ದೇಶಕ್ಕೆ ವಿಜ್ಞಾನ ನೊಬೆಲ್ ತಂದುಕೊಟ್ಟ ಮಹನೀಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ನೆನಪಿನಲ್ಲಿ ಇಂದು (ಫೆ.೨೮) ವಿಜ್ಞಾನ ದಿನ ಆಚರಿಸಲಾಗುತ್ತೆ. ರಾಮನ್ ಬಗ್ಗೆ, ಅವರ ಸಂಶೋಧನೆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ ಬನ್ನಿ.
ಯಾಕೆ ವಿಜ್ಞಾನ ದಿನ?: ಇಂದು 'ವಿಜ್ಞಾನ ದಿನ' (Science Day). ಭಾರತೀಯ ಭೌತಶಾಸ್ತ್ರಜ್ಞ (Physicist) ಸರ್ ಸಿ ವಿ ರಾಮನ್ (ಚಂದ್ರಶೇಖರ ವೆಂಕಟ ರಾಮನ್) (Sir C V Raman) ಅವರು ಮತ್ತು ಅಂಥ ಇತರ ದೊಡ್ಡ ವಿಜ್ಞಾನಿಗಳು ನಮ್ಮ ದೇಶಕ್ಕೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳಲು, ಗೌರವಿಸಲು ಇರುವ ದಿನ. 1928ರಲ್ಲಿ ಇದೇ ದಿನ, ಸಿವಿ ರಾಮನ್ ಅವರು ಸ್ಪೆಕ್ಟ್ರೋಸ್ಕೋಪಿ ಕ್ಷೇತ್ರದಲ್ಲಿ ಒಂದು ಪ್ರಮುಖ ಆವಿಷ್ಕಾರವನ್ನು ಮಾಡಿದರು. ನಂತರ ಅದನ್ನು 'ರಾಮನ್ ಎಫೆಕ್ಟ್' (Raman Effect) ಎಂದು ಹೆಸರಿಸಲಾಯಿತು. ಅವರ ಕೆಲಸಕ್ಕಾಗಿ, ಸಿವಿ ರಾಮನ್ ಅವರಿಗೆ 1930ರಲ್ಲಿ ಭೌತಶಾಸ್ತ್ರದ ಪ್ರತಿಷ್ಠಿತ ನೊಬೆಲ್ (Nobel Award) ಪ್ರಶಸ್ತಿಯನ್ನು ನೀಡಲಾಯಿತು.
ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಷನ್ (NCSTC), 1986ರಲ್ಲಿ ಫೆಬ್ರವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಘೋಷಿಸಲು ಭಾರತ ಸರ್ಕಾರವನ್ನು ಕೇಳಿತು. ಸರ್ಕಾರವು ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಅಂಗೀಕರಿಸಿ ಘೋಷಿಸಿತು. ಮೊದಲ ರಾಷ್ಟ್ರೀಯ ವಿಜ್ಞಾನ ದಿನವನ್ನು ಫೆಬ್ರವರಿ 28, 1987ರಂದು ಆಚರಿಸಲಾಯಿತು. ಅಂದಿನಿಂದ ಈ ದಿನವನ್ನು ದೇಶದ ಅಭಿವೃದ್ಧಿಗೆ ವಿಜ್ಞಾನಿಗಳ ಕೊಡುಗೆಗಳನ್ನು ಗುರುತಿಸಲು ನೆನೆಯಲು ಆಚರಿಸಲಾಗುತ್ತದೆ.
undefined
Math Neurons: ಗಣಿತ ಲೆಕ್ಕಾಚಾರ ವೇಳೆ ಮೆದುಳಿನಲ್ಲಾಗುವ ಬದಲಾವಣೆಗಳ ಬಗ್ಗೆ ನಿಮಗೆಷ್ಟು ಗೊತ್ತು?
ಈ ವರ್ಷದ ಥೀಮ್: 2022ರ ರಾಷ್ಟ್ರೀಯ ವಿಜ್ಞಾನ ದಿನದ ಥೀಮ್- 'ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಯೋಜಿತ ವಿಧಾನ'. ಸುಸ್ಥಿರ ಭವಿಷ್ಯ ಇಂದಿನ ಜಾಗತಿಕ ತಾಪಮಾನದ ದಿನಗಳಲ್ಲಿ ಅತ್ಯಂತ ಅಗತ್ಯ ವಿಚಾರವಾಗಿದೆ. ವಿಜ್ಞಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಸಾರ್ವಜನಿಕ ಭಾಷಣಗಳು, ರೇಡಿಯೋ, ಟಿವಿ, ವಿಜ್ಞಾನ ಚಲನಚಿತ್ರಗಳು, ವಿಷಯಗಳು ಮತ್ತು ಪರಿಕಲ್ಪನೆಗಳ ಕುರಿತು ವಿಜ್ಞಾನ ಪ್ರದರ್ಶನಗಳು, ಚರ್ಚೆಗಳು, ರಸಪ್ರಶ್ನೆ ಸ್ಪರ್ಧೆಗಳು, ಉಪನ್ಯಾಸಗಳು ಮತ್ತು ವಿಜ್ಞಾನ ಮಾದರಿ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತವೆ.
ಆಕಾಶಕ್ಕೆ ನೀಲಿ ಬಣ್ಣವೇಕೆ?: ರಾಮನ್ ಸಂಶೋಧನೆ ರಾಮನ್ ಪರಿಣಾಮ (ರಾಮನ್ ಎಫೆಕ್ಟ್) ಎಂದೇ ಜಗದ್ವಿಖ್ಯಾತ. 1928ರ ಫೆಬ್ರವರಿ 28ರಲ್ಲಿ ಕೆಎಸ್ ಕೃಷ್ಣನ್ ಜತೆ ಈ ಆವಿಷ್ಕಾರ ಮಾಡಿದ ಸಂಗತಿಯನ್ನು ಮಾರ್ಚ್ 16ರಂದು ದಕ್ಷಿಣ ಭಾರತ ವಿಜ್ಞಾನ ವೇದಿಕೆ ಹಾಗೂ ಬೆಂಗಳೂರು ಸೆಂಟ್ರಲ್ ಕಾಲೇಜಿನ ವಿಜ್ಞಾನ ವೇದಿಕೆಯಲ್ಲಿ ರಾಮನ್ ಅವರು ಹಂಚಿಕೊಂಡರು.
ಇದನ್ನೂ ಓದಿ: Miyawaki Forest in Bengaluru Metro: ಜಪಾನ್ ರೀತಿ ಕಾಡು ಸೃಷ್ಟಿಗೆ ನಮ್ಮ ಮೆಟ್ರೋ ಚಿಂತನೆ!
ಆಕಾಶಕ್ಕೇಕೆ ನೀಲಿಬಣ್ಣ? (Why sky is blue) ಅದು ಹೇಗೆ ಸಾಧ್ಯ? ಎಂಬ ಪ್ರಶ್ನೆ ರಾಮನ್‌ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ (sea) ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನ ತುಂಬ ಅಲೆದಾಡುತ್ತಿದ್ದರು. ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪು ಬೆಳಕು ದಿಗಂತದ ಸಮೀಪ ಸೂರ್ಯ ಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು ಎನ್ನುವ ವಿಚಾರ ಬೆಳಕಿಗೆ ಬಂತು. ಬೆಳಕಿನ ಕಿರಣಗಳು ಪಾರದರ್ಶಕ ವಸ್ತುಗಳ ಮೂಲಕ ಹರಿಯುವಾಗ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಹಲವು ಅಣುಗಳಿಂದ ಚೈತನ್ಯ ಪಡೆದು, ಕೆಲವು ಅಣುಗಳಿಗೆ ಚೈತನ್ಯ ನೀಡುತ್ತವೆ. ಆ ರೀತಿ ಚದುರಲ್ಪಟ್ಟ ಬೆಳಕು ಪತನಗೊಂಡ ಬೆಳಕಿಗಿಂತ ಭಿನ್ನ ತರಂಗಾಂತರ ಹೊಂದಿರುತ್ತದೆ.
ಇದನ್ನೂ ಓದಿ: Missions to Mars: ಲೇಸರ್ ತಂತ್ರಜ್ಞಾನ ಬಳಸಿ ಕೇವಲ 45 ದಿನಗಳಲ್ಲಿ ಮಂಗಳಯಾನ!
ಹಲವು ಮೊದಲುಗಳ ಸರದಾರ:
- ಇವರು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ (Science and Technology) ನೊಬೆಲ್ ಪಡೆದ ಮೊದಲ ಭಾರತೀಯ, ಮೊದಲ ಏಷ್ಯನ್ ಹಾಗೂ ಮೊದಲ ಶ್ವೇತವರ್ಣೀಯರಲ್ಲದ ವ್ಯಕ್ತಿ!
- ರಾಮನ್ ಅವರು ಮೊದಲು ಕೋಲ್ಕೊತಾದಲ್ಲಿ ಅಕೌಂಟೆಂಟ್ ಆಗಿದ್ದರು. 11ನೇ ವಯಸ್ಸಿನಲ್ಲೇ ಹತ್ತನೇ ತರಗತಿ ಪಾಸು ಮಾಡಿದ ಪ್ರತಿಭಾವಂತ. ನಂತರ ಸರಕಾರಿ ಕೆಲಸ ಬಿಟ್ಟು ವಿಜ್ಞಾನ ಪ್ರಯೋಗಕ್ಕಾಗಿ ಕೋಲ್ಕತಾ ಯೂನಿವರ್ಸಿಟಿ ಸೇರಿದರು.
- ರಾಮನ್ ಅವರು ಹುಟ್ಟಿದ್ದು ತಮಿಳುನಾಡಿನಲ್ಲಿ ಆದರೂ, ತಮ್ಮ ಜೀವಿತಕಾಲದ ಬಹುಭಾಗವನ್ನು ಬೆಂಗಳೂರಿನಲ್ಲಿ ಕಳೆದರು. ಕರ್ನಾಕಟವೇ ಅವರ ಮನೆಯಾಗಿತ್ತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮೊದಲ ನಿರ್ದೇಶಕರಾದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು.
- ಸಂಗೀತದಲ್ಲಿ (Music) ಅವರಿಗೆ ಭಾರೀ ಆಸಕ್ತಿ. ಮೃದಂಗ ಮತ್ತು ತಬಲಾವನ್ನು ಚೆನ್ನಾಗಿ ನುಡಿಸಬಲ್ಲವರಾಗಿದ್ದರು.
- ಭಾರತ ಸ್ವಾತಂತ್ರ್ಯಗೊಂಡ ಬಳಿಕ ಅವರು ದೇಶದ ಮೊತ್ತಮೊದಲ ರಾಷ್ಟ್ರೀಯ ಪ್ರೊಫೆಸರ್ ಆದವರು.