‘ಕೇಂದ್ರ, ಯಡಿಯೂರಪ್ಪ ಆಶೀರ್ವಾದದಿಂದ ರೈಲ್ವೆ ಅಭಿವೃದ್ಧಿ ಸಾಧ್ಯವಾಗಿದೆ’

By Web DeskFirst Published Nov 10, 2019, 12:37 PM IST
Highlights

ಶಿವಮೊಗ್ಗದಿಂದ ಚೆನೈ, ತಿರುಪತಿ, ಮೈಸೂರು ನಗರಗಳಿಗೆ ಮೂರು ಹೊಸ ರೈಲುಗಳಿಗೆ ಸಂಸದ ಬಿ ವೈ ರಾಘವೇಂದ್ರ|ಶಿವಮೊಗ್ಗ - ಶಿಕಾರಿಪುರ - ರಾಣಿಬೆನ್ನೂರು ರೈಲು ಮಾರ್ಗಕ್ಕೆ 1200 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ವೇಗೆ ಚಾಲನೆ|60 ಕೋಟಿ ವೆಚ್ಚದಲ್ಲಿ ಶಿವಮೊಗ್ಗದಲ್ಲಿ ರೈಲ್ವೆ ಟರ್ಮಿನಲ್ ಕಾಮಗಾರಿ ಆರಂಭ|
 

ಶಿವಮೊಗ್ಗ[ನ.10]: ಕಳೆದ 10 ವರ್ಷಗಳಿಂದ ರೈಲ್ವೆ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿದೆ. ಕೇಂದ್ರ ಸರ್ಕಾರ ಮತ್ತು ತಂದೆ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದದಿಂದ ರೈಲ್ವೆ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಅವರು ಹೇಳಿದ್ದಾರೆ.

ಭಾನುವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗದಿಂದ ಚೆನೈ, ತಿರುಪತಿ, ಮೈಸೂರು ನಗರಗಳಿಗೆ ಮೂರು ಹೊಸ ರೈಲುಗಳಿಗೆ ಸಂಸದ ಬಿ ವೈ ರಾಘವೇಂದ್ರ ಅವರು ಚಾಲನೆ ನೀಡಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಳಿಕ ಮಾತನಾಡಿದ ಅವರು, ಪ್ರಸ್ತುತ ವಾರದಲ್ಲಿ ಒಮ್ಮೆ ಮಾತ್ರ ಚೆನೈ ಮತ್ತು ತಿರುಪತಿಗೆ ಸಂಚರಿಸುವ ರೈಲುಗಳು ವಾರದಲ್ಲಿ ಎರಡು ಬಾರಿ ಸಂಚಾರ ಮಾಡಲು ಮನವಿ ಮಾಡಿದ್ದೇನೆ. ಶಿವಮೊಗ್ಗ - ಶಿಕಾರಿಪುರ - ರಾಣಿಬೆನ್ನೂರು ರೈಲು ಮಾರ್ಗಕ್ಕೆ 1200 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ವೇಗೆ ಚಾಲನೆ ನೀಡಲಾಗಿದೆ. 60 ಕೋಟಿ ವೆಚ್ಚದಲ್ಲಿ ಶಿವಮೊಗ್ಗದಲ್ಲಿ ರೈಲ್ವೆ ಟರ್ಮಿನಲ್ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು. 

ತುಮಕೂರು ಸಿದ್ದಗಂಗಾ ಶ್ರೀ ಗಳು ಬದುಕಿದ್ದಾಗ ರೈಲ್ವೆ ಒವರ್ ಬಿಡ್ಜ್ ಮಾಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಒಮ್ಮೆ ಆಶೀರ್ವಾದ ಪಡೆಯಲು ಹೋದಾಗ ಹೇಳಿದ್ದರು. ಆದರೆ ಶಿವಮೊಗ್ಗದಲ್ಲಿ ‌4 ರೈಲ್ವೆ ಒವರ್ ಬಿಡ್ಜ್ ಮಾಡಿಸಲಿದ್ದೇವೆ. ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ 8 ತಿಂಗಳಲ್ಲಿ ಮುಕ್ತಾಯ ಆಗಲಿದೆ. ಶಿವಮೊಗ್ಗ - ತುಮಕೂರು ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಲಿದೆ. ಸುಮಾರು 2 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಮೊಗ್ಗ ಜಿಲ್ಲೆಯ ಏತ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗವುದು ಎಂದು ತಿಳಿಸಿದ್ದಾರೆ. 
 

click me!