ಮಂಗಳದ ಮೇಲೆ ನಿಮ್ಮ ಹೆಸರು ಬರೆಯಬೇಕೆ? NASAದಿಂದ ಸುವರ್ಣಾವಕಾಶ!

By Web Desk  |  First Published May 25, 2019, 9:11 PM IST
  • 2020ರಲ್ಲಿ ಮಂಗಳಗ್ರಹಕ್ಕೆ ಹೊಸ ರೋವರನ್ನು ಕಳುಹಿಸಲಿರುವ NASA 
  •  ಚಿಪ್‌ನಲ್ಲಿ ಸಾರ್ವಜನಿಕರ ಹೆಸರನ್ನು ಕೆತ್ತಿ ಅಲ್ಲಿಗೆ ರವಾನೆ ಮಾಡುವ ವ್ಯವಸ್ಥೆ!

ಮಂಗಳನ ಮೇಲೆ ಮಾನವನು ಕಾಲಿಡುವ ಕನಸಿನ್ನೂ ಕನಸಾಗಿಯೇ ಇದೆ. 1997 ರಲ್ಲಿ ಅಮೇರಿಕದ ಪಾಥ್‌ಫೈಂಡರ್ ಅಲ್ಲಿ ಠಿಕಾಣಿ ಹೂಡಿ ಅಲ್ಲಿನ ಚಿತ್ರಗಳನ್ನು ಕಳುಹಿಸಿದ ಮೇಲಂತೂ ಹೊಸ ಸಾಧ್ಯತೆಯೊಂದು ಕಾಣಿಸಿಕೊಂಡು ಮಂಗಳದ ಮೇಲೆ ಕನಸಿನ ಮಹಲನ್ನು ಕಟ್ಟಿಕೊಂಡವರಿಗೇನೂ ಕಮ್ಮಿ ಇಲ್ಲ. ಅಷ್ಟಕ್ಕೂ ಆ ಮಂಗಳ ದಿನ ಅದ್ಯಾವಾಗ ಬರುತ್ತೋ ಆದರೆ ಮಂಗಳಕ್ಕೆ ಮುಂಗಡ ಟಿಕೆಟ್ ಬುಕಿಂಗ್ ಅದಾಗಲೇ ಆರಂಭವಾಗಿದೆ. 

ಅರೇ ಇಸ್ಕಿ ಮೊದಲ ಲ್ಯಾಂಡಿಂಗೇ ಇನ್ನೂ ನಿಗದಿಯಾಗಿಲ್ಲ ಇದೇನು ಹೊಸತು ಅಂದ್ಕೊಂಡ್ರಾ? ವಿಷಯ ಇಷ್ಟೇ 2020 ಕ್ಕೆ NASA ಹೊಸತೊಂದು ರೋವರನ್ನು ಮಂಗಳಗ್ರಹಕ್ಕೆ ಕಳುಹಿಸಲಿದೆ. ಅದಕ್ಕಾಗಿ ವಿನೂತನ ಯೋಜನೆಯೊಂದನ್ನು NASA ರೂಪಿಸಿದ್ದು ಈ ರೋವರ್‌ನಲ್ಲಿ ಆಳವಡಿಸಲಾಗುವ ಚಿಪ್ ಒಂದರಲ್ಲಿ ಸಾರ್ವಜನಿಕರ ಹೆಸರನ್ನು ಕೆತ್ತಿ ಅಲ್ಲಿಗೆ ರವಾನೆ ಮಾಡಲಾಗುತ್ತದೆ.

Tap to resize

Latest Videos

undefined

ಅದಕ್ಕಾಗಿಯೇ ವಿನ್ಯಾಸಗೊಂಡ ವಿಶೇಷ ಲೇಸರ್ ಒಂದು ಪುಟ್ಟ ಸಿಲಿಕಾನ್ ಚಿಪ್‌ನಲ್ಲಿ ಮಾನವನ ಕೂದಲಿನ ಒಂದು ಸಾವಿರದ ಭಾಗದಷ್ಟು ಪುಟ್ಟ ಅಕ್ಷರಗಳನ್ನು ಗೀಚಲಿದ್ದು ಇದಕ್ಕಾಗಿ ನೊಂದಣಿ ಈಗಾಗಲೇ ಆರಂಭವಾಗಿದೆ. 

ಇದನ್ನೂ ಓದಿ | ಪಾಕ್‌ ಗಡಿ ಮೇಲೆ ಕಣ್ಣಿಡುವ ಉಪಗ್ರಹ ಆಗಸಕ್ಕೆ!

ಇದಕ್ಕಾಗಿ NASAದ ಅಧಿಕೃತ ವೆಬ್‍ಸೈಟ್ https://mars.nasa.gov/participate/send-your-name ಗೆ ಹೋಗಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಆ ಪುಟ್ಟ ಚಿಪ್‌ನಲ್ಲಿ ಎರಡು ಮಿಲಿಯನ್ ಹೆಸರುಗಳನ್ನು ಕೆತ್ತುವ ಅವಕಾಶವಿದ್ದು ಮೊದಲು ನೊಂದಾಯಿಸಲ್ಪಡುವ ಹೆಸರುಗಳಿಗೆ ಪ್ರಾಧಾನ್ಯತೆಯ ಮೇಲೆ ಅವಕಾಶ ನೀಡಲಾಗುತ್ತದೆ. 

ಇದಕ್ಕಾಗಿ ಕೊನೆಯ ದಿನಾಂಕ ಸಪ್ಟೆಂಬರ್ 30 ರವರೆಗೆ ಅವಕಾಶವಿದೆ. ಆಯ್ಕೆಯಾದ ಹೆಸರುಗಳಿಗೆ NASAದ ಮಾರ್ಸ್ ಬೋರ್ಡಿಂಗ್‌ ಪಾಸ್‌ನ್ನು ಕಳುಹಿಸಲಾಗುತ್ತದೆ. 

2020ರ ಫ್ಲೋರಿಡಾದ ಕೆನೆಡಿ ಸ್ಪೇಸ್ ಸೆಂಟರ್‌ನಿಂದ ಉಡಾವಣೆಗೊಳ್ಳುವ ಈ ರೋವರನ್ನು ಮಾನವನ ಹೆಜ್ಜೆಯ ಮೊದಲಿನ ಪಯಣವೆಂದೇ ಹೇಳಲಾಗುತ್ತಿದೆ.  ಇನ್ನೇಕೆ ತಡ ಈಗಲೇ ಹೆಸರನ್ನು ನೊಂದಾಯಿಸಿಕೊಳ್ಳಿ . ಮಂಗಳದ ಮೇಲೆ ನಿಮ್ಮ ಹೆಸರನ್ನೂ ಬರೆಯಿರಿ. 

-ಸುನೀಲ್ ಬಾರ್ಕೂರ್
 

click me!