ಮಳೆಯೇ ಕಾಣದ ಸಹಾರಾ ಮರುಭೂಮಿಯಲ್ಲಿ ಮರಗಳು!  ಬೆಳೆದಿದ್ದು ಹೇಗೆ?

By Suvarna News  |  First Published Nov 29, 2020, 3:43 PM IST

ಬೆರಗಿನ ಸಹರಾ ಮರುಭೂಮಿಯಲ್ಲಿ ಹಸಿರು/ ಮಳೆಯೇ ಬೀಳದ ಪ್ರದೇಶದಲ್ಲಿ ಮರಗಳು ಬೆಳೆದಿದ್ದು ಹೇಗೆ?/ ನಾಸಾ ಮ್ಯಾಪ್ ನಲ್ಲಿ ನಿಸರ್ಗದ ಬದಲಾವಣೆಯ ಸಾಕ್ಷಿ/ ಸಂಶೋಧನೆಗೆ ಮುಂದಾದ ವಿಜ್ಞಾನಿಗಳು


ನ್ಯೂಯಾರ್ಕ್(ನ.  29)  ಮಾನವ ನಿಸರ್ಗದ ಮೇಲೆ ಬಲಾತ್ಕಾರ ಮಾಡಲು ಹಿಡಿದು ಶತಮಾನಗಳೆ ಉರುಳಿ ಹೋಗಿವೆ. ನಿಸರ್ಗ ಕಾಲಾಡುವ ಮಾತನ್ನು ವೇದಿಕೆಯಲ್ಲಿ ಹೇಳುತ್ತೆವೆ ಆದರೂ ಸಮರ್ಪಕ ಅನುಷ್ಠಾನ ಆಗ ಉದಾಹರಣೆಗಳು ತುಂಬಾ ಕಡಿಮೆ. ತಾಪಮಾನ ಏರಿಕೆ ನಂತರ ಎಲ್ಲ ದೇಶಗಳು ಎಚ್ಚರಿಕೆ ಹೆಜ್ಜೆ ಇಡುತ್ತಿವೆ.

ಆದರೆ ಇದೆಲ್ಲದರ ನಡುವೆ ಒಂದು ಸುದ್ದಿಯಿದೆ.  ಸಹರಾ ಮರುಭೂಮಿಯಲ್ಲಿ ಮರಗಳು ಕಂಡುಬಂದಿವೆ. ಇದನ್ನು ನಾಸಾ ತನ್ನ ಮ್ಯಾಪ್ ನಲ್ಲಿ ಸ್ಪಷ್ಟಮಾಡಿದೆ. ಮಿಲಿಯನ್ ಗಟ್ಟಲೆ ಮರಗಳು ಕಂಡುಬಂದಿದ್ದು ಹೊಸ ಸಂಶೋಧನೆಗೆ ವೇದಿಕೆಯಾಗಿದೆ.

Tap to resize

Latest Videos

undefined

ಚಂದ್ರಯಾನಿಗಳಿಗೆ ಇಲ್ಲ ಟಾಯ್ಲೆಟ್ ಸಮಸ್ಯೆ; ಬಹುಕಾಲದ ತಲೆನೋವಿಗೆ ಪರಿಹಾರ ಕೊಟ್ಟ ಬಾಲಕ

ಸೂಪರ್ ಕಂಪ್ಯೂಟರ್ ಗಳನ್ನು ಬಳೆಕೆ ಮಾಡಿಕೊಂಡಿರುವ ವಿಜ್ಞಾನಿಗಳು ಮರಗಳು ಪತ್ತೆಯಾಗಿರುವುದನ್ನು ದೃಢಪಡಿಸಿದ್ದಾರೆ. ನಿಸರ್ಗ ಯಾವ ರೀತಿ ಬದಲಾವಣೆಗೆ ತೆರೆದುಕೊಳ್ಳುತ್ತಿದೆ ಎಂಬುದರ ಬಗ್ಗೆಯೂ ವಿವರಣೆ ನೀಡಿದ್ದಾರೆ.

1.8 ಬಿಲಿಯನ್ ಮರಗಳು 1,300 ಚದರ ಕಿಮೀ ವ್ಯಾಪ್ತಿಯಲ್ಲಿ ಕಂಡುಬಂದಿವೆ. ಈ ಪ್ರದೇಶದಲ್ಲಿ  ಮರಗಳು ಹೇಗೆ ಬೆಳೆದವು. ಮಳೆಯೇ ಇಲ್ಲದ ಪ್ರದೇಶದಲ್ಲಿ ಸಸ್ಯಗಳು ಹಸಿರಾಗಿದ್ದು ಹೇಗೆ ಎಂಬುದರ ಬಗ್ಗೆ ಸಂಶೋಧನೆ ಕೈಗೆತ್ತಿಕೊಂಡಿದ್ದಾರೆ.

 

click me!