15 ಸಾವಿರ ವರ್ಷ ಹಿಂದೆ ಮನುಷ್ಯರು ಏನು ತಿನ್ನುತ್ತಿದ್ದರು? ಆದಿಮಾನವನ ಹಲ್ಲಿನಲ್ಲಿತ್ತು ಸ್ಫೋಟಕ ಮಾಹಿತಿ

Published : Aug 07, 2026, 04:05 PM ISTUpdated : Aug 07, 2026, 04:11 PM IST
ancient klins

ಸಾರಾಂಶ

ಪ್ರಾಣಿಗಳ ಜೊತೆ ಕಾಡಿನಲ್ಲಿದ್ದ ಆದಿಮಾನವರು ಕೃಷಿ ಆರಂಭಿಸುವ ಮೊದಲು ಏನು ತಿನ್ನುತ್ತಿದ್ದರು? ಬರೋಬ್ಬರಿ 15 ಸಾವಿರ ವರ್ಷಗಳ ಹಿಂದೆ ಮನುಷ್ಯನ ಆಹಾರ ಪದ್ಧತಿ ಕುರಿತು ಸ್ಫೋಟಕ ರಹಸ್ಯ ಆದಿಮಾನವನ ಹಲ್ಲು, ಮೂಳೆಯಿಂದ ಬಯಲಾಗಿದೆ.

ಪ್ರಾಣಿಗಳಂತೆ ಕಾಡಿನಲ್ಲಿದ್ದ ಮಾನವ ಬಳಿಕ ವಿಕಸನಗೊಳ್ಳುತ್ತಾ ಹೋದ ಜೀವಿ. ನಾಗರೀಕತೆ ಬೆಳೆದಂತೆ ಕೃಷಿ ಪದ್ಧತಿಗಳು ಆರಂಭಗೊಂಡಿತು. ಕೃಷಿ ಪದ್ಧತಿಗಳು ಆರಂಭಕ್ಕೂ ಮೊದಲು ಮಾನವ ಕೂಡ ಪ್ರಾಣಿಗಳ ಬೇಟೆಯಾಡಿ ತಿನ್ನುತ್ತಿದ್ದ ಅನ್ನೋದು ಇತಿಹಾಸ. ಆದರೆ ಮಾನವ ಕೇವಲ ಬೇಟೆ ಆಹಾರ ತಿನ್ನುತ್ತಿದ್ದನೆ ಅಥವಾ ಇತರ ಸಸ್ಯಾಹಾರವನ್ನು ಸೇವಿಸುತ್ತಿದ್ದನಾ? ಈ ಕುರಿತು ಸತತ ಸಂಶೋಧನೆ ನಡೆಸುತ್ತಿದ್ದ ವಿಜ್ಞಾನಿಗಳು ಇದೀಗ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ನಡೆಸಿದ ಸಂಶೋಧನೆ ಮಾನವನ ವಿಕಸನ ಸೇರಿದಂತೆ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಿದೆ. ಬರೋಬ್ಬರಿ 15 ಸಾವಿರ ವರ್ಷಗಳ ಹಿಂದೆ ಮಾನವನ ಮೆನು ಕಾರ್ಡ್ ಎನಿತ್ತು ಅನ್ನೋದು ಬಯಲಾಗಿದೆ.

ತಪೋರಾಲ್ಟ್ ಗುಹೆಯಲ್ಲಿ ಸಿಕ್ಕ ಆದಿಮಾನವನ ಪಳೆಯುಳಿಕೆ

ಮೊರಕ್ಕೋದ ತಾಪೋರಾಲ್ಟ್ ಅತ್ಯಂತ ಪುರಾತನ ಗುಹೆ. ಈ ಗುಹೆಯನ್ನು ಮೊರಕ್ಕೋದ ಪುರಾತತ್ವ ಇಲಾಖೆ ನಿರ್ವಹಣೆ ಮಾಡುತ್ತಿದೆ. ಈ ಗುಹೆ ಮಾನವನ ವಿಕಸನ ಕುರಿತು ಕತೆ ಹೇಳುತ್ತಿದೆ. ಈ ಗುಹೆಯಲ್ಲಿ ಬರೋಬ್ಬರಿ 15 ಸಾವಿರ ವರ್ಷಗಳ ಹಿಂದೆ ಜೀವಿಸಿದ್ದ ಆದಿಮಾನವನ ಹಲವು ಮೂಳೆಗಳು, ಹಲ್ಲುಗಳು ಸೇರಿದಂತೆ ಪಳೆಯುಳಿಕೆಗಳು ಪತ್ತೆಯಾಗಿತ್ತು. ಈ ಮೂಳೆ, ಹಲ್ಲುಗಳನ್ನು ವಿಜ್ಞಾನಿಗಳು ಕೆಮಿಕಲ್ ಅನಾಲಿಸ್‌ಗೆ ಒಳಪಡಿಸಿ ಸಂಶೋಧನೆ ನಡೆಸಿದ್ದಾರೆ. ಈ ಸಂಶೋಧನಾ ಫಲಿತಾಂಶ ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

ಶಿಲಾಯುಗದ ಮಾನವರ ಆಹಾರ ಪದ್ಧತಿ

ಶಿಲಾಯುಗದಲ್ಲಿದ್ದ ಮಾನವರು ಸಂಪೂರ್ಣವಾಗಿ ಮಾಂಸಾಹಾರಿಗಳಾಗಿದ್ದರು ಅನ್ನೋ ಉಲ್ಲೇಖವಿದೆ. ಆದರೆ ಹೊಸ ಸಂಶೋಧನೆ ಈ ವಾದಕ್ಕೆ ತದ್ವಿರುದ್ಧವಾಗಿದೆ. 15 ಸಾವಿರ ವರ್ಷಗಳ ಹಿಂದೆ ಇದ್ದ ಇಬೆರೊಮೌರುಸಿಯನ್ (Iberomaurusian) ಮೂಲಕ್ಕೆ ಸೇರಿದ ಬೇಟೆಗಾರ ಮಾನವನ ಹಲ್ಲುಗಳಲ್ಲಿ ಸಸ್ಯಜನ್ಯ ಆಹಾರಗಳ ಕುರುಹು ಪತ್ತೆಯಾಗಿದೆ. ಹಲ್ಲುಗಳಲ್ಲಿ ಪತ್ತೆಯಾದ ಐಸೋಟೋಪ್‌ (Isotope) ಪರೀಕ್ಷೆ ಮಾಡಲಾಗಿದೆ. ಈ ಐಸೋಟೋಪ್ ಅನಾಲಿಸ್‌ನಲ್ಲಿ ಆದಿ ಮಾನವರು ಪ್ರಾಣಿಗಳ ಪ್ರೋಟಿನ್‌ಗಿಂತ ಸಸ್ಯಗಳು, ಬೀಜ, ಗೆಡ್ಡೆ ಗೆಣಸುಗಳ ಪ್ರೋಟಿನ್ ಪತ್ತೆಯಾಗಿದೆ. ಈ ಮೂಲಕ ಮಾಂಸಾಹಾರಕ್ಕಿಂತ ಹೆಚ್ಚಾಗಿ ಕಾಡಿನಲ್ಲಿ ಸಿಗುತ್ತಿದ್ದ ಸಸ್ಯಾಹಾರಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು ಅನ್ನೋದು ಸಂಶೋಧನೆಯಲ್ಲಿ ಬಯಲಾಗಿದೆ.

ಸಸ್ಯಾಹಾರನೆಚ್ಚಿಕೊಂಡಿದ್ದ ಆದಿಮಾನವರು

ಈ ಕುರಿತು ಮತ್ತಷ್ಟು ಸಂಶೋಧನೆ ನಡೆಸಿ ಸಸ್ಯಾಹಾರದ ಯಾವ ಪ್ರೊಟಿನ್ ಅನ್ನೋದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಓಕ್ ಸೇರಿದಂತೆ ಕಾಡಿನಲ್ಲಿ ಸಿಗುವ ಹಲವು ಮರಗಳು, ಸಸ್ಯಗಳ ಬೀಜಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಕೆಲ ಬೀಜಗಳನ್ನು ಹಾಗೇ ತಿನ್ನುತ್ತಿದ್ದರೆ, ಮತ್ತೆ ಕೆಲವು ಬೀಜಗಳನ್ನು ಸುಟ್ಟು ತಿನ್ನುತ್ತಿದ್ದರು, ಅರೆದು ತಿನ್ನುತ್ತಿದ್ದರು. ಬಳ್ಳಿ, ಭೂಮಿಯ ಅಡಿಯಲ್ಲಿದ್ದ ಗೆಡ್ಡೆ ಗೆಣಸುಗಳನ್ನು ತೆಗೆದು ತಿನ್ನುತ್ತಿದ್ದರು. ಇದರ ನಡುವೆ ಪ್ರಾಣಿಗಳನ್ನು ಬೇಟೆಯಾಗುತ್ತಿದ್ದರು. ಆದರೆ ಮಾಂಸಾಹಾರಕ್ಕಿಂತ ಸಸ್ಯಾಹಾರವೇ ಹೆಚ್ಚಾಗಿತ್ತು ಅನ್ನೋದು ಸಂಶೋಧನೆಯಲ್ಲಿ ಬಯಲಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Knowledge Story: ಗಡಿಯಾರದ ಮುಳ್ಳು ಬಲಕ್ಕೆ ತಿರುಗೋದೇಕೆ, ದಿನಾ ನೋಡಿದ್ರೂ ಈ ಸತ್ಯ ಯಾರಿಗೂ ಗೊತ್ತಿಲ್ಲ
ಚಂದ್ರನ ಮೇಲೆ ಅಪ್ಪಳಿಸಿದ ಸ್ಪೇಸ್‌ ಎಕ್ಸ್‌ ರಾಕೆಟ್‌: 60 ಅಡಿ ಅಗಲ ಕುಳಿ ನಿರ್ಮಾಣ