ಚಂದ್ರಯಾನ-3 ಉಡ್ಡಯನದ ಪೂರ್ವಾಭ್ಯಾಸ ಯಶಸ್ವಿ: ನಭಕ್ಕೆ ನೆಗೆಯಲು ಇನ್ನೆರಡೇ ದಿನ ಬಾಕಿ

Published : Jul 12, 2023, 11:35 AM ISTUpdated : Jul 12, 2023, 12:24 PM IST
 ಚಂದ್ರಯಾನ-3 ಉಡ್ಡಯನದ ಪೂರ್ವಾಭ್ಯಾಸ ಯಶಸ್ವಿ: ನಭಕ್ಕೆ ನೆಗೆಯಲು ಇನ್ನೆರಡೇ ದಿನ ಬಾಕಿ

ಸಾರಾಂಶ

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಯೋಜನೆಗೆ 2 ದಿನಗಳು ಬಾಕಿ ಇದ್ದು, ಉಡ್ಡಯನದ ಸಂಪೂರ್ಣ ಪೂರ್ವಾಭ್ಯಾಸ ಪ್ರಕ್ರಿಯೆಯನ್ನು ಮಂಗಳವಾರ ಯಶಸ್ವಿಯಾಗಿ ನಡೆಸಿದೆ.

ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಯೋಜನೆಗೆ 2 ದಿನಗಳು ಬಾಕಿ ಇದ್ದು, ಉಡ್ಡಯನದ ಸಂಪೂರ್ಣ ಪೂರ್ವಾಭ್ಯಾಸ ಪ್ರಕ್ರಿಯೆಯನ್ನು ಮಂಗಳವಾರ ಯಶಸ್ವಿಯಾಗಿ ನಡೆಸಿದೆ. ಜು.14ರಂದು ಮಧ್ಯಾಹ್ನ 2.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ಚಂದ್ರಯಾನ-3 ಉಡಾವಣೆಯಾಗಲಿದೆ. ಈ ಉಡಾವಣೆಗೆ ದೇಶೀಯವಾಗಿ ನಿರ್ಮಾಣ ಮಾಡಲಾದ ಲಾಂಚಿಂಗ್‌ ವಾಹನ ಬಳಸಲಾಗುತ್ತಿದ್ದು, ಲ್ಯಾಂಡರ್‌ ಮತ್ತು ರೋವರ್‌ಗಳನ್ನು ಸಹ ದೇಶೀಯವಾಗಿ ತಯಾರಿಸಲಾಗಿದೆ. ಇದು ಚಂದ್ರಯಾನ-2 ಯೋಜನೆಯ ಮುಂದುವರೆದ ಭಾಗವಾದ ಕಾರಣ ಈ ಯೋಜನೆಯನ್ನು ಆರ್ಬಿಟರನ್ನು ಕೈಬಿಡಲಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಸಿದ್ಧತೆ ನಡೆಸಿದ್ದು, ಈ ಬಾರಿ ಸಕಲ ಪೂರ್ವ ತಯಾರಿಯೊಂದಿಗೆ ನೌಕೆಯನ್ನು ಸಿದ್ಧಪಡಿಸಲಾಗಿದೆ.

ಜುಲೈ 14 ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಡ್ಡಯನ

ಭಾರತವು ಜುಲೈ 14 ರಂದು ಮಧ್ಯಾಹ್ನ 2.35 ಕ್ಕೆ ಬಾಹ್ಯಾಕಾಶ ನೌಕೆಯ ಮೂಲಕ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಿದೆ. ಇಸ್ರೋ ಅಧಿಕೃತವಾಗಿ ಗುರುವಾರ ಇದರ ಮಾಹಿತಿ ನೀಡಿದೆ. ಈ ಹಿಂದೆ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಚಂದ್ರಯಾನವನ್ನು ಜುಲೈ 12 ಮತ್ತು ಜುಲೈ 19 ರ ನಡುವೆ ಉಡಾವಣೆ ಮಾಡಲಾಗುವುದು ಎಂದು ತಿಳಿಸಿದ್ದರು. ಉಡಾವಣಾ ರಾಕೆಟ್‌ ಸಜ್ಜಾಗಿದೆ. ಬುಧವಾರವೇ ಉಡಾವಣಾ ವಾಹನದಲ್ಲಿ ಚಂದ್ರಯಾನ-3 ಯೋಜನೆಯ ಎಲ್ಲಾ ಭಾಗಗಳನ್ನು ಜೋಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಚಂದ್ರಯಾನ-3 ರ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಲ್ಲಿ ಯಶಸ್ವಿಯಾದರೆ, ಭಾರತ ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಲಿದೆ. ಈ ಹಿಂದೆ ಅಮೆರಿಕ, ರಷ್ಯಾ ಮತ್ತು ಚೀನಾ ತಮ್ಮ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲೆ ಇಳಿಸಿದ್ದವು.

2019ರ ಜುಲೈ 22 ರಂದು ಇಸ್ರೋ ಚಂದ್ರಯಾನ-2 ಯೋಜನೆಯನ್ನು ಉಡ್ಡಯನ ಮಾಡಿತ್ತು. ಅದಾದ ನಾಲ್ಕು ವರ್ಷಗಳ ಬಳಿಕ ಚಂದ್ರಯಾನ-3 ಯೋಜನೆಯ ಮೂಲಕ ಚಂದ್ರನ ನೆಲದ ಮೇಲೆ ಕಾಲಿಡುವ ತನ್ನ ಪ್ರಯತ್ನವನ್ನು ಮುಂದುವರಿಸಲಿದೆ. ಜುಲೈ 22 ರಂದು ಉಡ್ಡಯನವಾಗಿದ್ದ ಚಂದ್ರಯಾನ-2 ಎರಡು ತಿಂಗಳ ಬಳಿಕ ಅಂದರೆ, 2019ರ ಸೆಪ್ಟೆಂಬರ್‌ 7 ರಂದು ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಈ ವೇಳೆ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಈವರೆಗೂ ಅಗೋಚರ ಪ್ರದೇಶವಾಗಿರುವ ದಕ್ಷಿಣ ಧ್ರುವದಲ್ಲಿ ಇಳಿಯುವ ಪ್ರಯತ್ನ ಮಾಡಿತ್ತು. ಆದರೆ, ವಿಕ್ರಮ್‌ ಲ್ಯಾಂಡರ್‌ ಚಂದ್ರನ ನೆಲಕ್ಕೆ ಬೀಳುವಾಗ ಸಂಪೂರ್ಣವಾಗಿ ಕ್ರ್ಯಾಶ್‌ ಆಗಿತ್ತು. ಅಂದಿನಿಂದ ಇಸ್ರೋ ಚಂದ್ರಯಾನ-3 ಯೋಜನೆಯಲ್ಲಿ ತನ್ನ ಕೆಲಸವನ್ನು ಆರಂಭ ಮಾಡಿತ್ತು.

ಆರ್ಟೆಮಿಸ್‌ ಒಪ್ಪಂದಕ್ಕೆ ಭಾರತ ಸಹಿ: 2024ರಲ್ಲಿ ಅಮೆರಿಕ ಜೊತೆ ಅಂತ​ರಿಕ್ಷ ಕೇಂದ್ರಕ್ಕೆ ಜಂಟಿ ಪ್ರಯಾಣ

ರಷ್ಯಾದ ಯೋಜನೆ ಪೋಸ್ಟ್‌ಪೋನ್‌: ಇನ್ನೊಂದೆಡೆ, ರಷ್ಯಾ ತನ್ನ ಮೂನ್ ಲ್ಯಾಂಡರ್ ಮಿಷನ್ ಅನ್ನು ಮುಂದೂಡಿದೆ. ಮೂಲಸೌಕರ್ಯದ ಹೆಚ್ಚುವರಿ ಪರಿಶೀಲನೆಗಳನ್ನು ಪೂರ್ಣಗೊಳಿಸದ ಕಾರಣ ಇದನ್ನು ಮಾಡಲಾಗಿದೆ. 2022ರಲ್ಲಿ ರಷ್ಯಾದ ಈ ಮಿಷನ್ ತಾಂತ್ರಿಕ ಸಮಸ್ಯೆಗಳಿಂದ ಮುಂದೂಡಲ್ಪಟ್ಟಿತು. ಇಂತಹ ಪರಿಸ್ಥಿತಿಯಲ್ಲಿ ಭಾರತದ ಚಂದ್ರಯಾನ-3 ರಷ್ಯಾಕ್ಕಿಂತ ಮೊದಲು ಚಂದ್ರನ ಮೇಲೆ ಇಳಿಯುವ ಅವಕಾಶ ಪಡೆದುಕೊಂಡಿದೆ. 

ಚಂದ್ರಯಾನ - 3ಗೆ ಬಲ: ಪ್ರಮುಖ ರಾಕೆಟ್ ಎಂಜಿನ್ ಪರೀಕ್ಷೆಯಲ್ಲಿ ISROಗೆ ಯಶಸ್ಸು

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ