ಬ್ಲ್ಯಾಕ್‌ ಹೋಲ್ ನುಂಗಿದ ವಸ್ತು ಏನಾಗುತ್ತದೆ? ಜಪಾನ್ ಭೌತಶಾಸ್ತ್ರಜ್ಞರ ಅಧ್ಯಯನದಲ್ಲಿದೆ ಉತ್ತರ

By Suvarna News  |  First Published Mar 14, 2022, 11:19 AM IST

ಕಪ್ಪು ಕುಳಿ ಅಥವಾ  ಬ್ಲ್ಯಾಕ್‌ ಹೋಲ್‌ಗಳ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಈಗಾಗಲೇ ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ.


Tech Desk: ಕಪ್ಪು ಕುಳಿ ಅಥವಾ  ಬ್ಲ್ಯಾಕ್‌ ಹೋಲ್‌ಗಳ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಈಗಾಗಲೇ ಹಲವಾರು ಸಂಶೋಧನೆಗಳಿ ಹಾಗೂ ಪ್ರಯತ್ನಗಳನ್ನು ಮಾಡಲಾಗಿದೆ.  ಈಗ  ಜಪಾನ್ ಭೌತವಿಜ್ಞಾನಿಗಳ ತಂಡವು ಕಪ್ಪು ಕುಳಿಗಳಿಂದ ನುಂಗಲ್ಪಟ್ಟ ವಸ್ತುವಿನ ಸುತ್ತಲಿನ ರಹಸ್ಯವನ್ನು ಭೇದಿಸಿದ್ದಾರೆ. ಈ ದೀರ್ಘಕಾಲದ ರಹಸ್ಯವನ್ನು ವಿವರಿಸಲು ಭೌತವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಪ್ರತ್ಯೇಕ ಬಿಂದುಗಳಲ್ಲಿ ಎರಡು ತುದಿಗಳನ್ನು ಹೊಂದಿರುವ ಸುರಂಗಗಳಾದ ವರ್ಮ್‌ಹೋಲ್‌ಗಳನ್ನು ಪರಿಗಣಿಸಿದ್ದಾರೆ. 

ಕಪ್ಪು ಕುಳಿಗಳು ಬಾಹ್ಯಾಕಾಶದಲ್ಲಿ ಯಾವುದೇ ವಸ್ತುವನ್ನು ಹಾದುಹೋಗಲು ಸಾಧ್ಯವಾಗದ ಪ್ರದೇಶಗಳಾಗಿವೆ. ಕಪ್ಪು ಕುಳಿಯ ಗುರುತ್ವಾಕರ್ಷಣೆಯು ಎಷ್ಟು ಪ್ರಬಲವಾಗಿದೆಯೆಂದರೆ, ಬೆಳಕು ಸೇರಿದಂತೆ ಅದು ಎಲ್ಲ ಬಾಹ್ಯಾಕಾಶ ವಸ್ತುಗಳನ್ನು ತನ್ನೊಳಗೆ ಎಳೆದುಕೊಳ್ಳುತ್ತದೆ ಮತ್ತು ಏನನ್ನೂ ಹೊರಬರಲು ಅನುಮತಿಸುವುದಿಲ್ಲ. 

Latest Videos

undefined

ಕಪ್ಪು ಕುಳಿಗಳು ವರ್ಮ್‌ಹೋಲ್‌ಗಳನ್ನು ಅನುಕರಿಸುತ್ತವೆ ಎಂದು ಜಪಾನ್‌ನ RIKEN ಸಂಶೋಧನಾ ಸಂಸ್ಥೆಯ ತಂಡವು ಹೇಳಿದೆ. ಅಂದರೆ ಕಪ್ಪು ಕುಳಿಗಳು ಅವು ನುಂಗಿದ ವಸ್ತುವನ್ನು ಮತ್ತೆ ಬ್ರಹ್ಮಾಂಡಕ್ಕೆ ಬಿಡುಗಡೆ ಮಾಡಲು ಎಸ್ಕೇಪ್ ಟನಲನ್ನು ಹೊಂದಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಇದನ್ನೂ ಓದಿ: Shipwreck Hunt: 105 ವರ್ಷದ ಹಿಂದೆ ಮುಳುಗಿದ ಹಡಗು ಪತ್ತೆಯಾಯ್ತು!

ರಿಕೆನ್ ಇಂಟರ್ ಡಿಸಿಪ್ಲಿನರಿ ಥಿಯರಿಟಿಕಲ್ & ಮ್ಯಾಥೆಮೆಟಿಕಲ್ ವಿಜ್ಞಾನದ ಸಂಶೋಧಕ ಕನಾಟೊ ಗೊಟೊ ಸೇರಿದಂತೆ ಈ ವಿಜ್ಞಾನಿಗಳು ಸೂಚಿಸಿದ ಮಾದರಿಯು ಜನಪ್ರಿಯ ವೈಜ್ಞಾನಿಕ ಕಾದಂಬರಿ ಚಲನಚಿತ್ರಗಳಲ್ಲಿ ಕಂಡುಬರುವ ಪರಿಕಲ್ಪನೆಯನ್ನು ಹೋಲುತ್ತದೆ. ಆದರೆ ಈ ಅಧ್ಯಯನವು  ಕಪ್ಪು ಕುಳಿಗಳ ಬಗ್ಗೆ ದೀರ್ಘಕಾಲದ ನಡೆಯುತ್ತಿರುವ ಸಂಶೋಧನೆಗೆ ಉತ್ತಮ ಮಾಹಿತಿ ಕೇಂದ್ರವಾಗಬಹುದು. 

ಏನೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ:  ಆಲ್ಬರ್ಟ್ ಐನ್ಸ್ಟೈನ್ ಅವರ Theory Of General Relativity ಪ್ರಕಾರ, ಕಪ್ಪು ಕುಳಿಯಿಂದ ಏನೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸ್ಟೀಫನ್ ಹಾಕಿಂಗ್ ಅವರು 1970 ರ ದಶಕದಲ್ಲಿ ಕಪ್ಪು ಕುಳಿಗಳು ಕುಗ್ಗಿದಂತೆ ವಿಕಿರಣವನ್ನು (ಹಾಕಿಂಗ್ ವಿಕಿರಣ) ಹೊರಸೂಸುತ್ತವೆ ಎಂದು ಭವಿಷ್ಯ ನುಡಿದಿದ್ದರು. ಇದನ್ನು ಕಪ್ಪು ಕುಳಿ "ಆವಿಯಾಗುವಿಕೆ" ಎಂದು ಕರೆಯಲಾಗುತ್ತದೆ. 

ಹಾಕಿಂಗ್ ಅವರ ಪರಿಕಲ್ಪನೆಯನ್ನು ಪರಿಗಣಿಸಿದರೆ, ಕಪ್ಪು ಕುಳಿ ನುಂಗಿದ ವಸ್ತುವಿನ ಮಾಹಿತಿಯು ಕಪ್ಪು ಕುಳಿಯೊಂದಿಗೆ ಆವಿಯಾಗಬೇಕು. ಆದರೆ ಕ್ವಾಂಟಮ್ ಭೌತಶಾಸ್ತ್ರವು ವಸ್ತು ವಿಶ್ವದಿಂದ ಕಣ್ಮರೆಯಾಗುವುದಿಲ್ಲ ಎಂದು ಹೇಳುತ್ತದೆ, ಇದು ವಿರೋಧಾಭಾಸಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: Beetles Reproduction: ಲಿಂಗವೇ ಇಲ್ಲದಿದ್ರೂ ಸಂತಾನೋತ್ಪತ್ತಿ ಹೇಗೆ ಮಾಡುತ್ತೆ ಜೀರುಂಡೆ?

"ಇದು ಪ್ರಸ್ತುತ  General Relativity ಸಿದ್ಧಾಂತ ಮತ್ತು Quantum Mechanics ಪರಸ್ಪರ ಅಸಮಂಜಸವಾಗಿದೆ ಎಂದು ಸೂಚಿಸುತ್ತದೆ. ನಾವು ಕ್ವಾಂಟಮ್ ಗುರುತ್ವಾಕರ್ಷಣೆಗೆ ಏಕೀಕೃತ ಚೌಕಟ್ಟನ್ನು ಕಂಡುಹಿಡಿಯಬೇಕು" ಎಂದು ಗೊಟೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಯು ಕಪ್ಪು ಕುಳಿಗಳಿಂದ ತಪ್ಪಿಸಿಕೊಳ್ಳಬಹುದೇ ಎಂಬುದನ್ನು ಅರ್ಥಮಾಡಿಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ, ಆದರೆ ಖಚಿತವಾದ ಉತ್ತರವನ್ನು ಇನ್ನೂ ದೊರಕಿಲ್ಲ. ಸಿದ್ಧಾಂತದಲ್ಲಿ, ಗೊಟೊ ಮತ್ತು ಅವರ ಸಹೋದ್ಯೋಗಿಗಳು ಈ ಮಾಹಿತಿಗೆ ಏನಾಗುತ್ತದೆ ಎಂಬುದರ ವಿವರಣೆಯನ್ನು ಕಂಡುಕೊಂಡಿದ್ದಾರೆ. 

"ಒಂದು ವರ್ಮ್ ಹೋಲ್ ಕಪ್ಪು ಕುಳಿಯ ಒಳಭಾಗವನ್ನು ಮತ್ತು ಹೊರಗಿನ ವಿಕಿರಣವನ್ನು ಸೇತುವೆಯಂತೆ ಸಂಪರ್ಕಿಸುತ್ತದೆ" ಎಂದು ಅವರು ಹೇಳಿದ್ದಾರೆ. ಆದರೆ ಕೆಲವು ಪ್ರಶ್ನೆಗಳಿಗೆ ಉತ್ತರವಿಲ್ಲ. "ವಿಕಿರಣದಿಂದ ಮಾಹಿತಿಯನ್ನು ಹೇಗೆ ಒಯ್ಯಲಾಗುತ್ತದೆ ಎಂಬುದರ ಮೂಲಭೂತ ಕಾರ್ಯವಿಧಾನವು ನಮಗೆ ಇನ್ನೂ ತಿಳಿದಿಲ್ಲ" ಎಂದು ಗೊಟೊ ತಿಳಿಸಿದ್ದಾರೆ. 

click me!