
ಶಿವಮೊಗ್ಗ (ಮಾ.30) ರಾಜ್ಯದ ಕೆಲೆವೆಡೆ ಭಾರಿ ಮಳೆಯಾಗಿದೆ. ಮತ್ತೆ ಕೆಲೆವೆಡೆ ಗಾಳಿ, ಗುಡುಗು ಸಹಿತ ಮಳೆಗೆ ಜನರು ತತ್ತರಿಸಿದ್ದಾರೆ.ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಸಿಡಿಲಿನ ಆಘಾತಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಸಿಡಿಲು ಬಡಿದು ಕೋಳಿ ಫಾರಂ ಮಾಲೀಕ ಮುಜೀಬ್ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹಾರನಹಳ್ಳಿ ರಾಮನಗರ ಗ್ರಾಮದ ನಿವಾಸಿ 47ರ ಹರೆಯದ ಮುಜೀಬ್ ಸಿಡಿಲಿಗೆ ಬಲಿಯಾಗಿದ್ದಾರೆ.
ಮೃತ ಮುಜೀಬ್ ಕೋಳಿ ಫಾರಂ ನಡೆಸುತ್ತಿದ್ದಾರೆ. ಶಿವಮೊಗ್ಗದ ಹೆಲೆವೆಡೆ ಸಿಡಿಲು ಬಡಿದ ಘಟನೆ ನಡೆದಿದೆ. ಈ ಪೈಕಿ ಮಜೀಬ್ ಕೋಳಿ ಫಾರಂ ಅಗಂಡಿಯಲ್ಲಿರುವಾಗ ಸಿಡಿಲು ಬಡಿದಿದೆ. ಆಕಸ್ಮಿಕವಾಗಿ ಸಿಡಿಲು ಬಡಿದ ಪರಿಣಾಮ ಮುಜೀಬ್ ಸ್ಥಳದಲ್ಲೇ ಅಸುನೀಗಿದ್ದಾರೆ.ಸಿಡಿಲಿನ ಆಘಾತದಿಂದ ಕೋಳಿ ಫಾರಂನಲ್ಲಿದ್ದ ಕೆಲ ಕೋಳಿಗಳೂ ಮೃತಪಟ್ಟಿವೆ ಎನ್ನಲಾಗಿದೆ. ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ
ಶಿವಮೊಗ್ಗ ಆಂಜನೇಯ ವಿನೋಬನಗರ ಆಂಜನೇಯ ದೇವಸ್ಥಾನ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದ ಘಟನೆ ವರದಿಯಾಗಿದೆ. ಹೊಸ ಮನೆ ಬಡಾವಣೆಯ 4 ನೇ ತಿರುವಿನಲ್ಲಿ ತೆಂಗಿನ ಮರಕ್ಕೂ ಸಿಡಿಲು ಬಡಿದಿದೆ.
ಸಕಲೇಶಪುರ ತಾಲ್ಲೂಕಿನ ಹರಗರಹಳ್ಳಿಯಲ್ಲಿ ಶನಿವಾರ ಭಾರಿ ಮಳೆ ಸುರಿದಿದೆ. ಇದೇ ವೇಳೆ ಸಿಡಿಲಿನ ಆಘಾತವೂ ಎದುರಾಗಿದೆ. ಹಾಸನ ಸಕಲೇಶಪುರ ದೀನಹಳ್ಳಿ ಎಸ್ಟೇಟ್ ನಲ್ಲಿ ಸಿಡಿಲು ಬಡಿದು ಮೂವರು ಗಾಯಗೊಂಡ ಘಟನೆ ನಡೆದಿದೆ. ದೀನಹಳ್ಳಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಕುದುರಂಗಿ ಗ್ರಾಮದ ರೂಪ,ಸುಮಿತ್ರ, ಮತ್ತು ಜಯಮ್ಮ ಸಿಡಿಲು ಬಡಿದು ಗಾಯಗೊಂಡಿದ್ದಾರೆ. ಸಕಲೇಶಪುರ ಸರ್ಕಾರಿ ಆಸ್ಪತ್ರೆ ಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ.
ದಾಂಡೇಲಿಯಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಇದೇ ವೇಳೆ ದಾಂಡೇಲಿಯ ಟೌನ್ ಶಿಪ್ ನಿವಾಸಿ ಎಸ್ ಪಿ ನಾಯ್ಕ ಎನ್ನುವರ ಮನೆಯ ತೆಂಗಿನ ಮರಕ್ಕೆ ಬಡಿದ ಸಿಡಿಲು ಬಡಿದಿದೆ. ಸ್ಥಳೀಯರು ಅಗ್ನಿಶಾಮಕ ಹಾಗೂ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ್ದಾರೆ.