ಹೊಸ ಜೀವ ಸೃಷ್ಟಿಸಿ ಸೃಷ್ಟಿಯತ್ತ ಹಾರಿದ್ದ ಗಗನಯಾತ್ರಿ!

By Web Desk  |  First Published May 12, 2019, 2:02 PM IST

ಇಂದು ವಿಶ್ವ ತಾಯಂದಿರ ದಿನಾಚರಣೆ| ಜನ್ಮವಿತ್ತ ತಾಯಿಗೆ ವಿಶ್ವದ ನಮನ| ವಿಶ್ವ ತಾಯಂದಿರ ದಿನಕ್ಕೆ ನಾಸಾದ ಶುಭಾಶಯ|  ಮೊದಲ ಮಹಿಳಾ ಗಗನಯಾತ್ರಿಗಳ ತಂಡ ನೆನೆದ ನಾಸಾ| 1983ರಲ್ಲಿ ನಾಸಾದ ಮೊದಲ ಮಹಿಳಾ ಗಗನಯಾತ್ರಿಗಳ ತಂಡದಿಂದ ಬಾಹ್ಯಾಕಾಶ ಯಾತ್ರೆ| ಯೋಜನೆಯ ಸಂದರ್ಭದಲ್ಲಿ ಗರ್ಭವತಿಯಾಗಿದ್ದ ತಂಡದ ಸದಸ್ಯೆ ಆ್ಯನಾ ಲೀ ಫಿಶರ್| ಹೆಣ್ಣು ಮಗುವಿಗೆ ಜನ್ಮವಿತ್ತು ಬಾಹ್ಯಾಕಾಶಕ್ಕೆ ಹಾರಿದ್ದ ಅ್ಯನಾ|


ವಾಷಿಂಗ್ಟನ್(ಮೇ.12): ತಾಯಿ ಎಂಬ ಎರಡಕ್ಷರದಲ್ಲಿ ಇಡೀ ಸೃಷ್ಟಿಯ ಒಳಗೊಳ್ಳುವಿಕೆ ಇದೆ. ಹೊಸ ಜೀವವೊಂದನ್ನು ವಸುಧೆಯ ಮಡಿಲಿಗೆ ಹಾಕುವ ಶಕ್ತಿ ಹೆಣ್ಣಿಗೆ ಮಾತ್ರ ಇರುವುದು.

ನಮಗೊಂದು ಜೀವ, ಆಕಾರ, ಜೀವನ, ಸಭ್ಯತೆ ಕೊಟ್ಟ ಆ ತಾಯಿಯನ್ನು ಇಂದು ಇಡೀ ಜಗತ್ತು ವಿಶ್ವ ಅಮ್ಮಂದಿರ ದಿನದ ಅಂಗವಾಗಿ ನೆನೆಯುತ್ತಿದೆ. 

Tap to resize

Latest Videos

undefined

ಅದರಂತೆ ನಾಸಾ ಕೂಡ ತನ್ನ ಮಹಿಳಾ ಸಹೋದ್ಯೋಗಿಗಳಿಗೆ ವಿಶ್ವ ಅಮ್ಮಂದಿರ ದಿನದ ಶುಭಾಶಯ ತಿಳಿಸಿದೆ. ಅಲ್ಲದೇ ಸಂಸ್ಥೆಗಾಗಿ ದುಡಿದ ಅನೇಕ ಮಹನೀಯರನ್ನು ನೆನೆದಿದೆ.

Celebrating with my mom - Dr. Anna Lee Fisher and the first Mom in space! Coming up right now with on pic.twitter.com/YRkTbjHqcu

— Kristin Fisher (@KristinFisher)

ಅದರಲ್ಲಿ ಪ್ರಮುಖವಾಗಿ ನಾಸಾದ ಮೊದಲ ಮಹಿಳಾ ಗಗನಯಾತ್ರಿಗಳ ತಂಡದಲ್ಲಿದ್ದ ಆ್ಯನಾ ಲೀ ಫಿಶರ್ ಅವರನ್ನು ನಾಸಾ ಸ್ಮರಿಸಿದೆ. 1983ರಲ್ಲಿ ನಾಸಾ ತನ್ನ ಮೊದಲ ಮಹಿಳಾ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಆ ತಂಡದಲ್ಲಿ ಆ್ಯನಾ ಲೀ ಫಿಶರ್ ಕೂಡ ಒಬ್ಬರು.

ನಾಸಾ 33 ಆ್ಯನಾ ಅವರನ್ನು ಬಾಹ್ಯಾಕಾಶ ಪ್ರವಾಸಕ್ಕೆ ಆಯ್ಕೆ ಮಾಡಿದಾಗ ಆಕೆ ಗರ್ಭವತಿ. ಆದರೆ ನಾಸಾದ ಪ್ರಸ್ತಾವನೆ ತಿರಸ್ಕರಿಸದ ಆ್ಯನಾ, ಹೆಣ್ಣುಮಗುವಿಗೆ ಜನ್ಮವಿತ್ತ ಬಳಿಕ ಯೋಜನಮೆಗೆ ಸಿದ್ಧರಾದರು.

ಕ್ರಿಸ್ಟಿನ್ ಎಂಬ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ ಆ್ಯನಾ, ನಂತರ ಬಾಹ್ಯಾಕಾಶ ಯಾತ್ರೆಗೆ ಹೊರಟು ಅದರಲ್ಲಿ ಯಶಸ್ವಿಯಾದರು.

ಸದ್ಯ ಕ್ರಿಸ್ಟಿನಾ ಫಾಕ್ಸ್ ನ್ಯೂಸ್ ನಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿರುವ ಕ್ರಿಸ್ಟಿನಾ ಕೂಡ ಮುದ್ದಾದ ಹೆಣ್ಣುಮಗುವಿನ ತಾಯಿಯಾಗಿದ್ದಾರೆ. ತಮ್ಮ ಜೀವನದಲ್ಲಿ ತಾಯಿ ಆ್ಯನಾ ಪ್ರಭಾವ ಗಾಢವಾಗಿದೆ ಅಂತಾರೆ ಕ್ರಿಸ್ಟಿನಾ.

ನಾಸಾದ ಮೊದಲ ಮಹಿಳಾ ಗಗನಯಾತ್ರಿಗಳ ತಂಡದ ಸದಸ್ಯರು, ಇದೀಗ ತಮ್ಮ ಮೊದಲ ಯಶಶ್ವಿ ಬಾಹ್ಯಾಕಾಶ ಯಾತ್ರೆಯ 35 ನೇ ವರ್ಷಾಚರಣೆಯ ಸಿದ್ಧತೆ ನಡೆಸಿರುವುದು ವಿಶೇಷ.

click me!