ಹೃದಯಾಘಾತದಿಂದ ನಿಧನ ಹೊಂದಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಗಮಕ ಗಂಧರ್ವ ಹೆಚ್.ಆರ್.ಕೇಶವಮೂರ್ತಿ(88) ಇವರ ಅಂತ್ಯಕ್ರಿಯೆಯು ಇಂದು ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ಶಿವಮೊಗ್ಗ (ಡಿ.22): ನಿನ್ನೆ ಹೃದಯಾಘಾತದಿಂದ ನಿಧನ ಹೊಂದಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಗಮಕ ಗಂಧರ್ವ ಹೆಚ್.ಆರ್.ಕೇಶವಮೂರ್ತಿ(88) ಇವರ ಅಂತ್ಯಕ್ರಿಯೆಯು ಇಂದು ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ಮೃತರ ಗೌರವಾರ್ಥ ಸರ್ಕಾರ, ಸರ್ಕಾರಿ ಗೌರವದೊಂದಿಗೆ ಅಂತಿಮ ಕ್ರಿಯೆ ನಡೆಸಲು ಆದೇಶಿಸಿರುವನ್ವಯ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಮಹಾನಗರಪಾಲಿಕೆ ಮಹಾಪೌರ ಶಿವಕುಮಾರ್ ಸೇರಿದಂತೆ ಇತರೆ ಗಣ್ಯರು ಪಾರ್ಥೀವ ಶರೀರಕ್ಕೆ ಪುಷ್ಪಮಾಲೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು. ನಂತರ ಶಿಷ್ಟಾಚಾರದಂತೆ ಪೊಲೀಸ್ ಇಲಾಖೆ ಮೂರು ಸುತ್ತು ಕುಶಾಲ ತೋಪು ಹಾರಿಸುವ ಮೂಲಕ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
Shivamogga: ಪದ್ಮಶ್ರೀ ಪುರಸ್ಕೃತ ಗಮಕ ಗಂಧರ್ವ ಕೇಶವಮೂರ್ತಿ ಇನ್ನಿಲ್ಲ
ಈ ವೇಳೆ ಆರ್ ಎಸ್ ಎಸ್ ಪ್ರಮುಖರಾದ ಪಟ್ಟಾಭಿರಾಮ, ಮಾಜಿ ಎಂಎಲ್ಸಿ ಭಾನುಪ್ರಕಾಶ್, ಮೃತರ ಪತ್ನಿ, ಪುತ್ರಿ, ಬಂಧುಗಳು, ವಿಪ್ರ ಸಮಾಜದ ಮುಖಂಡರು, ಸಾರ್ವಜನಿಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ಪಾಲ್ಗೊಂಡಿದ್ದರು.