Moon ಸೃಷ್ಟಿಯಾಗಿದ್ದು ಕೆಲವೇ ಗಂಟೆಗಳಲ್ಲಿ..! ಚಂದ್ರನ ಸೃಷ್ಟಿ ಕುರಿತು ಹೊಸ ವಾದ

By Kannadaprabha News  |  First Published Oct 11, 2022, 9:15 AM IST

ಶತಮಾನಗಳ ಪ್ರಕ್ರಿಯೆ ಬಳಿಕ ಚಂದ್ರ ಸೃಷ್ಟಿ ಆಗಿಲ್ಲ. ಕೆಲವೇ ಗಂಟೆಗಳಲ್ಲಿ ಸೃಷ್ಟಿ ಆಗಿದೆ ಎಂದು ವಿಜ್ಞಾನಿಗಳಿಂದ ಹೊಸ ವಾದ ಆರಂಭವಾಗಿದೆ. ಭೂಮಿ- ಥೇಯಿಯಾ ಗ್ರಹದ ಡಿಕ್ಕಿಯಿಂದ ಚಂದ್ರ ಸೃಷ್ಟಿಯಾಗಿದೆ. ಇದು 450 ಶತಕೋಟಿ ವರ್ಷಗಳ ಹಿಂದಿನ ಘಟನೆ ಎಂದು ಹೇಳಲಾಗಿದೆ. 


ನ್ಯೂಯಾರ್ಕ್: ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರ, ವಿಜ್ಞಾನಿಗಳಿಗೆ ಅಗಣಿತ ಕುತೂಹಲದ ಗಣಿ, ಕವಿಗಳಿಗೆ ಪ್ರೇಮದ ಸರಕು, ಮಕ್ಕಳಿಗೆ ದೂರದ ಆಟಿಕೆ. ಇಂಥ ಚಂದ್ರನ ಉಗಮದ ಕುರಿತ ರಹಸ್ಯ ನೂರಾರು ಕೋಟಿ ವರ್ಷಗಳ ಬಳಿಕವೂ ಖಚಿತವಾಗಿ ಹೊರಬಿದ್ದಿಲ್ಲ. ಇದರ ನಡುವೆಯೇ ಇದೀಗ ವಿಜ್ಞಾನಿಗಳ ತಂಡವೊಂದು, ‘ಶತಮಾನಗಳ ಪ್ರಕ್ರಿಯೆ ಬಳಿಕ ಚಂದ್ರನ ಸೃಷ್ಟಿಯಾಗಿಲ್ಲ. ಬದಲಾಗಿ ಕೆಲವೇ ಗಂಟೆಯಲ್ಲಿ ಚಂದ್ರ ಸೃಷ್ಟಿಯಾಗಿದ್ದಾನೆ’ ಎಂಬ ಹೊಸ ಅಚ್ಚರಿಯ ಸಂಶೋಧನಾ ಮಾಹಿತಿಯನ್ನು ಹೊರಗೆಡವಿದ್ದಾರೆ.
ಇದು ಚಂದ್ರನ ಉಗಮದ ಕುರಿತು ಮತ್ತಷ್ಟು ಚರ್ಚೆ, ಕುತೂಹಲಗಳಿಗೆ ವೇದಿಕೆಯಾಗಿ ಹೊರಹೊಮ್ಮಿದೆ. ಡರ್ಹಾಮ್ ವಿಶ್ವವಿದ್ಯಾಲಯದ ‘ಇನ್‌ಸ್ಟಿಟ್ಯೂಟ್‌ ಫಾರ್‌ ಕಂಪ್ಯೂಟನೇಷನಲ್‌ ಕಾಸ್ಮೋಲಜಿ’ಯ ವಿಜ್ಞಾನಿಗಳ ತಂಡ 450 ಶತಕೋಟಿ ವರ್ಷಗಳ ಹಿಂದೆ ನಡೆದ ಸ್ಫೋಟದ ಘಟನೆಯೊಂದನ್ನು ಕಂಪ್ಯೂಟರ್‌ನಲ್ಲಿ ಮರುಸೃಷ್ಟಿ ಮಾಡುವ ಮೂಲಕ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ. ಈ ಕುರಿತ ವರದಿ ‘ದ ಆಸ್ಟ್ರೋಫಿಸಿಕಲ್‌ ಜರ್ನಲ್‌ ಲೆಟ​ರ್‍ಸ್’ ಎಂಬ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

ವಿಜ್ಞಾನಿಗಳು ಹೇಳುವುದೇನು?:
ಗುರು ಮತ್ತು ಶುಕ್ರ ಗ್ರಹದ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಂಡ ಥೇಯಿಯಾ ಎಂಬ ಗ್ರಹವೊಂದು 450 ಶತಕೋಟಿ ವರ್ಷಗಳ ಹಿಂದೆ ಏಕಾಏಕಿ ಬಂದು ಭೂಮಿಗೆ ಡಿಕ್ಕಿ ಹೊಡೆಯಿತು. ಮಂಗಳ ಗ್ರಹದ ಗಾತ್ರದಲ್ಲಿದ್ದ ಥೇಯಿಯಾ ಮತ್ತು ಭೂಮಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಎರಡೂ ಗ್ರಹಗಳಿಗೆ ಭಾರೀ ಪ್ರಮಾಣದ ಕಲ್ಲು, ಮಣ್ಣು, ಧೂಳು ಸೇರಿದಂತೆ ಇತರೆ ಪದಾರ್ಥಗಳು ಹೊರ ಚಿಮ್ಮಿದವು. ಹೀಗೆ ಹೊರಚಿಮ್ಮಿದ ವಸ್ತುಗಳು ಆರಂಭದಲ್ಲಿ ಭೂಮಿಯನ್ನು ರಿಂಗ್‌ನ ರೂಪದಲ್ಲಿ ಸುತ್ತುವರೆದು, ಬಳಿಕ ಕೆಲವೇ ಗಂಟೆಗಳಲ್ಲಿ ಗ್ರಹದ ರೂಪ ಪಡೆದುಕೊಂಡಿತು ಎಂಬುದು ವಿಜ್ಞಾನಿಗಳ ವಾದ.

Latest Videos

undefined

ಇದನ್ನು ಓದಿ: Special 3 Circle: ಚಂದ್ರನಲ್ಲಿ ಇನ್ಮುಂದೆ ಬೆಳೆಯಲಿದೆ ತರಕಾರಿ ಹಣ್ಣು, ಹಂಪಲು!

ಚಂದ್ರನ ಉಗಮದ ಕುರಿತ ಈ ಹಿಂದಿನ ಸಿದ್ಧಾಂತಗಳು, ಭೂಮಿ ಮತ್ತು ಚಂದ್ರನ ಕೆಲವು ಗುಣಲಕ್ಷಣಗಳು ಒಂದೇ ರೀತಿಯ ಇರುವ ಕುತೂಲಹದ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಿದ್ದವು. ಆದರೆ ಇದೀಗ ಹೊಸದಾಗಿ ಮಂಡಿಸಲಾಗಿರುವ ಸಿದ್ಧಾಂತಗಳು ಇಂಥ ಕುತೂಹಲದ ಮತ್ತಷ್ಟು ಬೆಳಕು ಚೆಲ್ಲಲು ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: ಇದು ಚಂದ್ರನ ಈವರೆಗಿನ ಅತ್ಯಂತ ಸ್ಪಷ್ಟ ಚಿತ್ರ, ಒಂದು ಚಿತ್ರಕ್ಕಾಗಿ ಎರಡು ವರ್ಷ ಶ್ರಮ!

click me!