ಪೂರ್ವ ಕರಾವಳಿಯ ರಾಜ್ಯಗಳಿಗೆ ಅಪ್ಪಳಿಸಿದ ಫನಿ| ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಂಡಮಾರುತ ಅಪ್ಪಳಿಸಿದರೂ ಹೆಚ್ಚಿನ ಪ್ರಮಾಣದ ಸಾವು ನೋವು ಸಂಭವಿಸಿಲ್ಲ| 5 ಉಪಗ್ರಹಗಳಿಂದಾಗಿ ‘ಫನಿ’ ಹಾನಿ ತಗ್ಗಿತು
ಚೆನ್ನೈ[ಮೇ.06]: ಗಂಟೆಗೆ 200 ಕಿ.ಮೀ. ವೇಗದಲ್ಲಿ ಫನಿ ಚಂಡಮಾರುತ ಪೂರ್ವ ಕರಾವಳಿಯ ರಾಜ್ಯಗಳಿಗೆ ಅಪ್ಪಳಿಸಿದರೂ ಹೆಚ್ಚಿನ ಪ್ರಮಾಣದಲ್ಲಿ ಸಾವು ಸಂಭವಿಸದೇ ಇರುವುದರ ಹಿಂದೆ 5 ಉಪಗ್ರಹಗಳ ಸಹಾಯವೂ ಇದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಇನ್ಸಾಟ್- 3ಡಿ, ಇನ್ಸಾಟ್- 3ಡಿಆರ್, ಸ್ಕಾ್ಯಟ್‌ಸ್ಯಾಟ್-1, ಓಶಿಯನ್‌ಸ್ಯಾಟ್-2 ಹಾಗೂ ಮೇಘ ಟ್ರಾಪಿಕ್ಸ್ ಉಪಗ್ರಹಗಳು ಪ್ರತಿ 15 ನಿಮಿಷಕ್ಕೊಮ್ಮೆ ಚಂಡಮಾರುತದ ಚಲನವಲನದ ಮಾಹಿತಿ ನೀಡುತ್ತಿದ್ದವು. ಹೀಗಾಗಿ ಹೆಚ್ಚಿನ ಪ್ರಾಣ ಹಾನಿ ಆಗುವುದು ತಪ್ಪಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
undefined
ಚಂಡಮಾರುತದ ಕಣ್ಣಿನ (ಕೇಂದ್ರ ಬಿಂದು) 1000 ಕಿ.ಮೀ. ಸುತ್ತಳತೆಯಲ್ಲಿ ಮೋಡ ಆವರಿಸಿತ್ತು. 100ರಿಂದ 200 ಕಿ.ಮೀ. ಸುತ್ತಳತೆಯಲ್ಲಿ ಭಾರಿ ಮಳೆಯಾಗುತ್ತಿತ್ತು. ಈ ಮೋಡಗಳು 10 ಸಾವಿರ ಅಡಿ ಎತ್ತರದಲ್ಲಿದ್ದವು ಎಂಬ ಮಾಹಿತಿಯನ್ನು ಉಪಗ್ರಹಗಳು ಒದಗಿಸಿವೆ.
ದಕ್ಷಿಣ ಹಿಂದು ಮಹಾಸಾಗರದಲ್ಲಿ ವಾಯುಭಾರ ಕುಸಿತ ಕಂಡುಬಂದಿದೆ ಎಂದು ಹವಾಮಾನ ತಜ್ಞರು ಪತ್ತೆ ಹಚ್ಚುತ್ತಿದ್ದಂತೆ, ಅದರ ಮೇಲೆ ಉಪಗ್ರಹಗಳು ನಿಗಾ ಇಟ್ಟಿದ್ದವು ಎನ್ನಲಾಗಿದೆ.