ದರು ಎಂದು ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರು ಹೇಳಿದ್ದಾರೆ. ಮೂಲತಃ ಸೊರಬ ತಾಲೂಕಿನ ಪರಶುರಾಮಪ್ಪ, ತೀರ್ಥಹಳ್ಳಿಯಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದರು.
ಕರ್ತವ್ಯದಲ್ಲಿದ್ದ ವೇಳೆ ತೀವ್ರ ನೋವಿನಿಂದ ಬಳಲಿ ಕುಸಿದು ಪರಶುರಾಮಪ್ಪನವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಶುರಾಮಪ್ಪ ಬದುಕುಳಿಯಲಿಲ್ಲ. ಮಾಹಿತಿ ತಿಳಿದು ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಪರಶುರಾಮಪ್ಪನವರನ್ನು ಹೇಗಾದರು ಮಾಡಿ ಉಳಿಸಿಕೊಡುವಂತೆ ಕುಟುಂಬಸ್ಥರು ಕಣ್ಮೀರಿಟ್ಟಿದ್ದರು. ಪರಶುರಾಮಪ್ಪ ಪಾರ್ಥೀವ ಶರೀರಕ್ಕೆ ತೀರ್ಥಹಳ್ಳಿ ಪೋಲೀಸರು ಗೌರವ ನಮನ ಸಲ್ಲಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನವ ಜೋಡಿಗೆ ಗಿಫ್ಟ್ ನೀಡಿದ ಬೆನ್ನಲ್ಲೇ ಹೃದಯಾಘಾತ, ಬೆಂಗಳೂರು ಅಮೇಜಾನ್ ಉದ್ಯೋಗಿ ಸಾವು!
ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಹೃದಯಾಘಾತದ ಸಂಖ್ಯೆ ಹೆಚ್ಚಾಗಿದೆ. ಹಿರಿಯರು, ಕಿರಿಯರು ಎಂದಿಲ್ಲ, ಎಲ್ಲಾ ವಯೋಮಾನದವರೂ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹೃದಯ ಸಂಬಂಧಿ ಗಂಭೀರ ಸಮಸ್ಯೆಗಳು ಕೋವಿಡ್ ಬಳಿಕ ಎದುರಾಗಿದೆ. ಮಕ್ಕಳು ಸೇರಿದಂತೆ ಹಲವರು ಹೃದಯಾಘಾತ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಭಾರತೀಯರ ಆತಂಕ ಹೆಚ್ಚಿಸಿದೆ. ಇದೀಗ ತೀರ್ಥಹಳ್ಳಿ ಪೋಲೀಸ್ ಕಾನ್ಸ್‌ಸ್ಟೇಬಲ್ ಕೂಡ ಹೃದಯಾಘಾತಕ್ಕೆ ಮೃತಪಟ್ಟಿರುವುದು ತೀವ್ರ ಆಘಾತ ತರಿಸಿದೆ.