
Russia Anti Aging Research: ಮಾನವನ ಜೀವಿತಾವಧಿ ಹೆಚ್ಚಳ ಅಥವಾ ಅಮರತ್ವದ ಕುರಿತು ರಷ್ಯಾದ ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆ ಜಾಗತೀಕಮಟ್ಟದಲ್ಲಿ ದೊಡ್ಡ ಸಂಚಲವನ್ನು ಸೃಷ್ಟಿಸಿದೆ. ಸ್ಕೋಲ್ಕೊವೊ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವರದಿಯಲ್ಲಿ ಜೀವಿತಾವಧಿ ಹೆಚ್ಚಳದ ಕುರಿತ ಹಲವು ಅಂಶಗಳು ಉಲ್ಲೇಖವಾಗಿವೆ. Medical Techniques ಮತ್ತು Medical Advanced ಮೂಲಕ ಮನುಷ್ಯನ ಜೀವಿತಾವಧಿ 194 ವರ್ಷಗಳವರೆಗೆ ಹೆಚ್ಚಿಸಬಹುದು. ಹಿಂದಿನ ವರ್ಷದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಂಭಾಷಣೆಯ ಕ್ಲಿಕ್ ಸೋರಿಕೆಯಾಗಿತ್ತು. ಈ ಸಂಭಾಷಣೆಯಲ್ಲಿ ಅಂಗಾಂಗ ಕಸಿ ಮೂಲಕ ದೀರ್ಘಾಯುಷ್ಯದ ಬಗ್ಗೆ ಮಾತನಾಡಲಾಗಿತ್ತು. ಸ್ವತಃ ಪುಟಿನ್ ಅವರೇ ಈ ಮಾತುಗಳನ್ನು ಉಲ್ಲೇಖಿಸಿದ್ದರಿಂದ ಇಂತಹದೊಂದು ಸಂಶೋಧನೆ ನಡೆಯುತ್ತಿದೆಯಾ ಎಂಬುದರ ಬಗ್ಗೆ ಚರ್ಚೆಗಳು ಆರಂಭಗೊಂಡಿದ್ದವು.
ಮಾಸ್ಕೋ ಮೂಲದ ಸ್ಕೋಲ್ಕೊವೊ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ನಡೆಸಿದ ಈ ಅಧ್ಯಯನವು NPG ಏಜಿಂಗ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ವಯಸ್ಸು ಹೆಚ್ಚಳ ಮತ್ತು ಜೀವಿತಾವಧಿಯಲ್ಲಿ ಬರುವ ಕಾಯಿಲೆಗಳನ್ನು ನಿಯಂತ್ರಿಸಿದ್ರೆ ಮಾನವನ ಆಯುಷ್ಯ ಹೆಚ್ಚಳವಾಗುತ್ತದೆ ಎಂಬುವುದು ವಿಜ್ಞಾನಿಗಳ ಗಣಿತ. ಆದ್ರೆ ಗಣಿತದ ಲೆಕ್ಕಾಚಾರ ಜೀವನದಲ್ಲಿ ಹೇಗೆ ಎಂಬುದರ ಬಗ್ಗೆ ಚರ್ಚೆಗಳಿವೆ. ವಯಸ್ಸಾಗುವಿಕೆ ಮತ್ತು ಕಾಯಿಲೆಗಳನ್ನು ಮೈನಸ್ ಮಾಡಿದ್ರೆ ಪ್ರಸ್ತುತ ಸರಾಸರಿ ಜೀವಿತಾವಧಿಗಿಂತ ಎರಡು ಪಟ್ಟು ಹೆಚ್ಚು ಬದುಕಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ವಯಸ್ಸು ಹೆಚ್ಚಳ ಪ್ರಾಥಮಿಕವಾಗಿ ದೈಹಿಕ ರೂಪಾಂತರವನ್ನು ಅವಲಂಬಿಸಿರುತ್ತದೆ. ಈ ಪ್ರಕ್ರಿಯೆಯು DNAನಲ್ಲಿ ಸಂಭವಿಸುತ್ತದೆ. ವಯಸ್ಸು ಆದಂತೆ DNA ಒಡೆಯಲು ಅಂದ್ರೆ ಬ್ರೇಕ್ ಆಗಲು ಆರಂಭಿಸುತ್ತದೆ. ಒಮ್ಮೆ ದುರ್ಬಲಗೊಂಡ ಜೀವಕೋಶಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬುವುದು ಸದ್ಯದ ವಿಜ್ಞಾನ. ಇದೀಗ ಈ ವಿಜ್ಞಾನದ ಮೇಲೆ ಸಂಶೋಧನೆಗಳು ನಡೆಯುತ್ತಿವೆ.
ಮಾನವ ಅಂಗಗಳನ್ನು ಕಸಿ ಮಾಡಿದರೆ, ಒಬ್ಬ ವ್ಯಕ್ತಿಯು ಬಯಸಿದಷ್ಟು ಕಾಲ ಬದುಕಬಹುದು ಎಂಬ ಪುಟಿನ್ ಹೇಳಿಕೆ ವೈರಲ್ ಬಳಿಕ ಇಂತಹ ಚರ್ಚೆಗೆ ರಷ್ಯಾ ಮುಂದಾಗಿದೆ ಎಂಬುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಈ ಶತಮಾನದಲ್ಲಿ ಮಾನವರು 150 ವರ್ಷಗಳವರೆಗೆ ಸುಲಭವಾಗಿ ಬದುಕಬಹುದು ಎಂದು ಕೆಲವು ಸಂಶೋಧಕರು ಹೇಳುತ್ತಾರೆ ಎಂಬುವುದು ಉತ್ತರ ಕೊರಿಯಾ ನಾಯಕನಾಗಿರುವ ಕಿಮ್ ಜಾಂಗ್ ಉನ್ ಮಾತಾಗಿದೆ.
ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೋರಿಕೆಯಾದ ಪುಟಿನ್ ಹೇಳಿಕೆಯಿಂದ ರಷ್ಯಾ ಯಾವ ಮಾರ್ಗದಲ್ಲಿ ಸಂಶೋಧನೆ ನಡೆಸುತ್ತಿದೆ ಎಂಬವುದು ಖಚಿತವಾಗಿತ್ತು. ರಷ್ಯಾ ಈ ದಿಕ್ಕಿನಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಸಂಶೋಧನಾ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ ಎಂದು ಕ್ರೆಮ್ಲಿನ್ ಅಧಿಕೃತವಾಗಿ ಒಪ್ಪಿಕೊಂಡಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, 2024 ರಲ್ಲಿ ಪ್ರಾರಂಭವಾದ ಈ ಯೋಜನೆಗೆ New technologies for healthcare national Scheme ಎಂದು ಹೆಸರಿಡಲಾಗಿದ್ದು, ಇದಕ್ಕಾಗಿ ರಷ್ಯಾ ಸರ್ಕಾರ 26 ಬಿಲಿಯನ್ ಡಾಲರ್‌ಗಳ (2 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು) ಬೃಹತ್ ಬಜೆಟ್ ನಿಗದಿಪಡಿಸಿದೆ. 2030 ರ ವೇಳೆಗೆ ದೇಶದ 1.75 ಲಕ್ಷ ಜನರ ಜೀವಗಳನ್ನು ಉಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ
ರಷ್ಯಾದ ಸಚಿವ ಡೆನಿಸ್ ಹೇಳಿಕೆ ಪ್ರಕಾರ, ಈ ಯೋಜನೆಯಲ್ಲಿ ಆಧುನಿಕ ತಂತ್ರಜ್ಞಾನ ವಯಸ್ಸು ಏರಿಕೆಯಾಗುವುದು ತಡೆಯುತ್ತದೆ. ವಿಜ್ಞಾನಿಗಳು ಡಿಎನ್‌ಎ ಮಟ್ಟದಲ್ಲಿ ಜೀವಕೋಶದ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುವ ಜೀನ್ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಬಯೋಪ್ರಿಂಟಿಂಗ್ ಮೂಲಕ ಪ್ರಯೋಗಾಲಯದಲ್ಲಿ ಹೊಸ ಮಾನವ ಅಂಗಗಳನ್ನು ರಚಿಸಲಾಗುತ್ತಿದೆ. ಕ್ಸೆನೋಟ್ರಾನ್ಸ್‌ಪ್ಲಾಂಟೇಶನ್, ಮಾನವ ದೇಹಕ್ಕೆ ಹೊಂದಿಕೊಳ್ಳಲು ಹಂದಿ ಅಂಗಗಳನ್ನು ತಳೀಯವಾಗಿ ಸಂಪಾದಿಸುವುದು ಮತ್ತು ಕಡಿಮೆ-ತಾಪಮಾನದ ಕ್ರಯೋಥೆರಪಿಯನ್ನು ಸಹ ಅನುಸರಿಸಲಾಗುತ್ತಿದೆ ಎಂದಿದ್ದಾರೆ.
ಪುಟಿನ್ ತಮ್ಮ ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳಲು ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡುತ್ತಿದ್ದಾರೆ ಎಂಬ ಮಾತುಗಳು ಜಾಗತೀಕಮಟ್ಟದಲ್ಲಿ ಕೇಳಿ ಬರುತ್ತಿರುತ್ತವೆ. 2024 ರ ಮಾಹಿತಿಯ ಪ್ರಕಾರ, ರಷ್ಯಾದಲ್ಲಿ ಸರಾಸರಿ ಜೀವಿತಾವಧಿ 73.44 ವರ್ಷಗಳು, ಪುರುಷರ ಸರಾಸರಿ ಜೀವಿತಾವಧಿ ಕೇವಲ 68.26 ವರ್ಷಗಳು. ಹೋಲಿಸಿದರೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪುರುಷರ ಸರಾಸರಿ ಜೀವಿತಾವಧಿ 74 ವರ್ಷಗಳು ಮತ್ತು ಪಶ್ಚಿಮ ಯುರೋಪಿನಲ್ಲಿ ಇದು 78 ರಿಂದ 80 ವರ್ಷಗಳು ಆಗಿದೆ. ಮುಂದಿನ ದಿನಗಳಲ್ಲಿ ಪುಟಿನ್ 194 ವರ್ಷ ಬದುಕುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.