
ಶಿವಮೊಗ್ಗ (ಜ.8) : ಚಾಕೊಲೇಟ್ ರೀತಿ ಕಂಡ ಇಲಿ ಪಾಷಾಣವನ್ನು ತಿಂದು ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಸಮೀಪದ ಮೇಲಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಅಂಗನವಾಡಿ ಶಾಲೆಗೆ ಹೋಗಿದ್ದ ಪುಟ ಬಾಲಕ ಮನೆಗೆ ಮರಳಿದ್ದಾನೆ. ಈ ವೇಳೆ ಇಲಿ ಸಾಯಿಸಲು ಇಟ್ಟಿದ್ದ ಪಾಷಾಣ(Rat Poison) ಕಣ್ಣಿಗೆ ಕಾಣಿಸಿದೆ. ನೋಡುವುದಕ್ಕೆ ಚಾಕೊಲೆಟ್ ರೀತಿ ಕಂಡಿದ್ದ ಪಾಷಾಣವನ್ನು ಮಗು ತಿಳಿಯದೇ ತಿಂದುಬಿಟ್ಟಿದೆ. ಪಾಷಾಣ ತಿಂದ ಬಳಿಕ ಮಗುವಿನ ಆರೋಗ್ಯದಲ್ಲಿ ತೀವ್ರ ಏರುಪೇರು ಆಗಿ ಮೃತಪಟ್ಟಿದೆ.
ಟೂತ್‌ಪೇಸ್ಟ್ ಎಂದು ಭಾವಿಸಿ ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಸಾವು
ಮೇಲಿನಕೊಪ್ಪ(Melinakoppa) ಗ್ರಾಮದ ಕೂಲಿಕಾರ್ಮಿಕ ಚಂದ್ರಪ್ಪ ಗೀತಾ ದಂಪತಿ ಪುತ್ರ 5 ವರ್ಷದ ಪ್ರೀತಂ(preetam) ಮೃತ ದುರ್ದೈವಿ, ಇಲಿಗಳ ಕಾಟ ತಾಳದೆ ಕೊಲ್ಲುಲು ಪಾಷಾಣ ಇಟ್ಟಿದ್ದರು. ಎಂದಿನಂತೆ ಅಂಗನವಾಡಿಗೆ ಹೋಗಿ ಮರಳಿದ್ದ ಮಗುವಿಗೆ ಇಲಿ ಪಾಷಾಣ ಕಂಡಿದೆ. ಚಾಕೊಲೆಟ್‌ನಂತೆ ಕಾಣಿಸಿದ್ದಕ್ಕೆ ಏನೋ ಮಗು ಪಾಷಾಣ ತಿಂದಿದೆ. ತೀವ್ರ ಅಸ್ವಸ್ಥವಾಗಿದ್ದ ಮಗುವನ್ನು ತೀರ್ಥಹಳ್ಳಿ ಪಟ್ಟಣದ ಜೆಸಿ ಆಸ್ಪತ್ರೆಗೆ ಕರೆತರುವ ವೇಳೆ ಮೃತನಾಗಿದ್ದಾನೆ. ಮಾಳೂರು ಠಾಣೆ(Maluru police station)ಯಲ್ಲಿ ದೂರು ದಾಖಲು.
ಉಪ್ಪಿನಂಗಡಿ; ಇಲಿ ಪಾಷಾಣ ತಿಂದು ಮೃತಪಟ್ಟ ಮಗು, ಪೋಷಕರೇ ಎಚ್ಚರ
ರೈಲಿನಿಂದ ಬಿದ್ದು ಮಹಿಳೆ ಸಾವು
ಮಂಡ್ಯ: ಚಲಿಸುತ್ತಿದ್ದ ರೈಲು ಗಾಡಿಯಿಂದ ಬಿದ್ದು ಅಪರಿಚಿತ ಮಹಿಳೆ ಸಾವನ್ನಪ್ಪಿರುವ ಘಟನೆ ಮದ್ದೂರು-ಹನಕೆರೆ ರೈಲು ನಿಲ್ದಾಣಗಳ ಮಧ್ಯೆ ನಡೆದಿದೆ. ಸುಮಾರು 40 ವರ್ಷ ವಯಸ್ಸಿನ ಅಪರಿಚಿ ಮಹಿಳೆ ಯಾವುದೋ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆನ್ನಲಾಗಿದೆ. ದೃಢಕಾಯ ಶರೀರ, ಗೋದಿ ಮೈಬಣ್ಣ, ದುಂಡನೆಯ ಮುಖ, ಚಪ್ಪಟೆ ಮೂಗು, ತಲೆಯಲ್ಲಿ ಸುಮಾರು 15 ಇಂಚು ಕಪ್ಪು ಕೂದಲು, ಮೂಗಿನಲ್ಲಿ ಮೂಗುತಿ, ಎರಡು ಕಾಲುಗಳಲ್ಲಿ ಬೆಳ್ಳಿ ಮಾದರಿಯ ಕಾಲು ಚೈನ್‌ಗಳು, ಸಿಮೆಂಚ್ ಬಣ್ಣದ ಜಿಪ್ ಮಾದರಿಯ ಶರ್ಚ್, ಮೆರೂನ್ ಬಣ್ಣದ ಚೂಡಿದಾರ್, ಪಿಂಕ್ ಬಣ್ಣದ ಪ್ಯಾಂಚ್ ಧರಿಸಿದ್ದಾರೆ. ಮೃತಳ ಎಡಗೈಯಲ್ಲಿ ಎಂಎ ಎಂಬ ಹಸಿರು ಅಚ್ಚೆ ಇರುತ್ತದೆ. ಮೈಸೂರು ರೈಲ್ವೆ ಪೊಲೀಸರು ಅಸಹಜ ಸಾವು ಪ್ರಕರಣ ದಾಲಿಸಿಕೊಂಡಿದ್ದಾರೆ. ವಾರಸುದಾರರಿದ್ದಲ್ಲಿ ರೈಲ್ವೆ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.