Beetles Reproduction: ಲಿಂಗವೇ ಇಲ್ಲದಿದ್ರೂ ಸಂತಾನೋತ್ಪತ್ತಿ ಹೇಗೆ ಮಾಡುತ್ತೆ ಜೀರುಂಡೆ?

By Suvarna News  |  First Published Mar 1, 2022, 2:05 PM IST

ಒಂದು ಬಗೆಯ ಜೀರುಂಡೆಯಲ್ಲಿ ಹೆಣ್ಣು- ಗಂಡು ಲಿಂಗವ್ಯತ್ಯಾಸವಿಲ್ಲ. ಆದ್ರೂ ಅವು ಸಾವಿರಾರು ವರ್ಷಗಳಿಂದ ಇವೆ. ಏನೀ ನಿಸರ್ಗದ ಚೋದ್ಯ?
 


ಜೀರುಂಡೆ (Beetle) ಗಳಲ್ಲಿ ಒಪಿಯೆಲ್ಲಾ ನೋವಾ (Opiella Nova) ಎಂಬ ಹೆಸರಿನ ಒಂದು ಅತ್ಯಂತ ಸೂಕ್ಷ್ಮ ಕೀಟವಿದೆ. ಇದಕ್ಕೆ ಯಾವುದೇ ಲಿಂಗವಿಲ್ಲ(Sex) - ಅಥವಾ ಇವುಗಳಲ್ಲಿ ಇರುವುದೆಲ್ಲಾ ಹೆಣ್ಣು (Female) ಲಿಂಗವೇ ಎನ್ನಬಹುದು. ಆದ್ರೂ ಸಾವಿರಾರು ವರ್ಷಗಳಿಂದ ಇವು ಪ್ರಕೃತಿಯಲ್ಲಿ (Nature) ಉಳಿದುಕೊಂಡು ಬಂದಿವೆ. ಅದು ಹೇಗೆ ಸಾಧ್ಯ? ಈ ಬಗ್ಗೆ ಹಲವಾರು ಅಧ್ಯಯನಗಳು. ಸದ್ಯ ಇದರ ರಹಸ್ಯವನ್ನು ಬೇಧಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ವಿಜ್ಞಾನಿಗಳು ಭಾವಿಸಿದ್ದಾರೆ.

ಇದು ಎಷ್ಟು ಸಣ್ಣ ಕೀಟ ಎಂದರೆ, ಒಂದು ಮಿಲಿಮೀಟರ್‌ನ ಐದನೇ ಒಂದು ಭಾಗದಷ್ಟು ಕಿರಿದು. ಇವುಗಳಲ್ಲಿ ವಿಜ್ಞಾನಿಗಳು (Scientists) ನೋಡಿರುವುದೆಲ್ಲಾ ಹೆಣ್ಣು ಜಾತಿ ಮಾತ್ರವೇ. ಅಂದರೆ ಯಾವ ಮನುಷ್ಯನೂ ಗಂಡು ಜಾತಿಯ ಜೀರುಂಡೆಯನ್ನು ನೋಡೇ ಇಲ್ಲ. ಅಂದರೆ ಗಂಡು (Male) ಜಾತಿಯೇ ಇವುಗಳಲ್ಲಿ ಸೃಷ್ಟಿಯಾಗುವುದಿಲ್ಲ ಎಂದು ವಿಜ್ಞಾನಿಗಳು ಭಾವಿಸಿದ್ದರು.

Tap to resize

Latest Videos

undefined

ಹಾಗಿದ್ದರೆ ಮರಿಗಳು ಹುಟ್ಟಲು ಹೇಗೆ ಸಾಧ್ಯ? ಒಂದಲ್ಲ ಒಂದು ರೀತಿಯಲ್ಲಿ ಗಂಡು- ಹೆಣ್ಣು ಲಿಂಗಗಳು ಕೂಡುವುದರಿಂದ ಮಾತ್ರವೇ ಒಂದು ಜೀವಜಾತಿ ಮುಂದುವರಿಯಲು, ಸಂತಾನೋತ್ಪತ್ತಿ ಆಗಲು ಸಾಧ್ಯ. ಇಲ್ಲದಿದ್ದರೆ ಸಾಧ್ಯವಿಲ್ಲ. ಆದರೆ ಇದು ಹೇಗೆ ಎಂಬುದು ವಿಜ್ಞಾನಿಗಳು ದಿಗ್ಭ್ರಮೆಗೆ ಕಾರಣವಾಗಿತ್ತು.

ಇದನ್ನೂ ಓದಿ: Missions to Mars: ಲೇಸರ್‌ ತಂತ್ರಜ್ಞಾನ ಬಳಸಿ ಕೇವಲ 45 ದಿನಗಳಲ್ಲಿ ಮಂಗಳಯಾನ!

ಪ್ರಸ್ತುತ ವಿಜ್ಞಾನಿಗಳು ಬಂದಿರುವ ಒಂದು ಕನ್‌ಕ್ಲೂಷನ್ ಎಂದರೆ, ಕಾಲಕಾಲಕ್ಕೆ ಒಂದಲ್ಲ ಒಂದು ಬಗೆಯ ಕ್ರಿಪ್ಟಿಕ್ ಮೆಸೇಜ್ ಅಥವಾ ರಹಸ್ಯ ಸಂದೇಶವನ್ನು ಈ ಕೀಟಜಾತಿ ಹೊಮ್ಮಿಸಬಹುದು. ಆಗ ಗಂಡು ಕೀಟಗಳು ಈ ಜಾತಿಯಲ್ಲಿ ಉದ್ಭವವಾಗಿ ಪ್ರಜೋತ್ಪತ್ತಿಗೆ ಕಾರಣವಾಗುತ್ತಿರಬಹುದು.

ಗಮಡುಗಳು ಜನಿಸುವುದೇ ಅತ್ಯಂತ ಅಪರೂಪ ಅದ್ದರಿಂದ, ಅದು ಪ್ರಕೃತಿಯ ಎಲ್ಲ ಬಗೆಯ ಬೇಟೆಗಳಿಂದ, ಮನುಷ್ಯರ ಕಣ್ಣುಗಳಿಂದ ಕೂಡ, ಸುರಕ್ಷಿತವಾಗಿ ಅಡಗಿಕೊಳ್ಳುವ ತಂತ್ರಗಳನ್ನು ರೂಪಿಸಿಕೊಂಡಿರಬಹುದು. ಇಲ್ಲದೇ ಹೋದರೆ, ಎಲ್ಲ ಹೆಣ್ಣು ಕೀಟಗಳೇ ಇರುವ ಜಾತಿಯಲ್ಲಿ ಗಂಡಿನ ಸಹಾಯವಿಲ್ಲದೇ ಮರಿಗಳು ಜನಿಸಲಾರವು- ಎಂಬುದು ಸದ್ಯ ವಿಜ್ಞಾನಿಗಳು ರೂಪಿಸಿಕೊಂಡಿರುವ ತಿಳುವಳಿಕೆ.

ಇದನ್ನೂ ಓದಿ: Miyawaki Forest in Bengaluru Metro: ಜಪಾನ್‌ ರೀತಿ ಕಾಡು ಸೃಷ್ಟಿಗೆ ನಮ್ಮ ಮೆಟ್ರೋ ಚಿಂತನೆ!

ಇದು ಕೊಲೊನೆ ಯೂನಿವರ್ಸಿಟಿ ಮತ್ತು ಗೊಟ್ಟಿಂಗೆನ್ ಯೂನಿವರ್ಸಿಟಿಗಳ ತಜ್ಞರು ನಡೆಸಿರುವ ಅಧ್ಯಯನದ ಫಲಿತಾಂಶ. ಗಂಡುಹೆಣ್ಣಿನ ಸಮಾಗಮದಿಂದ ಮಾತ್ರ ಸಂತಾನೋತ್ಪತ್ತಿ ಸಾಧ್ಯ ಎಂಬುದು ಸದ್ಯ ಜೀವಲೋಕದ ಬಗ್ಗೆ ಮನುಷ್ಯನಿಗಿರುವ ತಿಳುವಳಿಕೆಯಾಗಿದೆ. ಅದಕ್ಕೂ ಮೀರಿದ ಯಾವುದಾದರೂ ವಿಧಾನ ಇದೆಯೇ, ಇರಬಹುದೇ ಎಂಬುದು ಸದ್ಯಕ್ಕಂತೂ ತಿಳಿಯದು.

ಆದರೆ ಈ ಕೀಟಗಳು ಕ್ಲೋನಿಂಗ್ ಮಾಡಿಕೊಳ್ಳಬಲ್ಲವು. ಕ್ಲೋನಿಂಗ್‌ ಎಂದರೆ ತನ್ನಂಥದೇ ಇನ್ನೊಂದು ಜೀವಕೋಶವಿರುವ ಜೀವಿಯನ್ನು ಸೃಷ್ಟಿಸುವುದು. ಅಲ್ಲಿ ಹೆಣ್ಣು ಜೀವಿ ಇದ್ದರೆ, ಅದು ಕ್ಲೋನಿಂಗ್ ಮಾಡಿಕೊಳ್ಳುವ ಜೀವಿಯೂ ಹೆಣ್ಣೇ ಆಗಿರುತ್ತದೆ. ಅಂದರೆ ಹೆಣ್ಣಿನಲ್ಲಿರುವ ಜೀನ್‌ನ ಕ್ರೋಮೋಸೋಮ್‌ಗಳೇ ಕ್ಲೋನ್ ಮಾಡಿದ ಜೀವಿಯಲ್ಲಿಯೂ ಮುಂದುವರಿಯುತ್ತವೆ.

ಅಂದರೆ ಹೆಣ್ಣಿನಲ್ಲಿರುವ ಎರಡು ಎಕ್ಸ್ ಕ್ರೋಮೋಸೋಮ್‌ಗಳು ಇನ್ನೊಂದು ಜೀವಿಯಲ್ಲೂ ಮುಂದುವರಿಯುತ್ತವೆ. ಹೆಣ್ಣು ಜೀವಿ ಗಂಡನ್ನು ಕ್ಲೋನ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ಕ್ಲೋನಿಂಗ್‌ನಿಂದ ಜೀವವೈವಿಧ್ಯತೆ ಮುಂದುವರಿಯುವುದಿಲ್ಲ, ಕ್ಲೋನಿಂಗ್ ಮೂಲಕ ಲೈಂಗಿಕ ಜೀವೋತ್ಪತ್ತಿಯೂ ಸಾಧ್ಯವಿಲ್ಲ.

ಇದನ್ನೂ ಓದಿNational Science Day 2022: ಆಕಾಶಕ್ಕೇಕೆ ನೀಲಿ ಬಣ್ಣ ಎಂದು ತಿಳಿಸಿದ ವಿಜ್ಞಾನಿ ನೆನಪಲ್ಲಿ ಇಂದು ವಿಜ್ಞಾನ ದಿನ

ಹಾಗಿದ್ದರೆ ಈ ಜೀವಿ ಇದುವರೆಗೂ ಕ್ಲೋನಿಂಗ್ (Cloning) ಮಾತ್ರ ಮಾಡುತ್ತ ಬಂದಿದೆಯೇ? ಹಾಗಿದ್ದರೆ ಅದು ಪ್ರಕೃತಿಯಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗುವುದಿಲ್ಲ. ಜೀನ್‌ಗಳು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತ ಹೊಸ ಗುಣಗಳನ್ನು ಪರಿಷ್ಕರಿಸಿ ರೂಢಿಸಿಕೊಳ್ಳುತ್ತ ಪ್ರಕೃತಿಯಲ್ಲಿ ಉಳಿದರೆ ಮಾತ್ರವೇ ಜೀವಿ ಉಳಿಯಲು ಸಾಧ್ಯ. ಆದ್ದರಿಂದ ಕ್ಲೋನಿಂಗ್‌ನಿಂದ ಮಾತ್ರವೇ ಒಂದು ಜೀವಿ ಸಾವಿರಾರು ವರ್ಷ ಉಳಿಯಲು ಸಾಧ್ಯವಿಲ್ಲ.

ಹೀಗಾಗಿ ಈ ಮಿಡತೆಗಳ ಪ್ರಭೇದಲ್ಲಿ ಒಂದಲ್ಲ ಒಂದು ಹಂತದಲ್ಲಿ ಗಂಡು ಜೀವಿಗಳ ಸೃಷ್ಟಿಯಾಗಿ, ತನ್ನ ಕೆಲಸ ಮುಗಿಸಿ, ನಮ್ಮ ಕಣ್ಣಿಗೇ ಬಾರದಂತೆ ಕಣ್ಮರೆಯಾಗುತ್ತಿರಬಹುದು ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಸದ್ಯ ಬಂದಿದ್ದಾರೆ.

click me!